-->
ಹೊಸ ವರ್ಷಕ್ಕೂ ಮೊದಲೇ ಜಿಯೋದಿಂದ ಬಂಪರ್ ಆಫರ್: ಸೂಪರ್ ಪ್ಲ್ಯಾನ್‌ನಲ್ಲಿ 200ರೂ. ಇಳಿಕೆ ದಿನಂಪ್ರತಿ  3ಜಿಬಿ ಡಾಟಾ ಫ್ರೀ

ಹೊಸ ವರ್ಷಕ್ಕೂ ಮೊದಲೇ ಜಿಯೋದಿಂದ ಬಂಪರ್ ಆಫರ್: ಸೂಪರ್ ಪ್ಲ್ಯಾನ್‌ನಲ್ಲಿ 200ರೂ. ಇಳಿಕೆ ದಿನಂಪ್ರತಿ 3ಜಿಬಿ ಡಾಟಾ ಫ್ರೀ



ಮುಂಬೈ: ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಬಳಕೆದಾರರಿಗೆ ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್ ನೀಡಿದೆ. ತನ್ನ ಜನಪ್ರಿಯ ಪ್ರಿಪೇಯ್ಡ್ ಪ್ಲ್ಯಾನ್ ಬೆಲೆಯನ್ನು ಇಳಿಕೆ ಮಾಡಿದೆ. ವ್ಯಾಲಿಡಿಟಿ ಮತ್ತು ಡೇಟಾವನ್ನು ಸಹ ಏರಿಕೆ ಮಾಡಿದೆ. ಈ ವಿಶೇಷ ಘೋಷಣೆಯಿಂದ ಜಿಯೋ ಬಳಕೆದಾರರು ಹೊಸ ವರ್ಷಕ್ಕೂ ಮೊದಲೇ ನ್ಯೂ ಇಯರ್ ಆಚರಣೆಗೆ ಮುಂದಾಗಿದ್ದಾರೆ. ಈ ಮೂಲಕ ಎಂಎನ್‌ಪಿ ಮೂಲಕ ಪೋರ್ಟ್ ಆಗುತ್ತಿರುವ ಬಳಕೆದಾರರನ್ನು ತಡೆಯಲು ರಿಲಯನ್ಸ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. 

ರಿಲಯನ್ಸ್ ಜಿಯೋ ದಿಢೀರ್ ಎಂದು ತನ್ನ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಬದಲಾವಣೆಗಳನ್ನು ತಂದಿದೆ. ತನ್ನ ಹಳೆಯ ಪ್ಲ್ಯಾನ್‌ಅನ್ನು ಜಿಯೋ ರಿಲಯನ್ಸ್ ರೀ ಲಾಂಚ್ ಮಾಡಿದೆ.  ಬೆಲೆ ಏರಿಕೆಗೂ ಮೊದಲೇ ಇದೇ ದರದ ಪ್ಲ್ಯಾನ್‌ಗಳು ಲಭ್ಯವಿದ್ದವು. ಹೌದು, ರಿಲಯನ್ಸ್ ಜಿಯೋ 999 ರೂಪಾಯಿ ಪ್ಲಾನ್ ಕೆಲ ಬದಲಾವಣೆಗಳನ್ನು ತಂದಿದೆ. 

ಕೆಲವು ತಿಂಗಳ ಹಿಂದೆ ಖಾಸಗಿ ಟೆಲಿಕಾಂ ಕಂಪನಿಗಳಾದ  ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟ್ಯಾರಿಫ್  ಬೆಲೆಗಳನ್ನು ಏರಿಕೆ ಮಾಡಿಕೊಂಡ ಪರಿಣಾಮ ಗ್ರಾಹಕರು ಬಿಎಸ್‌ಎನ್‌ಎಲ್ ನತ್ತ ಮುಖ ಮಾಡಲು ಆರಂಭಿಸಿದ್ದಾರೆ. ಈ ಹೊರ ಹೋಗುವಿಕೆಯನ್ನು ತಡೆಯಲು ಹೊಸ ಟ್ಯಾರಿಫ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿವೆ. 


ರಿಲಯನ್ಸ್ ಜಿಯೋ 999 ರೂಪಾಯಿ ಪ್ಲಾನ್‌ನ್ನು ಅಪ್‌ಡೇಟ್ ಮಾಡಿ ಬಿಡುಗಡೆಗೊಳಿಸಿದೆ. ಈ ಮೊದಲು 84 ದಿನ ವ್ಯಾಲಿಡಿಟಿಯನ್ನು 999 ರೂಪಾಯಿ ಪ್ಲಾನ್ ಹೊಂದಿತ್ತು. ಇದೀಗ 84 ರಿಂದ 98 ದಿನಕ್ಕೆ ಏರಿಕೆ ಮಾಡಲಾಗಿದೆ. ಒಟ್ಟು 14 ದಿನಗಳನ್ನು ಹೆಚ್ಚಳ ಮಾಡಲಾಗಿದೆ. ಇಷ್ಟು ಮಾತ್ರವಲ್ಲ 2GB ಬದಲಾಗಿ ಪ್ರತಿದಿನ 3GB ಡೇಟಾ ಹೆಚ್ಚಿಸಲಾಗಿದೆ. ಹೆಚ್ಚುವರಿ ಡೇಟಾ ಮತ್ತು ವ್ಯಾಲಿಡಿಟಿಯಿಂದ ನಿಮಗೆ 200 ರೂಪಾಯಿವರೆಗೆ ಉಳಿತಾಯವಾಗಲಿದೆ.


ಉಳಿದಂತೆ 999 ರೂ. ರೀಚಾರ್ಜ್ ಪ್ಲಾನ್‌ನಲ್ಲಿ ಪ್ರತಿದಿನ 100 ಎಸ್ಎಂಎಸ್, ಅನ್‌ಲಿಮಿಟೆಡ್ ಕಾಲ್ ಸಿಗುತ್ತದೆ. ಉಚಿತವಾಗಿ ಜಿಯೋ ಟಿವಿ, ಜಿಯೋ ಸಿನಿಮಾದ ಅಕ್ಸೆಸ್ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ. 


Ads on article

Advertise in articles 1

advertising articles 2

Advertise under the article