-->
ಮೆಕ್ಸಿಕೊ ಅರಣ್ಯದಲ್ಲಿ ಕಣ್ಮರೆಯಾಗಿದ್ದ 6,764 ಕಟ್ಟಡಗಳಿರುವ ಮಾಯನ್ ನಗರ ಪತ್ತೆ

ಮೆಕ್ಸಿಕೊ ಅರಣ್ಯದಲ್ಲಿ ಕಣ್ಮರೆಯಾಗಿದ್ದ 6,764 ಕಟ್ಟಡಗಳಿರುವ ಮಾಯನ್ ನಗರ ಪತ್ತೆ


ಪುರಾತತ್ವಶಾಸ್ತ್ರಜ್ಞರು ಇತ್ತೀಚೆಗೆ ಮೆಕ್ಸಿಕೋದ ದಕ್ಷಿಣ ಕ್ಯಾಂಪಿಚೆಯ ಅರಣ್ಯದಲ್ಲಿ ಭಾರೀ ಅದ್ಭುತವೊಂದನ್ನು ಪತ್ತೆಹಚ್ಚಿಹಿಡಿದಿದ್ದಾರೆ. ಲೋಕದ ಕಣ್ಣಿಗೆ ಬೀಳದೆ ಕಾಡಿನಲ್ಲಿ ಅಡಗಿ ಕುಳಿತಿದ್ದ ವಿಶಾಲವಾದ ಮಾಯನ್ ನಗರಿಯೊಂದು ಆಕಸ್ಮಿಕವಾಗಿ ಪತ್ತೆಯಾಗಿದೆ ಎಂದು ವರದಿಗಳು ಹೇಳುತ್ತಿದೆ.


'ವಲೇರಿಯಾನ' ಎಂದು ನಗರಕ್ಕೆ ಹೆಸರಿಡಲಾಗಿದೆ. ದೇವಾಲಯಗಳು, ಪಿರಮಿಡ್‌ಗಳಿಂದ ತುಂಬಿರುವ ಈ ನಗರ ಸಂಶೋಧಕರಿಗೆ ಅಚ್ಚರಿಯನ್ನು ಮೂಡಿಸಿದೆ. ಲಿಡಾರ್ ಎಂಬ ತಂತ್ರಜ್ಞಾನ ಬಳಸಿ ಈ ನಗರವನ್ನು ಪತ್ತೆಹಚ್ಚಲಾಗಿದೆ. ಸಾವಿರಾರು ವರ್ಷಗಳಿಂದ ಯಾರಿಗೂ ತಿಳಿಯದೆ ಅಡಗಿ ಕುಳಿತಿದ್ದ ನಗರ ಆಕಸ್ಮಿಕವಾಗಿ ಪತ್ತೆಯಾಗಿದೆ. ಇದುವರೆಗೆ ಪತ್ತೆಯಾದ ಎರಡನೇ ಅತಿ ದೊಡ್ಡ ಮಾಯನ್ ಸಾಂಸ್ಕೃತಿಕ ಕೇಂದ್ರ ಇದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. 'ಕಲಾಕ್ಮುಲ್ ನಗರ' ಪತ್ತೆಯಾದವುಗಳಲ್ಲಿ ಅತಿ ದೊಡ್ಡದಾಗಿತ್ತು.


ವಲೇರಿಯಾನದ ಪತ್ತೆಗೆ ಕೇವಲ ಐತಿಹಾಸಿಕ ಮಹತ್ವ ಮಾತ್ರವಲ್ಲ. ಮಾಯನ್ ನಾಗರಿಕತೆ ಮತ್ತು ಅದರ ನಗರ ವಿಸ್ತರಣೆಯ ಬಗ್ಗೆ ವಿವರವಾದ ಮಾಹಿತಿ ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ.


6,764 ಕಟ್ಟಡಗಳು ವಲೇರಿಯಾನದಲ್ಲಿ ಪತ್ತೆಯಾಗಿದೆ. ಇದು ವಲೇರಿಯಾನ ಜನನಿಬಿಡ ಪ್ರದೇಶವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಸಕ್ರಿಯ ಸಮುದಾಯ ಇಲ್ಲಿ ವಾಸವಾಗಿದ್ದಿರಬಹುದು. ದೊಡ್ಡ ದೇವಾಲಯಗಳು, ಪಿರಮಿಡ್‌ಗಳು, ಕ್ರೀಡಾ ಸೌಲಭ್ಯಗಳು ಎಲ್ಲವನ್ನೂ ಇಲ್ಲಿ ಕಾಣಬಹುದು.


ಆರ್ಥಿಕವಾಗಿ, ಧಾರ್ಮಿಕವಾಗಿ, ಕ್ರೀಡಾಪರವಾಗಿ ಸಮೃದ್ಧವಾಗಿದ್ದ ಸ್ಥಳ ಇದಾಗಿತ್ತು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಅಲ್ಲದೆ, ಇಲ್ಲಿನ ಜನರು ಕೃಷಿ ಮಾಡುತ್ತಿದ್ದರು ಮತ್ತು ಅದರಿಂದ ಜೀವನ ನಡೆಸುತ್ತಿದ್ದರು ಎಂದು ಊಹಿಸಲಾಗಿದೆ.


ಯುಕಾಟಾನ್ ಪರ್ಯಾಯ ದ್ವೀಪ, ಮೆಕ್ಸಿಕೊ, ಗ್ವಾಟೆಮಾಲ, ಎಲ್ ಸಾಲ್ವಡಾರ್, ಹೊಂಡುರಾಸ್ ಮುಂತಾದ ಪ್ರದೇಶಗಳಲ್ಲಿ ಅಮೇರಿಕನ್-ಇಂಡಿಯನ್ ಸಂಸ್ಕೃತಿಯಾದ ಮಾಯನ್ ಸಂಸ್ಕೃತಿ ಅಸ್ತಿತ್ವದಲ್ಲಿತ್ತು. ಇದು ಸರಿಸುಮಾರು 250 ರಿಂದ 900 AD ವರೆಗೆ ಅಭಿವೃದ್ಧಿ ಹೊಂದಿತ್ತು ಎಂದು ನಂಬಲಾಗಿದೆ.


(


Ads on article

Advertise in articles 1

advertising articles 2

Advertise under the article