-->
ಖರೀದಿಸಿದ್ದು 5ಲಕ್ಷ ಮೊತ್ತದ ಷೇರು, 4ವರ್ಷಗಳಲ್ಲಿ 27ಕೋಟಿ ರೂ. ಐಸ್‌ಕ್ರೀಂ ಮಾರಾಟಗಾರ ಇಂದು ಕೋಟ್ಯಾಧಿಪತಿ

ಖರೀದಿಸಿದ್ದು 5ಲಕ್ಷ ಮೊತ್ತದ ಷೇರು, 4ವರ್ಷಗಳಲ್ಲಿ 27ಕೋಟಿ ರೂ. ಐಸ್‌ಕ್ರೀಂ ಮಾರಾಟಗಾರ ಇಂದು ಕೋಟ್ಯಾಧಿಪತಿ


ಮುಂಬೈ: ಷೇರು ಮಾರುಕಟ್ಟೆಯಲ್ಲಿ ಕೆಲವೇ ವರ್ಷಗಳಲ್ಲಿ ಶೂನ್ಯದಿಂದ ಶಿಖರಕ್ಕೇರಿದ ಹೂಡಿಕೆದಾರರಿದ್ದಾರೆ. ಸಣ್ಣ ಹೂಡಿಕೆಯಿಂದ ಷೇರು ಮಾರುಕಟ್ಟೆಗೆ ಬಂದಿರುವ ಹಲವರು ಇಂದು ಕೋಟ್ಯಧಿಪತಿಗಳಾಗಿದ್ದಾರೆ. ಇಂದು ನಾವು ಇಂತಹದ್ದೇ ಡಾಲಿ ಖನ್ನಾ ಮತ್ತು ರಾಜೀವ್ ಖನ್ನಾ ದಂಪತಿ ಕುರಿತು ಹೇಳುತ್ತಿದ್ದೇವೆ. ಡಾಲಿ ಖನ್ನಾ ಅವರ ಪೋರ್ಟ್‌ಫೋಲಿಯೊವನ್ನು ಅವರ ಪತಿ ರಾಜೀವ್ ನಿರ್ವಹಿಸುತ್ತಾರೆ. ರಾಜೀವ್ ಖನ್ನಾ ಷೇರುಗಳಲ್ಲಿ ಸರಿಯಾದ ಸಮಯದಲ್ಲಿ ಪ್ರವೇಶ ಮತ್ತು ನಿರ್ಗಮನದ ಮೂಲಕ ಕೋಟಿಗಟ್ಟಲೆ ಗಳಿಸಿದ ವ್ಯಕ್ತಿಯಾಗಿದ್ದಾರೆ.


ರಾಜೀವ್ ಖನ್ನಾ 1986ರಲ್ಲಿ ಕ್ವಾಲಿಟಿ ಮಿಲ್ಕ್ ಫುಡ್ಸ್ ಆ್ಯಂಡ್ ಐಸ್‌ಕ್ರೀಮ್ ಕಂಪನಿ ಆರಂಭಿಸಿದರು. ಐಸ್ ಕ್ರೀಮ್ ಮಾರಾಟ ಮೂಲಕ ಮಾರುಕಟ್ಟೆ ಪ್ರವೇಶಿಸಿದರು. ನಂತರ 1995ರಲ್ಲಿ ಕ್ವಾಲಿಟಿ ಮಿಲ್ಕ್ ಫುಡ್ಸ್ ಅಂಡ್ ಐಸ್ ಕ್ರೀಮ್ ಕಂಪೆನಿಯನ್ನು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ಗೆ ಮಾರಿ ದೊಡ್ಡ ಮೊತ್ತದ ಲಾಭವನ್ನು ತಮ್ಮದಾಗಿಸಿಕೊಂಡರು. ಈ ಮಾರಾಟದಿಂದ ಬಂದ ಲಾಭವನ್ನು ಆರಂಭದಲ್ಲಿ ಎಲ್ಲಿಯೂ ಹೂಡಿಕೆ ಮಾಡದೇ ಫಿಕ್ಸೆಡ್ ಡಿಪಾಸಿಟ್‌ ಆಗಿ ಇರಿಸಿದರು. 


1996ರಲ್ಲಿ ರಾಜೀವ್ ಖನ್ನಾ ಹವ್ಯಾಸಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದರು. ಸತ್ಯಂ ಕಂಪ್ಯೂಟರ್ಸ್ ಹೆಸರಿನ ಕಂಪೆನಿಯಲ್ಲಿ ಮೊದಲ ಬಾರಿಗೆ ರಾಜೀವ್ ಖನ್ನಾ ಹೂಡಿಕೆ ಮಾಡಿದರು. ತಂತ್ರಜ್ಞಾನ ಕಂಪೆನಿಯಲ್ಲಿ ಹೂಡಿಕೆ ಮಾಡುವ ದೊಡ್ಡ ಮೊತ್ತದ ಹಣ ಗಳಿಸಬಹುದು ಎಂದು ತಿಳಿದುಕೊಂಡ ರಾಜೀವ್ ಖನ್ನಾ ಹಲವಾರು ತಂತ್ರಜ್ಞಾನ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಲು ಆರಂಭಿಸಿದರು. 1996ರಲ್ಲಿ ಹೂಡಿಕೆ ಮಾಡಿದ ಹಣವು 4 ವರ್ಷಗಳ ಬಳಿಕ ಅಂದ್ರೆ 2000ದಲ್ಲಿ ಮೂರು ಪಟ್ಟು ಹೆಚ್ಚಾಯ್ತು. ಈ ಸಮಯದಲ್ಲಿ ರಾಜೀವ್ ಖನ್ನಾ ಹಣ ಹಿಂಪಡೆದುಕೊಂಡರು.


