-->
10ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮೋಟೊರೊಲಾದಿಂದ 5ಜಿ ಸ್ಮಾರ್ಟ್‌ಫೋನ್: ಇಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ

10ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮೋಟೊರೊಲಾದಿಂದ 5ಜಿ ಸ್ಮಾರ್ಟ್‌ಫೋನ್: ಇಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ



ಮೋಟೊರೊಲಾ ಸಂಸ್ಥೆಯು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬಜೆಟ್‌ನಲ್ಲಿ ಹೊರತರುತ್ತಿದೆ. ಸಾಮಾನ್ಯ ಮತ್ತು ಕೆಳ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ 5G ಸ್ಮಾರ್ಟ್‌ಫೋನ್ ಸಿದ್ಧಪಡಿಸಲಾಗಿದ್ದು, ಡಿಸೆಂಬರ್ 10ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಡಿವೈಸ್‌ ಅನ್ನು ಗ್ರಾಹಕರು ಆನ್‌ಲೈನ್ ಶಾಪಿಂಗ್ ಫ್ಲಾಟ್‌ಫಾರಂ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದು. ಲೆನೊವಾ ಮಾಲಕತ್ವದ  ಈ ಕಂಪೆನಿಯು ಬಿಡುಗಡೆಗೂ ಮುನ್ನವೇ ಹೊಸ ಸ್ಮಾರ್ಟ್‌ಫೋನಿನ ಬೆಲೆ ಹಾಗೂ ವಿಶೇಷತೆಗಳನ್ನು ಬಿಡುಗಡೆ ಮಾಡಿದೆ. ಇದರ ವಿಶೇಷವೇನಂದ್ರೆ ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಕೇವಲ 10 ಸಾವಿರ ರೂಪಾಯಿಯೊಳಗೆ ದೊರೆಯಲಿದ್ದು, ಇದನ್ನು ಬಜೆಟ್ ಫ್ರೆಂಡ್ಲಿ ಎಂದು ಕರೆಯಲಾಗುತ್ತಿದೆ.

ಮೊಟೊರೊಲಾ ಕಂಪೆನಿಯು  Moto G35 5G ಸ್ಮಾರ್ಟ್‌ಫೋನ್ ಡಿಸೆಂಬರ್ 10ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಆಗಸ್ಟ್‌ನಲ್ಲಿಯೇ ಹಲವು ದೇಶಗಳಲ್ಲಿ  Moto G35 5G ಲಾಂಚ್ ಆಗಿದ್ರೂ ಭಾರತಕ್ಕೆ ಮಾತ್ರ ಬಂದಿರಲಿಲ್ಲ. ಈ ಸ್ಮಾರ್ಟ್‌ಫೋನ್ Unisoc T760 ಪ್ರೊಸೆಸರ್ ಜೊತೆ 6.7 ಇಂಚಿನ ಹೈಕ್ವಾಲಿಟಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ.  50MPಯ ಪ್ರೈಮರಿ ಕ್ಯಾಮೆರಾವನ್ನು   Moto G35 5G ಸ್ಮಾರ್ಟ್‌ಫೋನ್ ಒಳಗೊಂಡಿದೆ. ಮಲ್ಟಿಮಿಡಿಯಾ ಎಕ್ಸ್‌ಪಿರಿಯನ್ಸ್ ಮತ್ತು ಉತ್ತಮ ಫೋಟೋಗ್ರಾಫಿಯ ಅನುಭವವನ್ನು ಬಳಕೆದಾರರಿಗೆ ನೀಡಲಾಗಿದೆ. 

ಯುರೋಪಿಯನ್ ಮಾರುಕಟ್ಟೆಯಲ್ಲಿ ಮೊಟೊರೊಲಾ ಈ ಡಿವೈಸ್ 199 ಯುರೋ (ಅಂದಾಜು 19, 000 ರೂಪಾಯಿ) ಬೆಲೆಯಲ್ಲಿ ಲಾಂಚ್ ಮಾಡಲಾಗಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆ 10,000 ರೂ.ಗಿಂತಲೂ ಕಡಿಮೆಯಾಗಿದೆ. ಇದಕ್ಕೂ ಮೊದಲು Moto G34 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಕೇವಲ 10,999 ರೂ. ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಇದೀಗ 5G ಸ್ಮಾರ್ಟ್‌ಫೋನ್‌ನ್ನು ಸಹ ಕಡಿಮೆ ದರದಲ್ಲಿ ಪರಿಚಯಿಸುತ್ತಿದೆ. ಡಿಸೆಂಬರ್ 10ರ ಮಧ್ಯಾಹ್ನ 12ಕ್ಕೆ  Moto G35 5G ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಬ್ಲ್ಯಾಕ್, ಗ್ರೀನ್ ಮತ್ತು ರೆಡ್‌ ಬಣ್ಣಗಳಲ್ಲಿ ಸಿಗಲಿದೆ.

Moto G35 5G ಸ್ಮಾರ್ಟ್‌ಫೋನ್ 6.7  ಇಂಚಿನ ಡಿಸ್‌ಪ್ಲೇಯೊಂದಿಗೆ 120Hz ರಿಫ್ರೆಶ್ ರೇಟ್, 1000nits ಬ್ರೈಟ್‌ನೆಸ್ ಹೊಂದಿರಲಿದೆ.  ಸುರಕ್ಷತೆಗಾಗಿ 3 ತರಹದ ಗೊರಿಲ್ಲಾ ಗ್ಲಾಸ್ ಬಳಸಲಾಗಿದೆ. Unisoc T760 ಪ್ರೊಸೆಸರ್, 8GB RAM ಮತ್ತು 128GB ಸ್ಟೋರೇಜ್ ಒಳಗೊಂಡಿದೆ. ಪ್ರೈಮರಿ ಕ್ಯಾಮೆರಾ 50MP, ಸೆಲ್ಫಿಗಾಗಿ 16MP ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯೊಂದಿಗೆ 18W ಚಾರ್ಜಿಂಗ್ ಸಪೋರ್ಟ್ ಸಿಗಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ  ಸ್ಪೀಕರ್ Dolby Atmos ಸಪೋರ್ಟ್ ಮಾಡುತ್ತವೆ. ಇದರ ಬೆಲೆ 10 ಸಾವಿರ ರೂ. ಅಥವಾ ಅದಕ್ಕಿಂತಲೂ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. 

Ads on article

Advertise in articles 1

advertising articles 2

Advertise under the article