ಕದ್ರಿ ನವನೀತ ಶೆಟ್ಟಿ ಅವರಿಂದ ಮತ್ತೊಂದು ಚಾರಿತ್ರಿಕ ನಾಟಕ "ಶನಿಮಹಾತ್ಮೆ"
Wednesday, November 6, 2024
ಸುರತ್ಕಲ್ : ನವಂಬರ್ 10 ರಂದು ಭಾನುವಾರ ಸಂಜೆ 4.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಕದ್ರಿ ನವನೀತ ಶೆಟ್ಟಿ ವಿರಚಿತ ಶನಿ ಮಹಾತ್ಮೆ ಪೌರಾಣಿಕ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ. ಜೀವನ್ ಉಳ್ಳಾಲ್ ನಾಟಕ ನಿರ್ದೇಶಿಸಿದ್ದಾರೆ.
ನವನೀತ ಶೆಟ್ಟಿ ಅವರು ಈಗಾಗಲೇ ಹಲವಾರು ಭಕ್ತಿ ಪ್ರದಾನ, ಪೌರಾಣಿಕ, ಚಾರಿತ್ರಿಕ ನಾಟಕಗಳನ್ನು ರಚಿಸಿ ಪ್ರಸಿದ್ದಿ ಪಡೆದಿದ್ದಾರೆ.
ದೇವು ಪೂಂಜ, ತುಂಬೆದ ಪುರ್ಪ(ಕಾಡ ಕೂಡಿಯೆ ಕಣ್ಣ ಪ್ಪೆ ), ಮೈಮೆ, ಕುದುರುದ ಸಿರಿ ( ಕಟೀಲ್ಡಪ್ಪೆ ಉಳ್ಳಾಲ್ದಿ ),ಮೈಮೆದ ಸಿರಿ ದುರ್ಗೆ, ಕೊಂಬು ಮಾಣಿ, ಅಹಲ್ಯೆ, ಸತ್ಯದ ಸಿರಿ,ಕಾರ್ಣಿಕದ ಶಿವ ಮಂತ್ರ, ಬೊಳ್ಳಿ ಮಲೆತ ಶಿವ ಶಕ್ತಿಲು, ಮಾರಿಯಮ್ಮ ಮೊದಲಾದ 35 ನಾಟಕ ರಚನೆ ಮಾಡಿದ್ದಾರೆ. ಇವರ ಆರು ಕೃತಿಗಳು ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪಡೆದಿವೆ. ಸುನಿ ಮಾಳ ಅವರ 'ಚತುರ್ವೇದಂ ' ಮಲಯಾಳ ನಾಟಕ ದ ತುಳು ರೂಪನ್ತರ " ಗರುಡ ಪಂಚಮಿ" ಯಶಸ್ವಿ ಯಾಗಿ ಪ್ರದರ್ಶನ ಗೊಳ್ಳು ತ್ತಿದೆ