ರಾಜೀವ್ ಖನ್ನಾ ಹಣ ಹಿಂಪಡೆದುಕೊಂಡ ಕೆಲ ಸಮಯದ ಬಳಿಕ ಷೇರುಗಳ ಮೌಲ್ಯ ಕುಸಿಯಲಾರಂಭಿಸಿದರು. ಹಣ ಹಿಂತೆಗೆದುಕೊಂಡಿದ್ದರಿಂದ ರಾಜೀವ್ ಖನ್ನಾ 2000ರಲ್ಲಿ ದೊಡ್ಡ ಮೊತ್ತದ ನಷ್ಟದಿಂದ ಪಾರಾದರು. ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿದ್ದಾಗ ರಿಸ್ಕ್ ತೆಗೆದುಕೊಳ್ಳದ ರಾಜೀವ್ ಖನ್ನಾ ಹಣವನ್ನು ಮತ್ತೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿದರು.


2003ರಲ್ಲಿ ರಾಜೀವ್ ಖನ್ನಾ ದೆಹಲಿಯಲ್ಲಿ ಒಂದು ಫ್ಲಾಟ್ ಖರೀದಿಸಲು ಬಯಸಿದ್ದರು, ಇದಕ್ಕಾಗಿ ಅವರು ರಿಯಲ್ ಎಸ್ಟೇಟ್ ಕಂಪನಿ ಯುನಿಟೆಕ್ ಕಚೇರಿಗೆ ಭೇಟಿ ನೀಡಿದರು. ಯುನಿಟೆಕ್‌ನ ಐಷಾರಾಮಿ ಕಚೇರಿಯನ್ನು ನೋಡಿದಾಗ, ಅವರು ಅದರ ಬಗ್ಗೆ ಸ್ವಲ್ಪ ಸಂಶೋಧನೆ ನಡೆಸಿ ಕೆಲವೇ ದಿನಗಳಲ್ಲಿ ಆ ಕಂಪನಿಯ 5 ಲಕ್ಷದ ಮೌಲ್ಯದ ಷೇರುಗಳನ್ನು ಖರೀದಿಸಿದರು. 2004 ರಲ್ಲಿ ಯುನಿಟೆಕ್‌ನ ಒಂದು ಷೇರಿನ ಬೆಲೆ ಕೇವಲ 1.10 ರೂಪಾಯಿ ಆಗಿತ್ತು. 4 ವರ್ಷಗಳ ನಂತರ 2008ರಲ್ಲಿ ಅದರ ಒಂದು ಷೇರಿನ ಬೆಲೆ 546 ರೂಪಾಯಿಗಳಿಗೆ ಏರಿತು. ಹೀಗಾಗಿ ರಾಜೀವ್ ಖನ್ನಾ ಅವರ 5 ಲಕ್ಷ ರೂಪಾಯಿಗಳು ಕೇವಲ 4 ವರ್ಷಗಳಲ್ಲಿ 25 ಕೋಟಿ ರೂಪಾಯಿಗಳಾದವು.


2008ರಲ್ಲಿ ಉಂಟಾದ ಜಾಗತಿಕ ಹಣಕಾಸಿನ ಬಿಕ್ಕಟ್ಟಿನಲ್ಲಿ ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳು ಕುಸಿದವು. ಆದರೆ ರಾಜೀವ್ ಖನ್ನಾ ಈ ಕುಸಿತಕ್ಕೆ ಮೊದಲೇ ತಮ್ಮ ಎಲ್ಲಾ ಹಣವನ್ನು ಹಿಂಪಡೆದಿದ್ದರು. ಯಾವ ಷೇರಿನಲ್ಲಿ ಯಾವಾಗ ಪ್ರವೇಶಿಸಬೇಕು ಮತ್ತು ಯಾವಾಗ ನಿರ್ಗಮಿಸಬೇಕು ಎಂಬುದನ್ನು ರಾಜೀವ್ ಖನ್ನಾ ಅವರಿಂದ ಕಲಿಯಬಹುದು. ಈ ತಂತ್ರವನ್ನು ಕಲಿತವರು ಮಾತ್ರ ಷೇರು ಮಾರುಕಟ್ಟೆಯಲ್ಲಿ ಉಳಿಯಬಹುದು. ರಾಜೀವ್ ಖನ್ನಾ ಹಣ ಗಳಿಸಿದ ಯುನಿಟೆಕ್ ಷೇರಿನ ಬೆಲೆ ಇಂದು ಕೇವಲ 9 ರೂಪಾಯಿಗಳಿಗೆ ಇಳಿದಿದೆ.


Disclaimer: ಷೇರು/ಮ್ಯೂಚುವಲ್‌ ಫಂಡ್‌ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ, ದಯವಿಟ್ಟು ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಈ ಮುಂಗಾರು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.


Ads on article

Advertise in articles 1

advertising articles 2

Advertise under the article