ಮೂಡುಬಿದಿರೆ: ಅಂತರ ಕಾಲೇಜು ಕುಸ್ತಿ ಸ್ಪರ್ಧೆ - ಮೂಡುಬಿದಿರೆಯ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
Monday, November 18, 2024
ಮೂಡುಬಿದಿರೆ: ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕುಸ್ತಿ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ 14 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ನಿಖಿಲ್ (61 ಕೆ.ಜಿ. ವಿಭಾಗ) ದ್ವಿತೀಯ, ಗುಡ್ಡಪ್ಪ (61 ಕೆ.ಜಿ) ತೃತೀಯ, ರಾಕೇಶ್ (65 ಕೆ.ಜಿ) ಪ್ರಥಮ, ಶಿವರಾಜು (70 ಕೆ.ಜಿ) ಪ್ರಥಮ, ಸುರೇಂದ್ರ (74 ಕೆ.ಜಿ) ದ್ವಿತೀಯ, ಚೇತನ್ (79 ಕೆ.ಜಿ) ಪದ ಪ್ರಥಮ, ಕೀರ್ತಿ (86 ಕೆ.ಜಿ) ಪ್ರಥಮ, ಪ್ರಜ್ವಲ್ (92 ಕೆ.ಜಿ) ಪ್ರಥಮ, ಕಾರ್ತಿಕ್ ಮಾ (97 ಕೆ.ಜಿ. ) ಪ್ರಥಮ, ಬಸವರಾಜು (97 + ಕೆ.ಜಿ) ಪ್ರಥಮ ಬಹುಮಾನ ಗಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಶ್ಯಾಮಲಾ (50 ಕೆ.ಜಿ ) ಪ್ರಥಮ, ಚಂದ್ರಿಕಾ (53 ಕೆ.ಜಿ) ಪ್ರಥಮ, ಮನ್ವಿತಾ (57 ಕೆಜಿ) ತೃತೀಯ, ಚೈತ್ರಾ (59 ಕೆ.ಜಿ) ಪ್ರಥಮ, ದೀಪಾ (62 ಕೆ.ಜಿ) ಪ್ರಥಮ, ಮಾನ್ಯ (65 ಕೆ.ಜಿ) ಪ್ರಥಮ, ನೇಹಾ (68 ಕೆ.ಜಿ) ಪ್ರಥಮ, ವೈಶಾಲಿ (72 ಕೆ.ಜಿ) ದ್ವಿತೀಯ, ಧನ್ಯಾ (76 ಕೆ.ಜಿ) ಪ್ರಥಮ ಬಹುಮಾನ ಗಳಿಸಿದ್ದಾರೆ.