-->
ಮಹಿಳೆಗೆ ವಾಂತಿ ಮಾಡಿಸಿದೆ ಆನ್‌ಲೈನ್ ಪಾರ್ಸೆಲ್

ಮಹಿಳೆಗೆ ವಾಂತಿ ಮಾಡಿಸಿದೆ ಆನ್‌ಲೈನ್ ಪಾರ್ಸೆಲ್



ಇಡೀ ಪ್ರಪಂಚವನ್ನೇ ಅಂಗೈನಲ್ಲಿ ಹಿಡಿದುಕೊಳ್ಳುವಂತೆ ಮಾಡಿರುವ ಮೊಬೈಲ್, ಹಣವೊಂದಿದ್ದರೆ ಮನುಷ್ಯನ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಸಾಧನವೂ ಹೌದು. ಆದರೆ ಇಲ್ಲೊಬ್ಬ ಮಹಿಳೆ ಮೊಬೈಲ್‌ನಲ್ಲಿ ತನಗೆ ಬೇಕಾದ ವಸ್ತುವೊಂದನ್ನು ಆನ್‌ಲೈನ್ ಆರ್ಡರ್ ಮಾಡಿ ಅಮೇಜಾನ್‌ ಸಂಸ್ಥೆಯಿಂದ ಬಂದ ಪಾರ್ಸಲ್ ಬಾಕ್ಸ್ ತೆರೆದು ವಾಂತಿ ಮಾಡಿಕೊಂಡಿದ್ದಾಳೆ. ಬಳಿಕ ತಾನು ಆನ್‌ಲೈನ್ ಶಾಪಿಂಗ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ ಈ ಮಹಿಳೆ.


ಆನ್‌ಲೈನ್‌ನಲ್ಲಿ ಎಲ್ಲ ವಸ್ತುಗಳ ಬೆಲೆ, ಡಿಸ್ಕೌಂಟ್, ಗುಣಮಟ್ಟ ಹಾಗೂ ಬಣ್ಣಗಳ ಬಗ್ಗೆ ಆ್ಯಪ್‌ಗಳಲ್ಲಿ ನೋಡಬಹುದು. ಯಾವ ಕಂಪೆನಿಯ ಯಾವ ವಸ್ತುಗಳನ್ನು ಬೇಕಾದರೂ ಆರ್ಡರ್ ಮಾಡಿದರೆ 2-3 ದಿನಗಳಲ್ಲಿ ಮನೆ ಬಾಗಿಲಿಗೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಆನ್‌ಲೈನ್ ಸೌಲಭ್ಯ ಬೇಗನೆ ಜನಪ್ರಿಯವಾಯಿತು. ಆದರೆ, ಜನಪ್ರಿಯತೆ ಹೆಚ್ಚಾದಂತೆ ಆನ್‌ಲೈನ್ ಸೇವೆಯ ಬಗ್ಗೆ ದೂರುಗಳೂ ಹೆಚ್ಚುತ್ತಿವೆ. ಅಮೇಜಾನ್‌ನಿಂದ ವಸ್ತುವೊಂದನ್ನು ಖರೀದಿ ಮಾಡಲು ಆನ್‌ಲೈನ್ ಆರ್ಡರ್ ಮಾಡಿದ್ದ ಮಹಿಳೆ ಬಾಕ್ಸ್ ತೆಗೆಯುತ್ತಿದ್ದಂತೆ ವಾಂತಿ ಮಾಡಿಕೊಂಡು ಸುಸ್ತಾಗಿ ಬಿದ್ದಿದ್ದಾಳೆ. 


ಈ ಘಟನೆ ನಡೆದಿರುವುದು ಯುನೈಟೆಡ್ ಕಿಂಗ್‌ಡಮ್‌ನ ಕಿರ್ಬಿಯಲ್ಲಿ. ಕಿರ್ಬಿ ನಗರದಲ್ಲಿ ವಾಸಿಸುವ ರೇಚೆಲ್ ಮೆಕಾಡಮ್ ಅವರ ಶಾಪಿಂಗ್ ಅನುಭವ ಮಾತ್ರ ಅವರನ್ನು ಆನ್‌ಲೈನ್ ಶಾಪಿಂಗ್‌ನಿಂದ ಶಾಶ್ವತವಾಗಿ ದೂರ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಅಮೆಜಾನ್‌ ಸೈಕಲ್ ಹೆಲ್ಮೆಟ್‌ಗಾಗಿ ರೇಚೆಲ್ ಆರ್ಡರ್ ಮಾಡಿದ್ದರು. ಪಾರ್ಸೆಲ್ ಬಂದಾಗ ಕುತೂಹಲದಿಂದ ತೆರೆದ ರೇಚೆಲ್‌ಗೆ ವಾಂತಿಯಾಯಿತು. ಪಾರ್ಸೆಲ್ ತೆರೆದ ತಕ್ಷಣ ಅಸಹ್ಯವಾದ ದುರ್ವಾಸನೆ ಬಡಿಯಿತು. ನಂತರ ವಾಕರಿಕೆ ಬಂದು ವಾಂತಿಯಾಯಿತು ಎಂದು ರೇಚೆಲ್ ಹೇಳುತ್ತಾರೆ.


