ಕೇವಲ 2 ಸಾವಿರ ಸಾಲ ತೀರಿಸಿಲ್ಲವೆಂದು ಆ್ಯಪ್ ಏಜೆಂಟ್‌ನಿಂದ ಚಿತ್ರಹಿಂಸೆ, ಪತ್ನಿಯ ಮಾರ್ಪ್ ಮಾಡಿದ ನಗ್ನ ಫೋಟೊ ವೈರಲ್- ತಿಂಗಳ ಹಿಂದಷ್ಟೇ ಮದುವೆಯಾದ ವ್ಯಕ್ತಿ ಆತ್ಮಹತ್ಯೆ
Wednesday, December 11, 2024
ಹೈದರಾಬಾದ್: ಕೇವಲ 2 ಸಾವಿರ ರೂ. ಸಾಲ ತೀರಿಸಿಲ್ಲವೆಂದು ಆನ್ಲೈನ್ ಬ್ಯಾಂಕ್ ಆ್ಯಪ್ ಏಜೆಂಟ್‌ಗಳು ನೀಡಿರುವ ಕಿರುಕುಳಕ್ಕೆ ಬೇಸತ್ತು ಆಂಧ್ರಪ್ರದೇಶದ ನವವಿವಾಹಿತರೊಬ್ಬರು ಸಾವಿಗೆ ಶರಣಾಗಿದ್ದಾರೆ. ಸಾಲದ ಆ್ಯಪ್ ಏಜೆಂಟ್‌ಗಳು ಪತ್ನಿಯ ಮಾರ್ಫ್ ಮಾಡಿರುವ ಫೋಟೋಗಳನ್ನು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಕಳುಹಿಸುವ ಮೂಲಕ ಅವಮಾನ ಮಾಡಿದ್ದಾರೆಂದು ನೊಂದು ಈ ರೀತಿ ಮಾಡಿದ್ದಾರೆ.
ನರೇಂದ್ರ (25) ಸಾವಿಗೆ ಶರಣಾದವರು.
ನರೇಂದ್ರ ಅಕ್ಟೋಬರ್ 28ರಂದು ಅಖಿಲಾರೊಂದಿಗೆ ಪ್ರೇಮ ವಿವಾಹವಾಗಿದ್ದರು. ದಂಪತಿ ವಿಶಾಖಪಟ್ಟಣಂನಲ್ಲಿ ವಾಸಿಸುತ್ತಿದ್ದರು. ಅಲ್ಲಿ ನರೇಂದ್ರ ಮೀನುಗಾರರಾಗಿದ್ದರು. ಹವಾಮಾನ ವೈಪರೀತ್ಯದಿಂದ ನರೇಂದ್ರ ಅವರಿಗೆ ಕೆಲವು ದಿನಗಳವರೆಗೆ ಆದಾಯವಿರಲಿಲ್ಲ. ಆದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಕಲುಕಿದ ಅವರು ತನ್ನ ಖರ್ಚು ನಿಭಾಯಿಸಲು ನರೇಂದ್ರ ಆ್ತಪ್‌ನಿಂದ 2,000 ಸಾಲ ಪಡೆದಿದ್ದ. ಕೆಲವೇ ವಾರಗಳಲ್ಲಿ, ಸಾಲದ ಆ್ಯಪ್ ಏಜೆಂಟ್‌ಗಳು ಸಾಲ ಮರುಪಾವತಿಸುವಂತೆ ಕಿರುಕುಳ, ನಿಂದನೀಯ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ.
ಬಳಿಕ ಏಜೆಂಟ್‌ಗಳು ನರೇಂದ್ರ ಅವರ ಪತ್ನಿಯ ಮಾರ್ಫ್ ಮಾಡಿದ ಫೋಟೋಗಳನ್ನು ಎಲ್ಲರಿಗೂ ಕಳುಹಿಸಿದ್ದಾರೆ. ಪತ್ನಿ ಚಿತ್ರದ ಮೇಲೆ ಬೆಲೆಯನ್ನು ಉಲ್ಲೇಖಿಸಿ ನರೇಂದ್ರ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾರೆ. ಚಿತ್ರಗಳು ಅಖಿಲಾ ಅವರ ಫೋನ್‌ಗೂ ಬಂದಾಗ ಆಕೆ ತನ್ನ ಪತಿಗೆ ತಿಳಿಸಿದಳು. ಬಳಿಕ ದಂಪತಿ ಸಂಪೂರ್ಣ ಮೊತ್ತವನ್ನು ಮರುಪಾವತಿಸಲು ನಿರ್ಧರಿಸಿದ್ದರು. ಆದರೆ ಅದು ಸಹಾಯ ಮಾಡಲಿಲ್ಲ. ಕಿರುಕುಳ ಮುಂದುವರೆಯಿತು. ಪರಿಚಯದ ಜನರು ನರೇಂದ್ರನನ್ನು ಕೆಟ್ಟಾಗಿ ನೋಡಲು ಆರಂಭಿಸಿದರು, ಅದು ಅವನನ್ನು ಒಳಗಿನಿಂದ ಛಿದ್ರಗೊಳಿಸಿತು. ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.