ಪರೀಕ್ಷೆ ಬರೆಯದೆಯೇ ಬ್ಯಾಂಕ್ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯ: ಅರ್ಹತೆ ಏನು ಗೊತ್ತೇ?
ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ಎಲ್ಲರಿಗೂ ಆಸೆ ಇರುತ್ತದೆ. ಆದರೆ ಎಷ್ಟೇ ತಯಾರಿ ಮಾಡಿದರೂ ಬಹಳಷ್ಟು ಜನ ಲಿಖಿತ ಪರೀಕ್ಷೆಯಲ್ಲಿಯೇ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಆದರೆ, ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆಯೇ ಬ್ಯಾಂಕ್ ಕೆಲಸ ಪಡೆಯುವ ಅವಕಾಶವಿದೆ ಎಂದು ನಿಮಗೆ ತಿಳಿದಿದೆಯೇ? ಯಾವ ಬ್ಯಾಂಕ್..? ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈಗ ನೋಡೋಣ…
ಇಂಡಿಯನ್ ಬ್ಯಾಂಕ್ ಪರೀಕ್ಷೆ ಇಲ್ಲದಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ನೀವು ಕೂಡ ಬ್ಯಾಂಕ್ ಕೆಲಸವನ್ನು ಪಡೆಯಲು ಬಯಸಿದರೆ, ಇದು ನಿಜವಾಗಿಯೂ ನಿಮಗೆ ಉತ್ತಮ ಅವಕಾಶ. ಇತ್ತೀಚೆಗೆ, ಇಂಡಿಯನ್ ಬ್ಯಾಂಕ್ ಹಣಕಾಸು ಸಾಕ್ಷರತಾ ಸಲಹೆಗಾರ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗೆ ಸೂಕ್ತ ಅರ್ಹತೆಗಳು ನಿಮ್ಮಲ್ಲಿವೆ ಎಂದು ನೀವು ಭಾವಿಸಿದರೆ, ನೀವು ತಕ್ಷಣ ಅರ್ಜಿ ಸಲ್ಲಿಸಬಹುದು. ನೀವು ಈ ಉದ್ಯೋಗಕ್ಕೆ ಇಂಡಿಯನ್ ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.
ಇಂಡಿಯನ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವವರು ನವೆಂಬರ್ 30 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದು. ನೀವು ಕೂಡ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಬಯಸಿದರೆ, ಮೊದಲು ಕೆಳಗೆ ನೀಡಿರುವ ಅಂಶಗಳನ್ನು ಎಚ್ಚರಿಕೆಯಿಂದ ಓದಿ. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 68 ವರ್ಷಗಳು.
ಅಭ್ಯರ್ಥಿಯು MS ಆಫೀಸ್ ನಂತಹ ಮೂಲಭೂತ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಇಂಗ್ಲಿಷ್‌ನಲ್ಲಿ ಟೈಪ್ ಮಾಡುವ ಸಾಮರ್ಥ್ಯ ಕಡ್ಡಾಯ. ಸ್ಥಳೀಯ ಭಾಷೆಯಲ್ಲಿ ಟೈಪ್ ಮಾಡುವ ಸಾಮರ್ಥ್ಯಕ್ಕೆ ಹೆಚ್ಚುವರಿ ಪ್ರಾಶಸ್ತ್ಯ ನೀಡಲಾಗುತ್ತದೆ.
ಸಂವಹನ ಕೌಶಲ್ಯಗಳು
ಅಭ್ಯರ್ಥಿಗಳು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿರಬೇಕು.
ವೇತನ ಹೇಗಿರುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.18,000. ಇದಲ್ಲದೆ, ಹಣಕಾಸು ಸಾಕ್ಷರತಾ ಶಿಬಿರಗಳನ್ನು ನಡೆಸುವ ಆಧಾರದ ಮೇಲೆ ವೇತನ ಹೀಗಿರುತ್ತದೆ:
ತಿಂಗಳಿಗೆ 0 - 4 ಶಿಬಿರಗಳು: ಹಣವಿಲ್ಲ
ತಿಂಗಳಿಗೆ 5 - 9 ಶಿಬಿರಗಳು: ರೂ. 2,000
ತಿಂಗಳಿಗೆ 10 ಅಥವಾ ಹೆಚ್ಚಿನ ಶಿಬಿರಗಳು: ರೂ. 4,000