ಭಾರತೀಯ ಸೇನೆಯಲ್ಲಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ ತಿಂಗಳಿಗೆ 56,100ರೂ. ವೇತನ
ಭಾರತೀಯ ಸೇನೆಯ ಅಡ್ವೊಕೇಟ್ ಜನರಲ್ ವಿಭಾಗಕ್ಕೆ ಶಾರ್ಟ್ ಸರ್ವಿಸ್ ಕಮಿಷನ್ ನೇಮಕಾತಿ ನಡೆಸುವ ಬಗ್ಗೆ ಅಧಿಸೂಚನೆ ಘೊಷಿಸಲಾಗಿದೆ. ಅವಿವಾಹಿತ ಪುರುಷ ಮತ್ತು ಮಹಿಳಾ ಕಾನೂನು ಪದವೀಧರರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಎಲ್‌ಎಲ್‌ಬಿ ಪದವಿಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ಭಾರತೀಯ ಸೇನೆಯ ಅಡ್ವೊಕೇಟ್ ಜನರಲ್ ನಲ್ಲಿ 08 ಹುದ್ದೆಗಳು ಖಾಲಿಯಿವೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ದಿನಾಂಕದಿಂದ ಆರು ತಿಂಗಳುಗಳ ಕಾಲ ಪ್ರೊಬೇಷನರಿ ಅವಧಿಯನ್ನು ಪೂರ್ಣಗೊಳಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA)ಯಲ್ಲಿ 49 ವಾರಗಳ ತರಬೇತಿ ಪಡೆಯಬೇಕು.
ತರಬೇತಿ ಅವಧಿಯಲ್ಲಿ, ಅಭ್ಯರ್ಥಿಗಳು ತಿಂಗಳಿಗೆ 56,100 ರೂ. ಸ್ಟೈಫಂಡ್ ಪಡೆಯುತ್ತಾರೆ. ಆಯ್ಕೆ ಪ್ರಕ್ರಿಯೆಯು 2ಹಂತಗಳನ್ನು ಒಳಗೊಂಡಿದೆ. ಸರ್ವೀಸ್ ಸೆಲೆಕ್ಷನ್ ಬೋರ್ಡ್ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಎಲ್ಲಾ ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಕೊನೆಯ ದಿನಾಂಕದ ಮೊದಲು ಸಲ್ಲಿಸಬೇಕು.
ಭಾರತೀಯ ಸೇನಾ ನೇಮಕಾತಿ 2024ಕ್ಕೆ ಅರ್ಹತೆ: ಭಾರತೀಯ ಸೇನಾ ನೇಮಕಾತಿ 2024ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ಅರ್ಹತೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ತಮ್ಮ ಎಲ್‌ಎಲ್‌ಬಿ ಪದವಿಯಲ್ಲಿ 55% ಅಂಕಗಳನ್ನು ಪಡೆದಿರಬೇಕು (ಪದವಿ ಬಳಿಕ 3 ವರ್ಷಗಳಲ್ಲಿ ಅಥವಾ 10 + 2 ನಂತರ 5 ವರ್ಷಗಳಲ್ಲಿ). ಅಲ್ಲದೆ, ಅಭ್ಯರ್ಥಿಗಳು ಬಾರ್ ಕೌನ್ಸಿಲ್ ಆಫ್ ಇಂಡಿಯಾ/ರಾಜ್ಯದಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳಲು ಅರ್ಹರಾಗಿರಬೇಕು. ಅಭ್ಯರ್ಥಿಗಳು ಭಾರತೀಯ ಬಾರ್ ಕೌನ್ಸಿಲ್‌ನಿಂದ ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ದಿನಾಂಕದಿಂದ ಆರು ತಿಂಗಳುಗಳ ಪ್ರೊಬೇಷನರಿ ಅವಧಿಯನ್ನು ಪೂರ್ಣಗೊಳಿಸಬೇಕು.
ವಯಸ್ಸಿನ ಮಿತಿ: ಭಾರತೀಯ ಸೇನಾ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 21 ವರ್ಷಕ್ಕಿಂತ ಕಡಿಮೆ ಮತ್ತು 27 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬಾರದು.
ತರಬೇತಿ ಅವಧಿ 2024: ಭಾರತೀಯ ಸೇನಾ ನೇಮಕಾತಿ 2024ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA)ಯಲ್ಲಿ 49 ವಾರಗಳ ತರಬೇತಿ ಪಡೆಯಬೇಕು.
ಸಂಬಳ: ಭಾರತೀಯ ಸೇನಾ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ತಿಂಗಳಿಗೆ ₹56,100 ಸ್ಟೈಫಂಡ್ ಪಡೆಯುತ್ತಾರೆ.
ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ 30.10.2024
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 28.11.2024 ಸಂಜೆ 3 ಗಂಟೆ
ಆಯ್ಕೆ ಪ್ರಕ್ರಿಯೆ: ಭಾರತೀಯ ಸೇನಾ ನೇಮಕಾತಿ 2024ರ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಒಳಗೊಂಡಿದೆ; ಸರ್ವೀಸ್ ಸೆಲೆಕ್ಷನ್ ಬೋರ್ಡ್ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ.
ಪ್ರಯಾಗ್‌ರಾಜ್ (ಯುಪಿ), ಭೋಪಾಲ್ (ಎಂಪಿ), ಬೆಂಗಳೂರು (ಕರ್ನಾಟಕ) ಮತ್ತು ಜಲಂಧರ್ (ಪಿಬಿ)ಯಲ್ಲಿರುವ ಆಯ್ಕೆ ಕೇಂದ್ರಗಳಲ್ಲಿ, ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಎಸ್‌ಎಸ್‌ಬಿ ಸಂದರ್ಶನಕ್ಕೆ ಕರೆ ಪತ್ರವನ್ನು ಆಯಾ ಆಯ್ಕೆ ಕೇಂದ್ರವು ಅಭ್ಯರ್ಥಿಯ ನೋಂದಾಯಿತ ಇಮೇಲ್ ಐಡಿ ಮತ್ತು SMS ಮೂಲಕ ಕಳುಹಿಸುತ್ತದೆ. ಅಭ್ಯರ್ಥಿಗಳನ್ನು ಎರಡು ಹಂತದ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮೊದಲ ಹಂತದಲ್ಲಿ ಉತ್ತೀರ್ಣರಾದವರು ಮುಂದಿನ ಹಂತಕ್ಕೆ ಹೋಗುತ್ತಾರೆ.