ದ.ಕ. ಸರ್ಕಾರಿ ನೌಕರರ ಸಂಘದ ಚುನಾವಣೆ: ಚುನಾಯಿತ ಅಭ್ಯರ್ಥಿಗಳ ವಿವರ
ದ.ಕ. ಸರ್ಕಾರಿ ನೌಕರರ ಸಂಘದ ಚುನಾವಣೆ: ಚುನಾಯಿತ ಅಭ್ಯರ್ಥಿಗಳ ವಿವರ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಗೆ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ದಕ್ಷಿಣ ಕನ್ನಡ, ಮಂಗಳೂರು ಇದರ ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ದಿನಾಂಕ 16.11.24ರಂದು ಶನಿವಾರ ನಡೆದ 11 ಇಲಾಖೆಯ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಅಭ್ಯರ್ಥಿಗಳು ನಿರ್ದೇಶಕರಾಗಿ ಚುನಾಯಿತರಾಗಿರುತ್ತಾರೆ.
ನವೀನ್ ಕುಮಾರ್ ಎಂಎಸ್ (ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆ )
ಸುರೇಶ್ (ಐಟಿಐ ಇಲಾಖೆ )
ಪದ್ಮನಾಭ ಜೋಗಿ, ಜಗದೀಶ್ ಪಿ, ಕಾರ್ತಿಕ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ)
ಮಹಾಲಕ್ಷ್ಮಿ ಮತ್ತು ಸಿದ್ದಪ್ಪ (ಜಿಲ್ಲಾ ಆಸ್ಪತ್ರೆ)
ಪ್ರಸನ್ನ ಕುಮಾರ್ ಪಕ್ಕಳ (ಕಂದಾಯ ಇಲಾಖೆ)
ಡಾ.ಆನಂದ್ ಬಂಜನ್ (ಸಣ್ಣ ನೀರಾವರಿ ಇಲಾಖೆ)
ಉಮೇಶ್ ನಾಯಕ್ (ಡಿಡಿಪಿಐ ಇಲಾಖೆ)
ಉಮೇಶ್ ಕೆ (ಪದವಿ ಪೂರ್ವ ಕಾಲೇಜ್)
ಜಯಲಕ್ಷ್ಮಿ (ಎಪಿಎಂಸಿ)
ಡಾ. ಅಜಿತ್ (ಆಯುಷ್ ಇಲಾಖೆ)
ಸುರೇಶ್ ಮೋರಸ್ (ವಾಣಿಜ್ಯ ತೆರಿಗೆ ಇಲಾಖೆ)
ಒಟ್ಟು 66 ಸ್ಥಾನಗಳ ಪೈಕಿ 52 ಅಭ್ಯರ್ಥಿಗಳು ಈಗಾಗಲೇ ವಿವಿಧ ಇಲಾಖೆಯಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಕೆ. ಜಗಜೀವನ್ ದಾಸ್ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿ: ಮಂಗಳೂರು ನಗರದ ಮೇಧ್ಯಾ ಕೊಟ್ಟಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
https://www.mangalorean.com/%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%BE-%E0%B2%95%E0%B2%BE%E0%B2%B0%E0%B2%82%E0%B2%9C%E0%B2%BF-%E0%B2%AE%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8/
ಪ್ರತಿಭಾ ಕಾರಂಜಿ: ಮಂಗಳೂರು ನಗರದ ಮೇಧ್ಯಾ ಕೊಟ್ಟಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
https://mediaonekannada.com/2024/11/17/12795/
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ: ಅಚ್ಚರಿಯ ಫಲಿತಾಂಶ; ಉಪವಿಭಾಗಾಧಿಕಾರಿ ಸತ್ಯನಾರಾಯಣ ಗೆಲುವು
https://www.courtbeatnews.com/2024/11/shimoga-govt-empl-election.html
ಸರ್ಕಾರಿ ನೌಕರರ ವಲಯದಲ್ಲಿ ಅಪಾರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಪ್ರಕಟವಾಗಿದೆ. ಬಹುತೇಕ ಇಲಾಖೆಗಳ ಚುನಾವಣೆಯಲ್ಲಿ ಅನಿರೀಕ್ಷಿತ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಘಟಕದ 30 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎಲ್ಲರ ಹುಬ್ಬೇರಿಸುವಂತೆ ಶಿವಮೊಗ್ಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ ಕಂದಾಯ ಇಲಾಖೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಅವರ ಪ್ರತಿಸ್ಪರ್ಧಿ ಗಿರೀಶ್ ಕೇವಲ ಒಂದು ಮತದ ಅಂತರದಲ್ಲಿ ಸೋಲು ಕಂಡಿದ್ದಾರೆ. ಕೂದಲೆಳೆಯ ಅಂತರದಲ್ಲಿ ಗೆಲುವು ಕಂಡ ಸತ್ಯನಾರಾಯಣ ನೌಕರರ ಜಿಲ್ಲಾ ಘಟಕ ಪ್ರವೇಶಿಸಿದ್ದಾರೆ.
