ಜನವರಿ 1ರಿಂದ ಸೋಪ್, ಪಾರ್ಲೆ-ಜಿ ಬಿಸ್ಕತ್ತು ಬೆಲೆಯೇರಿಕೆ- ಮದ್ಯಪ್ರಿಯರಿಗೂ ಕಾದಿದೆ ಶಾಕ್
2025ರ ಜನವರಿ 1ರ ಹೊಸವರ್ಷದ ಬಳಿಕ ವಿವಿಧ ಸರಕುಗಳ ಬೆಲೆಗಳ ಮೇಲೆ ಪರಿಣಾಮ ಬೀರಲಿದೆ. ಕೆಲವು ವಸ್ತುಗಳು ಅಗ್ಗವಾಗಲಿವೆ, ಆದರೆ ಇತರವುಗಳು ದುಬಾರಿಯಾಗಬಹುದು. ಬದಲಾವಣೆಗಳು ಮತ್ತು ಗ್ರಾಹಕರ ಮೇಲೆ ಅವುಗಳ ಸಂಭಾವ್ಯ ಪರಿಣಾಮ ಈ ಕೆಳಗಿನಂತಿದೆ
ಎಟಿಎಂ ಹಣ ಹಿಂಪಡೆಯುವಿಕೆ ಶುಲ್ಕಗಳು
ಜನವರಿ 1ರಿಂದ ಬ್ಯಾಂಕ್‌ಗಳು ಮತ್ತು ಎಟಿಎಂ ನಿರ್ವಾಹಕರು ಶುಲ್ಕ ಹೆಚ್ಚಳ ಪ್ರಸ್ತಾಪಿಸಿದ್ದಾರೆ. ಇದರಿಂದ ಎಟಿಎಂ ಹಣ ಹಿಂಪಡೆಯುವಿಕೆ ಹೆಚ್ಚುವರಿ ಶುಲ್ಕ ವಿಧಿಸಬಹುದು. ವಿವರಗಳಿಗಾಗಿ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ
ಮೊಬೈಲ್ ರೀಚಾರ್ಜ್ ಬೆಲೆಗಳು ಕಡಿಮೆ
ಟ್ರಾಯ್ ಮಾರ್ಗಸೂಚಿಗಳನ್ನು ಅನುಸರಿಸಿ ಮೊಬೈಲ್ ರೀಚಾರ್ಜ್ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಮೊಬೈಲ್ ಗ್ರಾಹಕರಿಗೆ ಪ್ರಯೋಜನ ನೀಡಲಿದೆ
ಪಾರ್ಲೆ-ಜಿ ಬಿಸ್ಕತ್ತು ಬೆಲೆ ಏರಿಕೆ
ಉತ್ಪಾದನಾ ವೆಚ್ಚ ಹೆಚ್ಚಳದಿಂದ ಜನವರಿ 1ರಿಂದ ಪಾರ್ಲೆ-ಜಿ ಬಿಸ್ಕತ್ತು ಬೆಲೆಗಳು ಹೆಚ್ಚಾಗಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ
ಸೋಪಿನ ಬೆಲೆ ಏರಿಕೆ
ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸೋಪಿನ ಬೆಲೆಗಳು 7-8% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಮಧ್ಯಮ ವರ್ಗದವರಿಗೆ ಇದರಿಂದ ಖಂಡಿತವಾಗಿಯೂ ಜೇಬಿಗೆ ಹೊಡೆತ ಬೀಳುವುದನ್ನು ಅನುಭವಿಸಲಿದ್ದಾರೆ
ಭಿಕ್ಷೆ ನೀಡುವುದಕ್ಕೆ ನಿಷೇಧ
ಜನವರಿ 1ರಿಂದ ಇಂದೋರ್‌ನಲ್ಲಿ ಭಿಕ್ಷೆ ನೀಡುವುದು ಕಾನೂನು ಕ್ರಮಕ್ಕೆ ಒಳಪಡುತ್ತದೆ. ಸಾರ್ವಜನಿಕರಿಗೆ ಇದಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿದೆ
ಮದ್ಯದ ಬೆಲೆ ಏರಿಕೆ
ಸಂಭಾವ್ಯ ತೆರಿಗೆ ಏರಿಕೆಯಿಂದಾಗಿ ಹೊಸವರ್ಷದೊಂದಿಗೆ ಮದ್ಯದ ಬೆಲೆಗಳು ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ ಇದರ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು
ಎಲ್‌ಪಿಜಿ ಮತ್ತು ಸಿಎನ್‌ಜಿ ಬೆಲೆ ಇಳಿಕೆ
ಜನವರಿ 1ರಿಂದ ಎಲ್‌ಪಿಜಿ ಮತ್ತು ಸಿಎನ್‌ಜಿ ಬೆಲೆಗಳಲ್ಲಿ ಸಂಭಾವ್ಯ ಇಳಿಕೆಯಾಗುವ ನಿರೀಕ್ಷೆಯಿದೆ. ಇದು ಭಾರತದ ಗ್ರಾಹಕರಿಗೆ ಸ್ವಲ್ಪ ಪರಿಹಾರವನ್ನು ನೀಡಬಹುದು
ಎಫ್‌ಎಂಸಿಜಿ ಉತ್ಪನ್ನಗಳ ಬೆಲೆ ಏರಿಕೆ
ಬಿಸ್ಕತ್ತು, ಎಣ್ಣೆ ಮತ್ತು ಸೋಪು ಸೇರಿದಂತೆ ದೈನಂದಿನ ಎಫ್‌ಎಂಸಿಜಿ ಉತ್ಪನ್ನಗಳ ಬೆಲೆಗಳು ಜನವರಿ 1ರಿಂದ ಏರಿಕೆಯಾಗುವ ನಿರೀಕ್ಷೆಯಿದ್ದು, ಮನೆಯ ಬಜೆಟ್ ಮೇಲೆ ಪರಿಣಾಮ ಬೀರಲಿದೆ