-->
ವಾಟ್ಸ್ಆ್ಯಪ್‌ನಲ್ಲಿ‌ ಈ ನಾಲ್ಕು ವಿಚಾರವನ್ನು ಹಂಚಿಕೊಳ್ಳದಿರಿ - ದೂರು ದಾಖಲಾಗುವುದು ಖಚಿತ

ವಾಟ್ಸ್ಆ್ಯಪ್‌ನಲ್ಲಿ‌ ಈ ನಾಲ್ಕು ವಿಚಾರವನ್ನು ಹಂಚಿಕೊಳ್ಳದಿರಿ - ದೂರು ದಾಖಲಾಗುವುದು ಖಚಿತ


ಸಂದೇಶದಿಂದ ಹಿಡಿದು, ಫೋಟೋ, ವೀಡಿಯೋ ಹಂಚೋದು ಕಾಲ್, ಮೀಟಿಂಗ್ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಇದೀಗ ವ್ಯಾಟ್ಸ್ಆ್ಯಪ್ ಮೂಲಕವೇ ನಡೆಯುತ್ತಿದೆ. ಆದರೆ ಈ 4ವಿಚಾರಗಳನ್ನು ವ್ಯಾಟ್ಸ್ಆ್ಯಪ್ ಮೂಲಕ ಹಂಚಿಕೊಂಡರೆ ದೂರು ದಾಖಲಾಗುವುದು ಖಚಿತ. 
 

ವ್ಯಾಟ್ಸ್ಆ್ಯಪ್ ಅತ್ಯಂತ ಜನಪ್ರಿಯ ಆ್ಯಪ್. ಮೆಸೇಜ್, ವೀಡಿಯೋ, ಫೋಟೋ, ವೀಡಿಯೋ ಕಾಲ್, ವಾಯ್ಸ್ ಮೆಸೇಜ್ ಸೇರಿದಂತೆ ಹಲವು ಸೌಲಭ್ಯಗಳು ವ್ಯಾಟ್ಸ್ಆ್ಯಪ್ ನೀಡುತ್ತಿದೆ. ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರ ಪ್ರಮಾಣ ಅತೀ ಹೆಚ್ಚಿದೆ. ವ್ಯಾಟ್ಸ್ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳುವುದು, ವೀಡಿಯೋ ಫಾರ್ವರ್ಡ್, ಫೋಟೋ ಸೇರಿದಂತೆ ಹಲವು ವಿಚಾರಗಳನ್ನು ಪ್ರತಿನಿತ್ಯ ಬಳಕೆದಾರರು ಹಂಚಿಕೊಳ್ಳುತ್ತಾರೆ. ಆದರೆ ನಿಷೇಧಿತ ಈ ನಾಲ್ಕು ವಿಚಾರ ಹಂಚಿಕೊಂಡರೆ ದೂರು ದಾಖಲಾಗುವುದು ಮಾತ್ರವಲ್ಲ, ಸಂಕಷ್ಟ ತಪ್ಪಿದ್ದಲ್ಲ.


ವ್ಯಾಟ್ಸ್ಆ್ಯಪ್‌ನಲ್ಲಿ ಯಾವುದೇ ಅಶ್ಲೀಲ ವೀಡಿಯೋ ಅಥವಾ ಫೋಟೋಗಳನ್ನು ಹಂಚಿಕೊಳ್ಳಲೇಬೇಡಿ. ಈ ರೀತಿ ಮಾಡಿದರೆ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಆಗುತ್ತದೆ. ಯಾವುದೇ ಫಾರ್ವರ್ಡ್ ಫೋಟೋ, ವೀಡಿಯೋ ಹಂಚುವ ಮೊದಲು ಎರಡೆರಡು ಬಾರಿ ಪರಿಶೀಲಿಸಿ. 


ದೇಶ ವಿರೋಧಿ ಸಂದೇಶ, ಫೋಟೋ, ವೀಡಿಯೋಗಳು, ಅಥವಾ ದೇಶದ ಐಕ್ಯತೆ, ಸೌರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಇದೂ ಕೂಡಾ ನಿಯಮ ಬಾಹಿರ. ಈ ಪ್ರಕರಣದಲ್ಲಿ ವ್ಯಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾತ್ರವಲ್ಲ, ದೂರು ದಾಖಲಾಗಲಿದೆ. ದೇಶ ವಿರೋಧಿ ಚಟುವಟಿಕೆ ದೂರು ದಾಖಲಾಗುವ ಕಾರಣ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.


ಮಕ್ಕಳ ಮೇಲಿನ ಕಿರುಕುಳ, ದೌರ್ಜನ್ಯ ಘಟನೆಗಳನ್ನು ವ್ಯಾಟ್ಸ್ಆ್ಯಪ್ ಮೂಲಕ ಹಂಚಿಕೊಳ್ಳಬಾರದು. ಅಪ್ಪಿತಪ್ಪಿ ಇಂತಹ ವೀಡಿಯೋ, ಫೋಟೋಗಳನ್ನು ಶೇರ್ ಮಾಡಿದರೆ ನೇರವಾಗಿ ಜೈಲು ಸೇರುವ ಸಾಧ್ಯತೆಯಿದೆ. ಆದ್ದರಿಂದ ಅತೀವ ಎಚ್ಚರ ವಹಿಸಬೇಕು. ಫಾರ್ವರ್ಡ್ ಮಾಡಿರುವ ವೀಡಿಯೋ ಅಥವಾ ಫೋಟೋ ಅಥವಾ ಸಂದೇಶವಾಗಿದ್ದರೂ ಹಂಚಿಕೊಳ್ಳುವ ಸಾಹಸ ಮಾಡಬೇಡಿ.


ಮತ್ತೊಬ್ಬರ ಫೋಟೋ ವೀಡಿಯೋವನ್ನು ವ್ಯಾಟ್ಸ್ಆ್ಯಪ್ ಮೂಲಕ ಹಂಚಿಕೊಳ್ಳುವಾಗ ಎಚ್ಚರವಿರಲಿ. ಕಾರಣ ನೀವು ಹಂಚಿಕೊಳ್ಳುವ ಮಾಹಿತಿ ಅಥವಾ ಫೋಟೋ, ವಿಡಿಯೋ ಅವರ ಗೌರವಕ್ಕೆ ಧಕ್ಕೆ ತರಬಾರದು. ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಿದ್ದರೆ ಪ್ರಕರಣ ದಾಖಲಾದರೆ ಶಿಕ್ಷೆ ಖಚಿತಾಗಲಿದೆ.


Ads on article

Advertise in articles 1

advertising articles 2

Advertise under the article