-->
ಎಷ್ಟು ದಿನಕ್ಕೊಮ್ಮೆ ಮೊಬೈಲ್ ರೀಸ್ಟಾರ್ಟ್ ಮಾಡ್ಬೇಕು ಗೊತ್ತೇ? - ಈ ಚಿಕ್ಕ ವಿಚಾರದ ಅರಿವಿದ್ದರೆ ಸಾಕು ಸ್ಮಾರ್ಟ್‌ಫೋನ್‌ ದೀರ್ಘಾವಧಿ ಬಾಳಿಕೆ ಬರುತ್ತದೆ

ಎಷ್ಟು ದಿನಕ್ಕೊಮ್ಮೆ ಮೊಬೈಲ್ ರೀಸ್ಟಾರ್ಟ್ ಮಾಡ್ಬೇಕು ಗೊತ್ತೇ? - ಈ ಚಿಕ್ಕ ವಿಚಾರದ ಅರಿವಿದ್ದರೆ ಸಾಕು ಸ್ಮಾರ್ಟ್‌ಫೋನ್‌ ದೀರ್ಘಾವಧಿ ಬಾಳಿಕೆ ಬರುತ್ತದೆ


ಸದ್ಯ ಮೊಬೈಲ್ ಫೋನ್ ಬಳಸದವರನ್ನು ಹುಡುಕೋದೇ ಕಷ್ಟ. ಏಕೆಂದರೆ ಎಲ್ಲರ ಬಳಿಯೂ ಕನಿಷ್ಠ ಕೀಬೋರ್ಡ್ ಮೊಬೈಲ್‌ ಆದರೂ ಇರುತ್ತದೆ. ಕಳೆದ ದಶಕದಿಂದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಸದ್ಯ 5G ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದ್ದು, ಆದರೆ ಬಳಕೆದಾರರು ಮೊಬೈಲ್‌ ಹೇಗೆ ಬಳಸಬೇಕು ಎಂಬುದರ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಈ ಚಿಕ್ಕ ವಿಚಾರದ ಬಗ್ಗೆ ಅರಿವಿದ್ದರೆ ಸಾಕು ಸ್ಮಾರ್ಟ್‌ಫೋನ್‌ಗಳನ್ನು ದೀರ್ಘಾವಧಿಯವರೆಗೆ ಬಾಳಿಕೆ ಬರುತ್ತವೆ. ಕೆಲವರು ದಿನಕ್ಕೆ ಐದಾರು ಬಾರಿ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡುತ್ತಿರುತ್ತಾರೆ. ಇನ್ನು ಒಂದಿಷ್ಟು ಜನರು ರೀಸ್ಟಾರ್ಟ್ ಮಾಡೋದೇ ಇಲ್ಲ. ಫೋನ್ ರೀಸ್ಟಾರ್ಟ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿದುಕೊಂಡಿರುತ್ತಾರೆ. 


ಇಂದು ನಾವು ನಿಮಗೆ ಎಷ್ಟು ದಿನಕ್ಕೊಮ್ಮೆ ಸ್ಮಾರ್ಟ್‌ಫೋನ್ ರೀಸ್ಟಾರ್ಟರ್ ಮಾಡಬೇಕು ಎಂಬುದರ ತಿಳಿಸುತ್ತೇವೆ. ರೀಸ್ಟಾರ್ಟ್ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದನ್ನೂ ನಾವು ತಿಳಿಸುತ್ತೇವೆ. ರೀಸ್ಟಾರ್ಟ್ ಮಾಡುವುದರಿಂದ ಸ್ಮಾರ್ಟ್‌ಫೋನ್ ಸ್ಲೋ ಅಥವಾ ಹ್ಯಾಂಗ್ ಆಗೋದು ತಪ್ಪಲಿದೆ. ನೀವು ಹೇಗೆ ಬಳಕೆ ಮಾಡುತ್ತೀರಿ ಎಂಬುದರ ಮೇಲೆ ಸ್ಮಾರ್ಟ್‌ಫೋನ್ ಎಷ್ಟು ದಿನ ಬಾಳಿಕೆ ಬರುತ್ತೆ ಎಂಬುವುದು ನಿರ್ಧರಿತವಾಗುತ್ತದೆ. 


ಸಾವಿರಾರು ಹಣ ಖರ್ಚು ಮಾಡಿ ಖರೀದಿಸಿರುವ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆ ಚೆನ್ನಾಗಿ ಮತ್ತು ದೀರ್ಘಕಾಲದವರೆಗೆ ಬರಬೇಕಂದ್ರೆ ವಾರಕ್ಕೊಮ್ಮೆಯಾದರೂ ರೀಸ್ಟಾರ್ಟ್ ಮಾಡುತ್ತಿರಬೇಕು. ಇಲ್ಲವಾದ್ರೆ ಮೊಬೈಲ್ ಕಾರ್ಯಕ್ಷಮತೆ ಕಡಿಮೆಯಾಗಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಆ್ಯಪ್ ಒಪನ್ ಮಾಡೋಕೆ ಹೋದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರೀಸ್ಟಾರ್ಟ್ ಮಾಡೋದರಿಂದ ಮೆಮೊರಿ, ಪ್ರೊಸೆಸರ್‌ ರಿಫ್ರೆಶ್ ಆಗಲು ಸಹಾಯ ಮಾಡಿದಂತಾಗುತ್ತದೆ. ಆದ್ದರಿಂದ ಕನಿಷ್ಠ ವಾರಕ್ಕೊಮ್ಮೆ ನಿಮ್ಮ ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡುತ್ತಿರಬೇಕು. 

ಸ್ಮಾರ್ಟ್‌ಫೋನ್ ನಿಧಾನವಾಗಿ ವರ್ಕ್ ಆಗುತ್ತಿದ್ದರೆ, ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ, ಆಪ್‌ಗಳು ಓಪನ್ ಮಾಡಿದಾಗ ದಿಢೀರ್ ಅಂತ ಹೋಮ್ ಸ್ಕ್ರೀನ್‌ಗೆ ಬರೋದು, ನೆಟ್‌ವರ್ಕ್ ಆಫ್/ಆನ್ ಆಗುತ್ತಿದ್ದರೆ ಈ ಸಮಯದಲ್ಲಿ ರೀಸ್ಟಾರ್ಟ್ ಅವಶ್ಯಕತೆ ಇರುತ್ತದೆ. ಕೆಲವೊಮ್ಮೆ ಆಪ್‌ಗಳು ಕ್ರ್ಯಾಶ್ ಆಗುತ್ತವೆ. ಬ್ಯಾಟರಿ ಬ್ಯಾಕಪ್ ಸಹ ಕಡಿಮೆಯಾಗುತ್ತಿರುತ್ತದೆ. ಫೋನ್ ಸಹ ಒಂದು ಮಶೀನ್ ಆಗಿದ್ದು, ಅದಕ್ಕೆ ಕೂಲ್ ಆಗೋಕೆ ಸಮಯ ಬೇಕಾಗುತ್ತದೆ. ಆದ್ದರಿಂದ ರೀಸ್ಟಾರ್ಟ್ ಮಾಡುತ್ತಿರಬೇಕು. ವಾರಕ್ಕೆ ಒಂದು ಬಾರಿ ಫೋನ್ ರೀಸ್ಟಾರ್ಟ್ ಮಾಡುವದರಿಂದ ಮೇಲಿನ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳಲ್ಲ.


Ads on article

Advertise in articles 1

advertising articles 2

Advertise under the article