-->
ರಾತ್ರಿ ಡ್ರೈವಿಂಗ್ ಮಾಡುವವರಿಗೆ ಇಲ್ಲಿದೆ ಟಿಪ್ಸ್: ಹೀಗೆ ಮಾಡಿದರೆ ಸುರಕ್ಷಿತವಾಗಿ ಮನೆ ತಲುಪಬಹುದು

ರಾತ್ರಿ ಡ್ರೈವಿಂಗ್ ಮಾಡುವವರಿಗೆ ಇಲ್ಲಿದೆ ಟಿಪ್ಸ್: ಹೀಗೆ ಮಾಡಿದರೆ ಸುರಕ್ಷಿತವಾಗಿ ಮನೆ ತಲುಪಬಹುದು


ರಾತ್ರಿ ಡ್ರೈವಿಂಗ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಆದ್ದರಿಂದ ರಾತ್ರಿ ಹೊತ್ತು ಚಾಲನೆ ಮಾಡುವಾಗ ಕೆಲವಾರು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.


ವಿಶೇಷವಾಗಿ ರಾತ್ರಿ ಚಾಲನೆ ಮಾಡುವ ವೇಳೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಏಕೆಂದರೆ, ಸಣ್ಣ ಅಜಾಗರೂಕತೆ ಯಾವುದೇ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಹೆಡ್‌ಲೈಟ್‌ಗಳನ್ನು ಯಾವಾಗಲೂ ಸ್ವಚ್ಛವಾಗಿಡುವುದು ಉತ್ತಮ. ಬೆಳಕು ಕಡಿಮೆಯಿದ್ದರೆ ಮುಂಭಾಗದಿಂದ ವಾಹನ ಬರುತ್ತಿದೆಯೇ ಎಂಬುದು ತಿಳಿಯುವುದು ಕಷ್ಟ. ಆದ್ದರಿಂದ ಹೆಡ್‌ಲೈಟ್‌ಗಳನ್ನು ಸ್ವಚ್ಛವಾಗಿಡಬೇಕು.

ರಾಷ್ಟ್ರೀಯ ಸುರಕ್ಷತಾ ಮಂಡಳಿ ಏನು ಹೇಳುತ್ತದೆ ಎಂದರೆ, ರಾತ್ರಿ ವೇಳೆ ಕಾಡು ಅಥವಾ ಹೊಲಗಳ ಬಳಿ ಚಾಲನೆ ಮಾಡುವಾಗ ಪ್ರಕಾಶಮಾನವಾದ ಬೆಳಕು ಅಗತ್ಯ. ಕಡಿಮೆ ಬೆಳಕಿನಲ್ಲಿ ಮುಂದೆ ಏನು ಇದೆ ಎಂಬುವುದು ಕಾಣುವುದಿಲ್ಲ. ಇದರಿಂದ ಯಾವುದೇ ಸಮಯದಲ್ಲಿ ಅಪಘಾತ ಸಂಭವಿಸಬಹುದು. ರಾತ್ರಿ ವೇಳೆ ಡ್ರೈವಿಂಗ್ ಮಾಡುವಾಗ ಮುಂಭಾಗದ ವಾಹನದ ಹೆಡ್‌ಲೈಟ್ ನೋಡಲೇಬಾರದು‌. ಇದರಿಂದ ಬೆಳಕು ಕಣ್ಣು ಕುಕ್ಕುವುದರಿಂದ ಅಪಘಾತವಾಗಬಹುದು. ಮುಂಭಾಗದಲ್ಲಿ ವಾಹನ ಬಂದರೆ, ದೃಷ್ಟಿ ಮೇಲಿಡಿ. ಹಾಗಾದರೆ ಬೆಳಕು ನೇರವಾಗಿ ಕಣ್ಣಿಗೆ ಬೀಳುವುದಿಲ್ಲ.

ರಾತ್ರಿ ಚಾಲನೆ ಮಾಡುವಾಗ ಕಾರಿನ ಒಳಗಡೆ ಬೆಳಕು ಆರಿಸಬೇಕು. ಇದರಿಂದ ಕತ್ತಲಿನ ರಸ್ತೆಯಲ್ಲಿ ಚಾಲನೆ ಸುಲಭವಾಗುತ್ತದೆ. ಕಣ್ಣು ಕತ್ತಲಿಗೆ ಹೊಂದಿಕೊಳ್ಳುತ್ತದೆ. ಇದರಿಂದ ಚಾಲನೆ ಮಾಡಲು ಸುಲಭವಾಗುತ್ತದೆ. ರಾತ್ರಿ ಚಾಲನೆ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಡಿ.

Ads on article

Advertise in articles 1

advertising articles 2

Advertise under the article