ಕೃಷಿ ಇಲಾಖೆಯಿಂದ ಗಿರೀಶ್ ಬಿ., ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ದೀಪಕ್ ಪಿ.ಎಸ್., ಜಿಲ್ಲಾ ಪಂಚಾಯತ್ನಿಂದ ಕಿರಣ್ ಎಚ್. ತಾಲೂಕು ಪಂಚಾಯತ್ನಿಂದ ಪ್ರವೀಣ್ ಕುಮಾರ್, ಅಬಕಾರಿ ಇಲಾಖೆಯಿಂದ ಮಧುಸೂದನ್, ಸಮಾಜ ಕಲ್ಯಾಣ ಇಲಾಖೆಯಿಂದ ಕೊಟ್ರೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನಿತಾ ವಿ ಆಯ್ಕೆಯಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಂಗನಾಥ್, ಮೀನುಗಾರಿಕೆ ಇಲಾಖೆಯಿಂದ ಸತ್ಯಭಾಮ, ಅರಣ್ಯ ಇಲಾಖೆಯಿಂದ ರಾಜು ಲಿಂಬು ಚೌಹಾಣ್, ಆರೋಗ್ಯ ಇಲಾಖೆಯಿಂದ ಡಾ. ಗುಡದಪ್ಪ ಕಸಬಿ, ಆಯುಷ್ ಇಲಾಖೆಯಿಂದ ಡಾ. ಸಿ.ಎ. ಹಿರೇಮಠ, ಇಎಸ್ಐನಿಂದ ಮಹೇಶ್ ಪಿ.ಎಲ್. ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ರಮೇಶ್ ಎಸ್.ವೈ ಆಯ್ಕೆಯಾಗಿದ್ದಾರೆ.
ಗ್ರಂಥಾಲಯ ಇಲಾಖೆಯಿಂದ ಮಹೇಶ್ ಕೆ.ಎಸ್., ಪ್ರೌಢ ಶಾಲೆ ವಿಭಾಗದಿಂದ ಲಿಂಗಪ್ಪ ಮತ್ತು ಧರ್ಮಪ್ಪ, ಪಿ.ಯು. ಇಲಾಖೆಯಿಂದ ಶಶಿಧರ್ ಡಿ.ಟಿ., ಪ್ರಥಮ ದರ್ಜೆ ಕಾಲೇಜಿನಿಂದ ಧನ್ಯ ಕುಮಾರ್, ಮಹಿಳಾ ಪಾಲಿಟೆಕ್ನಿಕ್ನಿಂದ ಹನುಮಂತಪ್ಪ ಜಿ., ಎಪಿಎಂಸಿಯಿಂದ ಅಣ್ಣಪ್ಪ ವಿ.ಬಿ., ಗಣಿ-ಭೂ ವಿಜ್ಞಾನ ಇಲಾಖೆಯಿಂದ ರವಿಕಿರಣ್ ವೈ, ಭೂಮಾಪನ ಮತ್ತು ಕಂದಾಯ ಇಲಾಖೆಯಿಂದ ಚನ್ನಕೇಶವ ಮೂರ್ತಿ, ಶಾಲಾ ಶಿಕ್ಷಣ ಇಲಾಖೆಯಿಂದ ಸುಬ್ರಹ್ಮಣ್ಯ ಜಾದವ್, ವಿಜಯ್ ಅಂಟೋ ಸಗಾಯ್, ಅಶೋಕ್ ಟಿ.ಜಿ ಮತ್ತು ನರಸಿಂಹ ಕೆ ಆಯ್ಕೆಯಾದವರ ಪಟ್ಟಿಯಲ್ಲಿ ಸೇರಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ 68 ಮಂದಿ ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 30 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿತ್ತು.