-->
ರಾತ್ರಿ ತಡವಾಗಿ ಮಲಗುವವರಿಗೆ ಶಾಕಿಂಗ್ ನ್ಯೂಸ್ ಇದೆ: ಇವರಿಗೆ ಸಣ್ಣ ವಯಸ್ಸಿನಲ್ಲಿಯೇ ಕೂದಲು ಉದುರುತ್ತದೆ ಎಚ್ಚರ

ರಾತ್ರಿ ತಡವಾಗಿ ಮಲಗುವವರಿಗೆ ಶಾಕಿಂಗ್ ನ್ಯೂಸ್ ಇದೆ: ಇವರಿಗೆ ಸಣ್ಣ ವಯಸ್ಸಿನಲ್ಲಿಯೇ ಕೂದಲು ಉದುರುತ್ತದೆ ಎಚ್ಚರ


ಸಾಮಾನ್ಯವಾಗಿ ಕೂದಲು ಉದುರಿತೆಂದರೆ ವಯಸ್ಸಾಗಿದೆ ಎಂದು ಹೇಳುತ್ತಾರೆ. ಆದರೆ ಸದ್ಯ ಸಣ್ಣ ವಯಸ್ಸಿನಲ್ಲಿಯೇ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕೆಲವು ನಿರ್ದಿಷ್ಟ ಕಾರಣಗಳಿರುತ್ತದೆ. ಬಹಳಷ್ಟು ಮಂದಿ ಯುವಕರೀಗ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಕೂದಲು ಉದುರುವ ಕೆಲವು ಸಾಮಾನ್ಯ ಅಂಶಗಳ ಬಗ್ಗೆ ವೈದ್ಯಕೀಯ ಸಂಶೋಧಕರು ಹೇಳಿದ ವಿವರಗಳನ್ನು ಈಗ ತಿಳಿದುಕೊಳ್ಳೋಣ.

ಕೂದಲು ಉದುರುವುದಕ್ಕೆ ಪ್ರಮುಖ ಕಾರಣ ಒತ್ತಡ. ಅತಿಯಾದ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕಾರ್ಟಿಸೋಲ್ ನಿಮ್ಮ ಕೂದಲಿಗೆ ಹಾನಿಕಾರಕ ಹಾರ್ಮೋನ್. ಇದರಿಂದ ಕೂದಲು ಉದುರುತ್ತದೆ.

ಅಲ್ಲದೆ, ನೀವು ಆಹಾರವೂ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ, ಆಹಾರದಲ್ಲಿ ಹೆಚ್ಚು ಜಂಕ್‌ಫುಡ್ ಸೇವಿಸುತ್ತಾರೆ. ಇದರಿಂದ ಪ್ರೋಟೀನ್ ಕಡಿಮೆಯಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗುತ್ತವೆ. ಆದ್ದರಿಂದ ಈ ಆಹಾರವು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗೂ ಕೂಡ ಇವು ನಿಮ್ಮ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತವೆ.

ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಕಾಲ್ಪ್ ಸೋರಿಯಾಸಿಸ್ ಅಥವಾ ಹೆವಿ ತಲೆಹೊಟ್ಟು ಮುಂತಾದ ಸ್ಕಾಲ್ಪ್ ಕಾಯಿಲೆಗಳು ಕೂಡ ಕಾರಣವಾಗಿರುತ್ತವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಧೂಮಪಾನ ಮಾಡುವವರಲ್ಲಿ ಕೂದಲು ಉದುರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈಗಾಗಲೇ ತುಂಬಾ ತೆಳುವಾದ ಕೂದಲು ಇರುವವರಿಗೆ ಹೆಚ್ಚಿನ ಅಪಾಯವಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ನಿಮ್ಮ ಜೀವನಶೈಲಿ ಕೂಡ ನಿಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವಾಗ ಮಲಗುತ್ತೀರಿ, ಎಷ್ಟು ಹೊತ್ತು ಮಲಗುತ್ತೀರಿ, ಸರಿಯಾದ ವ್ಯಾಯಾಮ ಮಾಡುತ್ತೀರೋ ಇಲ್ಲವೋ, ಒಟ್ಟಾರೆ ಎಷ್ಟು ಒತ್ತಡಕ್ಕೆ ಒಳಗಾಗುತ್ತೀರಿ, ಇವೆಲ್ಲವೂ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಅಲೋಪೆಸಿಯಾ ಅರೆಟಾ, ಪೋಷಕಾಂಶಗಳ ಕೊರತೆ ಅಥವಾ ಔಷಧಿಗಳ ಬಳಕೆ ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಕೂದಲು ಉದುರುವುದಕ್ಕೆ ಕಾರಣಗಳನ್ನು ಪರಿಗಣಿಸಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಕೂದಲು ಉದುರುವುದಕ್ಕೆ ವೃದ್ಧಾಪ್ಯ, ವಂಶವಾಹಿ, ಟೆಸ್ಟೋಸ್ಟೆರಾನ್ ಹಾರ್ಮೋನ್‌ನಲ್ಲಿನ ಬದಲಾವಣೆಗಳು ಕಾರಣವಾಗಿರುತ್ತದೆ ಎಂದು ವೈದ್ಯಕೀಯ ಸಂಶೋಧಕರು ಹೇಳುತ್ತಾರೆ. ಯೌವನದ ನಂತರ ಯಾವಾಗ ಬೇಕಾದರೂ ಬೋಳು ಬರಬಹುದು ಎಂದು ಹೇಳುತ್ತಾರೆ.

Ads on article

Advertise in articles 1

advertising articles 2

Advertise under the article