ಇದಾದ ನಂತರ ವಾಂತಿ ಮಾಡಿಕೊಂಡು ಸ್ವಲ್ಪ ಸುಧಾರಿಸಿಕೊಂಡ ನಂತರ ಅಸ್ವಸ್ಥತೆ ಕಡಿಮೆಯಾದಾಗ ರೇಚೆಲ್ ಮತ್ತೆ ಪಾರ್ಸೆಲ್‌ನತ್ತ ನೋಡಿದರು. ಅದರೊಳಗೆ ಕೆಲವು ಬ್ರೆಡ್‌ ತುಂಡುಗಳು ಮತ್ತು ಇಲಿಗಳ ಮಲ ಇತ್ತು. ಇದು ಹೇಗೆ ಪಾರ್ಸಲ್ ಬಾಕ್ಸ್‌ನೊಳಗೆ ಬಂದಿದೆ ಎಂದು ಹೆಲ್ಮೆಟ್ ತೆಗೆದು ನೋಡಿದರೆ ಆ ಪೆಟ್ಟಿಗೆಯ ಒಂದು ಬದಿಯಲ್ಲಿ ರಂಧ್ರ ಕಂಡುಬಂದಿದೆ. ಹೊರಗಿನ ಕಾರ್ಡ್‌ಬೋರ್ಡ್ ಮತ್ತು ಒಳಗಿನ ಪ್ಯಾಕಿಂಗ್ ನಡುವೆ ಅರ್ಧಂಬರ್ಧ ಕೊಳೆತ ಇಲಿ ಕಂಡುಬಂದಿದೆ. ಅರ್ಧ ಕೊಳೆತ ಇಲಿಯ ದುರ್ವಾಸನೆಯೇ ರೇಚೆಲ್‌ ವಾಂತಿಗೆ ಕಾರಣವಾಗಿದೆ.


ಈ ಬಗ್ಗೆ ಹೇಳಿಕೊಂಡಿರುವ ರೇಚಲ್, ಪಾರ್ಸಲ್ ಬಾಕ್ಸ್‌ನಿಂದ ನಾನು ವಾಂತಿ ಮಾಡಿಕೊಳ್ಳುತ್ತೇನೆ ಎಂಬುದನ್ನು ನನಗೆ ನಂಬಲಾಗಲಿಲ್ಲ. ನಾನು ಪ್ರಜ್ಞೆ ತಪ್ಪಿ ಬೀಳುತ್ತೇನೆ ಎಂದು ಭಾವಿಸಿದೆ. ಅದನ್ನು ನೋಡಿದ ನಂತರ ಮತ್ತೆ ಮುಟ್ಟಲು ಸಾಧ್ಯವಾಗಲಿಲ್ಲ. ನಾನು ತಕ್ಷಣ ಹಿಂದೆ ಸರಿದೆ. ಸೈಕಲ್ ಹೆಲ್ಮೆಟ್ ಬದಲು ಸತ್ತ ಇಲಿಯ ಪಾರ್ಸೆಲ್ ಕಂಡ ಆ ರಾತ್ರಿ ನಿದ್ದೆ ಬರಲಿಲ್ಲ, ಊಟ ಮಾಡಲು ಸಾಧ್ಯವಾಗಲಿಲ್ಲ. ತಕ್ಷಣವೇ ಅಮೆಜಾನ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ದೂರು ನೀಡಿದರು. ನಂತರ ಅಮೆಜಾನ್ ರೇಚೆಲ್‌ಗೆ ಕ್ಷಮೆಯಾಚಿಸಿತು, ಡೆಲಿವರಿಯಿಂದ ಉಂಟಾದ ತೊಂದರೆಗೆ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ತಿಳಿಸಿತು ಎಂದು ಹೇಳಿಕೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article