-->
ಊಟದ ಬಳಿಕ 2ಲವಂಗ ತಿಂದಲ್ಲಿ ಏನಾಗುತ್ತದೆ ಗೊತ್ತಾ? ಇಲ್ಲಿದೆ ಫಲಿತಾಂಶ

ಊಟದ ಬಳಿಕ 2ಲವಂಗ ತಿಂದಲ್ಲಿ ಏನಾಗುತ್ತದೆ ಗೊತ್ತಾ? ಇಲ್ಲಿದೆ ಫಲಿತಾಂಶ


ಮಸಾಲಾ ಪದಾರ್ಥವಾದ ಲವಂಗ ನಮ್ಮ ಶರೀರಕ್ಕೆ ಬಹಳವಷ್ಟು ಉತ್ತಮ ಪ್ರಯೋಜನವನ್ನು ಒದಗಿಸುತ್ತದೆ. ಲವಂಗದಲ್ಲಿ ಹಲವು ಪೋಷಕಾಂಶಗಳಿವೆ. ಹಲ್ಲುನೋವು ಸೇರಿದಂತೆ ಬಹಳಷ್ಟು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಲವಂಗ ಭಾರೀ ಉಪಯುಕ್ತ. ಅದೇ ಕಾರಣಕ್ಕೆ ಇಂದಿಗೂ ಆಯುರ್ವೇದದಲ್ಲಿ ಲವಂಗವನ್ನು ಬಳಸಲಾಗುತ್ತದೆ. ಲವಂಗ ಯಾವ ಸಮಸ್ಯೆಗಳನ್ನು ನಿವಾರಿಸುತ್ತದೆ ಗೊತ್ತಾ? ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಊಟದ ಬಳಿಕ ಎರಡು ಲವಂಗ ತಿಂದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ.

ಊಟದ ಬಳಿಕ ಜೀರ್ಣಕ್ರಿಯೆ ಸಮಸ್ಯೆಗಳು ಕಾಡುವವರಿಗೆ ಲವಂಗ ಒಳ್ಳೆಯದು. ಆರೋಗ್ಯ ತಜ್ಞರ ಪ್ರಕಾರ, ಊಟದ ಬಳಿಕ ಎರಡು ಲವಂಗ ತಿಂದಲ್ಲಿ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆ ಹೆಚ್ಚಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗ್ಯಾಸ್, ಆಸಿಡಿಟಿ, ಅಜೀರ್ಣ ಸಮಸ್ಯೆಗಳು ದೂರವಾಗುತ್ತವೆ.

ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ರಾತ್ರಿ ಊಟದ ಬಳಿಕ ಲವಂಗವನ್ನು ಅಗಿದರೆ ಹಲ್ಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಆಹಾರದಿಂದ ಉಂಟಾಗುವ ಬ್ಯಾಕ್ಟೀರಿಯಾ ಬೆಳವಣಿಗೆ ಕಡಿಮೆಯಾಗುತ್ತದೆ. ಲವಂಗದಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಗಳು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ.

ಮಧುಮೇಹಿಗಳಿಗೆ ಊಟದ ಬಳಿಕ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಸಾಮಾನ್ಯ. ಆದರೆ ಅತಿಯಾದರೆ ಸಮಸ್ಯೆ. ಊಟದ ನಂತರ ಎರಡು ಲವಂಗ ಅಗಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದು ತಡೆಯುತ್ತದೆ.

ಕೆಲವರಿಗೆ ಊಟದ ನಂತರ ವಾಕರಿಕೆ ಅನುಭವವಾಗುತ್ತದೆ. ಲವಂಗ ಅಗಿದರೆ ವಾಕರಿಕೆ ಕಡಿಮೆಯಾಗುತ್ತದೆ. ಲವಂಗದ ಸಾರವು ಲಾಲಾರಸದೊಂದಿಗೆ ಬೆರೆತಾಗ ವಾಕರಿಕೆಗೆ ಸಂಬಂಧಿಸಿದ ಲಕ್ಷಣಗಳು ಕಡಿಮೆಯಾಗುತ್ತವೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಲವಂಗ ಉಪಯುಕ್ತ. ಲವಂಗದಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ. ಇದರಿಂದ ದೇಹದಲ್ಲಿರುವ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಬಹುದು.

ಲವಂಗ ಖಾರವಾಗಿರುವುದರಿಂದ ತಿನ್ನಲು ಕಷ್ಟವಾಗಬಹುದು. ಹಾಗಾಗಿ ಲವಂಗ ಚಹಾ ಮಾಡಿ ಕುಡಿಯಬಹುದು. ಕೆಲವು ಲವಂಗಗಳನ್ನು ಬಿಸಿ ನೀರಿನಲ್ಲಿ 5-10 ನಿಮಿಷ ಕುದಿಸಿ. ಲವಂಗ ಚಹಾ ಸಿದ್ಧ.

Ads on article

Advertise in articles 1

advertising articles 2

Advertise under the article