ಗುರು ಬಲದಿಂದ 2025ರಲ್ಲಿ ಈ ಮೂರು ರಾಶಿಯವರಿಗೆ ಖುಲಾಯಿಸುತ್ತದೆ ಅದೃಷ್ಟ
Sunday, December 29, 2024
ಜಾತಕ ನಂಬುವವರು ಬಹಳಷ್ಟು ಮಂದಿಯಿದ್ದರೆ. ಅದೇ ರೀತಿ ನಂಬದವರೂ ಇದ್ದಾರೆ. ಅದೇ ರೀತಿ ಕೆಲವರು ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುವವರಿದ್ದಾರೆ. ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ, ಗ್ರಹಗಳ ಚಲನೆಯಿಂದಾಗಿ ಅವುಗಳ ಪ್ರಭಾವವೂ ಕೂಡ ಬದಲಾಗುತ್ತಿರುತ್ತದೆ ಎಂದು ನಂಬಲಾಗಿದೆ.
ನಾವೀಗ 2024ನೇ ವರ್ಷದ ಕೊನೆಯಲ್ಲಿದ್ದೇವೆ. 2025ರ ಹೊಸ ವರ್ಷವನ್ನು ಸ್ವಾಗತಿಸಲು ಕ್ಷಣಗಣನೆ ಆರಂಭವಾಗಿದೆ. ಈ ನೂತನ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತದೆಯೇ ಎಂದು ಯೋಚಿಸುವವರೂ ಇದ್ದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಅಂತೆಯೇ, 2025ರ ಜಾತಕದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಹೊಸ ವರ್ಷದಲ್ಲಿ ಗುರು ಗ್ರಹದ ಬಲ ಇರಲಿದೆ.
ಅಂದಹಾಗೆ 9ಗ್ರಹಗಳಲ್ಲಿ ಗುರುಗ್ರಹವು ಅತ್ಯಂತ ಮಂಗಳಕರ ಗ್ರಹ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಇದು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಸಂಪತ್ತು, ಸಂತಾನ ಹಾಗೂ ವಿವಾಹ ಇತ್ಯಾದಿ ಶುಭ ಸಂಗತಿಗಳಿಗೆ ಗುರುವೇ ಕಾರಣನಾಗಿದ್ದು, 2025ರ ಫೆಬ್ರವರಿ ಮೊದಲ ವಾರದಲ್ಲಿ ಗುರು ವಕ್ರಿ ಸಂಭವಿಸುತ್ತದೆ. ವಕ್ರಿ ಎಂದರೆ ಹಿಂದಿನ ರಾಶಿಚಕ್ರಕ್ಕೆ ಹೋಗುವ ಪ್ರಕ್ರಿಯೆಯಾಗಿದೆ.
ಗುರುಗ್ರಹದ ಹಿಮ್ಮುಖ ಸಂಚಾರವು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಇದು ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
*ಕರ್ನಾಟಕ*
ಗುರುಗ್ರಹವು ಕರ್ಕಾಟಕ ರಾಶಿಚಕ್ರದ 11ನೇ ಮನೆಯಲ್ಲಿ ನಕಾರಾತ್ಮಕ ಸ್ಥಾನದಲ್ಲಿ ಸಾಗುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಗುರು ವಕ್ರಿಯಿಂದಾಗಿ ಒಳ್ಳೆಯದಾಗುತ್ತದೆ. ಹಣದ ಒಳಹರಿವು ಹೆಚ್ಚಾಗಿ ಗಣನೀಯ ಆದಾಯವನ್ನು ಪಡೆಯುತ್ತೀರಿ. ಈ ರಾಶಿಯವರಿಗೆ ಅವಕಾಶಗಳು ಹುಡುಕಿ ಬರುತ್ತವೆ ಮತ್ತು ಬಹುಕಾಲದ ಕನಸುಗಳು ನನಸಾಗುತ್ತವೆ. ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಂತೋಷ ಹೆಚ್ಚಾಗುತ್ತದೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ ಹಾಗೂ ಪ್ರೇಮ ಜೀವನ ಯಶಸ್ವಿಯಾಗಬಹುದು.
*ಸಿಂಹ*
ಗುರು ಗ್ರಹವು ಈ ರಾಶಿಯ 10 ನೇ ಮನೆಯಲ್ಲಿ ನಕಾರಾತ್ಮಕ ಸ್ಥಾನದಲ್ಲಿದೆ. ಹೀಗಾಗಿ ಈ ಅವಧಿಯು ನಿಮಗೆ ತುಂಬಾ ವಿಶೇಷವಾಗಿಸುತ್ತದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಪರವಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವಿರಿ.
*ವೃಷಭ*
ಗುರುಗ್ರಹವು ಈ ರಾಶಿಚಕ್ರದ ಮೊದಲ ಮನೆಯಲ್ಲಿ ದುರ್ಬಲ ಸ್ಥಾನದಲ್ಲಿದೆ. ಗುರು ವಕ್ರಿ ಸಂದರ್ಭದಲ್ಲಿ ನಿಮಗೆ ಸಂತೋಷದ ಸಮಯವನ್ನು ನೀಡುತ್ತದೆ. ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯ ಕೌಶಲ್ಯಗಳನ್ನು ನೀವು ಬಳಸಿಕೊಳ್ಳುತ್ತೀರಿ. ನಿಮ್ಮ ವೈಯಕ್ತಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ.