-->
ಒಮ್ಮೆ ಈ ಬ್ಯುಸಿನೆಸ್ ಸೆಟ್ಅಪ್ ಆದರೆ ಪ್ರತೀ ತಿಂಗಳು 4ಲಕ್ಷ ರೂ. ಆದಾಯ - ಸದ್ಯ ಇದು ಟ್ರೆಂಡಿಂಗ್ ಸ್ಟಾರ್ಟ್ಅಪ್

ಒಮ್ಮೆ ಈ ಬ್ಯುಸಿನೆಸ್ ಸೆಟ್ಅಪ್ ಆದರೆ ಪ್ರತೀ ತಿಂಗಳು 4ಲಕ್ಷ ರೂ. ಆದಾಯ - ಸದ್ಯ ಇದು ಟ್ರೆಂಡಿಂಗ್ ಸ್ಟಾರ್ಟ್ಅಪ್



ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗಿನ ಕಚೇರಿ ಕೆಲಸವೋ, ಸರ್ಕಾರಿ ಕೆಲಸವೋ ಮಾಡಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಸರ್ಕಾರಿ ಉದ್ಯೋಗ ದೊರಕದಿದ್ದಾಗ, ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಬೇಕೆಂದು ಯುವ ಸಮುದಾಯ ಮುಖ ಮಾಡುತ್ತದೆ. ಆದರೆ ಬಹುತೇಕ ಮಂದಿ ಈ ಕೆಲಸ ಒತ್ತಡದಿಂದ ಹೊರಬಂದು ತಮ್ಮದೇ ಆದ ಸ್ವಂತ ಉದ್ಯೋಗ ಆರಂಭಿಸಬೇಕೆಂದು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಕೆಲವು ಉದ್ಯೋಗ ಅಥವಾ ಸ್ಟಾರ್ಟ್‌ಅಪ್ ಹೇಗೆ ಆದಾಯ ನೀಡುತ್ತದೆ? ಇಡೀ ವರ್ಷ ಇದರಿಂದ ಆದಾಯ ನಿರೀಕ್ಷೆ ಮಾಡಬಹುದಾ ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. 

ಒಂದು ಕಾಲದಲ್ಲಿ ಎಸ್‌ಟಿಡಿ ಬೂತ್ ಉತ್ತಮ ಸ್ಟಾರ್ಟ್‌ಅಪ್ ಆಗಿತ್ತು. ಆದರೆ ಇಂದು ಈ ಬ್ಯುಸಿನೆಸ್ ಮಾಡೋಕೆ ಯಾರೂ ಮುಂದಾಗುತ್ತಿಲ್ಲ. ಹಾಗೆ ಕಾಲ ಬದಲಾದಂತೆ ಒಂದಿಷ್ಟು ವ್ಯವಹಾರಗಳು ವ್ಯಾಲಿಡಿಟಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಟ್ರೆಂಡಿಂಗ್‌ ಮತ್ತು ಬಹುವರ್ಷ ಆದಾಯ ತಂದುಕೊಡಬಲ್ಲ ವ್ಯವಹಾರಗಳನ್ನು ಆರಂಭಿಸಬೇಕು. ಇಂದು ನಾವು ನಿಮಗೆ ಸದ್ಯದ ಟ್ರೆಂಡಿಂಗ್ ಸ್ಟಾರ್ಟ್‌ಅಪ್ ಬಗ್ಗೆ ಹೇಳುತ್ತಿದ್ದೇವೆ. 

ಈ ಟ್ರೆಂಡಿಂಗ್ ಬ್ಯುಸಿನೆಸ್ ಒಮ್ಮೆ ಸೆಟ್‌ಅಪ್ ಮಾಡಿಕೊಂಡ್ರೆ ಪ್ರತಿ ತಿಂಗಳು 4 ಲಕ್ಷ ರೂ. ಆದಾಯ ಗಳಿಸಬಹುದು. ತಿಂಗಳ ವೆಚ್ಚಗಳನ್ನು ತೆಗೆದರೂ ನಿಮಗೆ ದ್ವಿಗುಣ ಲಾಭ ಸಿಗುತ್ತದೆ. ನಗರ ಅಥವಾ ಅರೆ-ನಗರ ಪ್ರದೇಶಗಳಲ್ಲಿ ಈ ವ್ಯವಹಾರ ಆರಂಭಿಸಬಹುದು. ಮಕ್ಕಳು ಮತ್ತು ಯುವ ಸಮುದಾಯವೇ ನಿಮ್ಮ ಗ್ರಾಹಕರಾಗಿರುತ್ತಾರೆ. ರಜಾದಿನಗಳಲ್ಲಿ ಹೆಚ್ಚು ವ್ಯವಹಾರವಾಗುತ್ತದೆ. ಗಂಟೆಗಳ ಲೆಕ್ಕದಲ್ಲಿ ಗ್ರಾಹಕರಿಗೆ ಚಾರ್ಜ್ ಮಾಡಬಹುದು. 

ಸದ್ಯ ಟ್ರೆಂಡಿಂಗ್ ಬ್ಯುಸಿನೆಸ್ ಅಂದ್ರೆ ಅದು ವಿಆರ್ ಕೆಫೆ. ಈ ಬ್ಯುಸಿನೆಸ್ ಆರಂಭಿಸಲು ಕನಿಷ್ಠ ಎರಡು ಕೋಣೆಗಳ ಅವಶ್ಯಕತೆ ಇರುತ್ತದೆ. ವಿಆರ್ (virtual reality) ಕೆಫೆ ಮೂಲಕ ಗ್ರಾಹಕರಿಗೆ ವರ್ಚುವಲ್ ಅನುಭವ ನೀಡುವದಾಗಿದೆ. ಒಂದು ಕೋಣೆಯಲ್ಲಿ ಕಾಶ್ಮೀರದಲ್ಲಿನ ತಾಪಮಾನ ನಿರ್ಮಿಸಬೇಕು. ಇದಕ್ಕಾಗಿ ಸ್ಪೆಷಲ್ ಪೀಠೋಪಕರಣ, ಸುಧಾರಿತ ತಂತ್ರಜ್ಞಾನದ ಬಳಕೆ ಮಾಡಬೇಕಾಗುತ್ತದೆ. ಕೋಣೆಯೊಳಗೆ ಬರುತ್ತಿದ್ದಂತೆ ಗ್ರಾಹಕರಿಗೆ ಕಾಶ್ಮೀರಕ್ಕೆ ಬಂದಂತ ಅನುಭವ ಬರಬೇಕು. ನಂತರ VR Headset ಕಣ್ಣಿಗೆ ಕಟ್ಟಿಕೊಳ್ಳುವಂತೆ ಹೇಳಬೇಕು. ನಂತರ ಕಾಶ್ಮೀರದ ಪ್ರವಾಸಿ ತಾಣಗಳ ಹೈಕ್ವಾಲಿಟಿ ವಿಡಿಯೋ ಪ್ಲೇ ಮಾಡಬೇಕು.

ಈ ಸಂದರ್ಭದಲ್ಲಿ ಕೋಣೆಯ ತಾಪಮಾನ ಅಲ್ಲಿ ಪ್ಲೇ ಆಗುತ್ತಿರುವ ದೃಶ್ಯದ ರೀತಿಯಲ್ಲಿ ಬದಲಾಯಿಸುತ್ತಿರಬೇಕು. ಇದರಿಂದ ಗ್ರಾಹಕರಿಗೆ ಕಾಶ್ಮೀರಕ್ಕೆ ತೆರಳಿ ಅಲ್ಲಿ ಪ್ರವಾಸಿ ತಾಣ ನೋಡಿದಂತೆ ಆಗಬೇಕು. ಹಾಗಾದಾಗ ಮಾತ್ರ ನಿಮ್ಮ ವಿಆರ್ ಕೆಫೆ ಬ್ಯುಸಿನೆಸ್ ಯಶಸ್ವಿಯಾಗುತ್ತದೆ. 

ಕಾಶ್ಮೀರದೊಂದಿಗೆ ದೇಶದ ಪ್ರಮುಖ ಸ್ಥಳಗಳ ಆಫರ್ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಬಹುದು. ಸದ್ಯ ವಿಆರ್ ಕೆಫೆಗಳು ಗಂಟೆಗೆ 300ರಿಂದ 500 ರೂ. ಶುಲ್ಕ ವಿಧಿಸುತ್ತಿವೆ. ಅಡ್ವಾನ್ಸ್‌ಡ್ ಟೆಕ್ನಾಲಜಿ ವಿಆರ್ ಕೆಫೆ ನಿರ್ಮಾಣಕ್ಕೆ ಆರಂಭದಲ್ಲಿ 15 ಲಕ್ಷ ರೂ.ವರೆಗೆ ಬಂಡವಾಳ ಹೂಡಿಕೆ ಮಾಡಬೇಕು. ಮೂರರಿಂದ ನಾಲ್ಕು ಗ್ರಾಹಕರ ಬ್ಯಾಚ್‌ನಂತೆ ದಿನಕ್ಕೆ  10-12 ಶೋ ಮಾಡಬಹುದು. ದಿನಕ್ಕೆ 50 ಗ್ರಾಹಕರು ಬಂದರೂ 15,000 ರೂಪಾಯಿ ಸಂಪಾದಿಸಬಹುದು. ಅಂದರೆ ತಿಂಗಳಿಗೆ 4,50,000 ರೂ. ಆಗುತ್ತದೆ. ತಿಂಗಳ ಖರ್ಚು ಎಂದು 2 ಲಕ್ಷ ತೆಗೆದರೂ ನಿಮಗೆ 2.5 ಲಕ್ಷ ರೂ. ಲಾಭವಾಗುತ್ತದೆ.

Ads on article

Advertise in articles 1

advertising articles 2

Advertise under the article