ಬೆಕ್ಕು 'ಮಿಯಾಂವ್' ಎಂದು ಕೂಗುವುದೇಕೆ ಗೊತ್ತಾ? ವಿಜ್ಞಾನಿಗಳು ಕೊಡುವ ಕಾರಣ ಇದು
Friday, November 22, 2024
ಬೆಕ್ಕು ಅಂದರೆ ಯಾರಿಗೆ ತಾನೆ ಪ್ರೀತಿಯಿಲ್ಲ. ಹೆಚ್ಚಿನ ಮಂದಿಗೆ ಬೆಕ್ಕು ಪ್ರೀತಿಯ ಪೆಟ್. ಆದರ ಬೆಕ್ಕು ಮಿಯಾಂವ್ ಎಂದು ಯಾಕೆ ಕೂಗುತ್ತೆ ಗೊತ್ತಾ? ಈ ಶಬ್ದ ಸಹಜನಾ? ಅಥವಾ ಇದಕ್ಕೆ ಏನಾದ್ರೂ ಅರ್ಥ ಇದೆಯಾ?
ಬೆಕ್ಕು ಹೇಗೆ ಕೂಗುತ್ತದೆ ಎಂದು ಕೇಳಿದ್ರೆ, ಎಲ್ಲರೂ 'ಮಿಯಾಂವ್' ಎಂದೇ ಹೇಳ್ತಾರೆ. ಆದರೆ ಬೆಕ್ಕು ಇನ್ನೂ ಬೇರೆ ಶಬ್ದಗಳನ್ನೂ ಮಾಡುತ್ತದೆ. ಮಿಯಾಂವ್ ಅಂತೂ ಕಾಮನ್ ಶಬ್ದ.
ವಿಜ್ಞಾನಿಗಳ ಪ್ರಕಾರ 'ಮಿಯಾಂವ್'ನ ನಿಜವಾದ ಅರ್ಥವೇನು ಗೊತ್ತಾ?. ರೋವರ್ ಸಂಸ್ಥೆಯ ಮೈಕೆಲ್ ಡೆಲ್ಡೋಗಾ ಹೇಳುವ ಪ್ರಕಾರ, ಇದು ಶಬ್ದವಲ್ಲ, ಸಂವಹನದ ಒಂದು ವಿಧಾನವಂತೆ. ವಿಜ್ಞಾನಿಗಳ ಪ್ರಕಾರ, ಬೆಕ್ಕು ಹಸಿವಾದಾಗ, ತನ್ನನ್ನು ಸಾಕಿದವನ ಗಮನ ಸೆಳೆಯಲು ಹೀಗೆ ಕೂಗುತ್ತಂತೆ.
ಹೀಗೆ ಕೂಗಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಂತೆ ಬೆಕ್ಕು. ಬೆಕ್ಕುಗಳು ಮಿಯಾಂವ್ ಪ್ರಾಥಮಿಕವಾಗಿ ಮನುಷ್ಯರೊಂದಿಗೆ ಸಂವಹನ ನಡೆಸುತ್ತವೆ. ಇತರ ಬೆಕ್ಕುಗಳಲ್ಲ, ಏಕೆಂದರೆ ಇದು ಸಾಮಾನ್ಯವಾಗಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವ ಕಲಿತ ನಡವಳಿಕೆಯಾಗಿದೆ.