ಗುರು-ಚಂದ್ರನಿಂದ 2025ರಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಗಳ ಮಂದಿ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ
Wednesday, December 18, 2024
ನಾವೀಗ 2024ನೇ ವರ್ಷದ ಕೊನೆಯ ತಿಂಗಳಿನಲ್ಲಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ 2025ರ ಹೊಸ ವರ್ಷ ಬರಲಿದೆ. ಈ ಹೊಸ ವರ್ಷಕ್ಕೆ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರಿದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳಲ್ಲಿನ ಅಸಮತೋಲನದಿಂದ ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ ಕೆಲವು ಯೋಗಗಳು ರೂಪುಗೊಳ್ಳುತ್ತವೆ ಎಂದು ನಂಬಲಾಗಿದೆ. ಈ ರೀತಿಯಾಗಿ ರೂಪುಗೊಳ್ಳುವ ಅಪರೂಪದ ಯೋಗಗಳ ಪ್ರಭಾವವು ಎಲ್ಲ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
2025ರ ಹೊಸ ವರ್ಷದಲ್ಲಿ ಗ್ರಹಗಳ ಸಂಕ್ರಮಣದ ಮುನ್ಸೂಚನೆಯ ಪ್ರಕಾರ, ಗುರು ಮತ್ತು ಚಂದ್ರನ ಸಂಯೋಗವು ಗಜಕೇಸರಿ ಯೋಗವನ್ನು ಉಂಟುಮಾಡಲಿದೆ. ಈ ಗಜಕೇಸರಿ ಯೋಗವು 2025ರಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ತರಲಿದ್ದು, ಆರ್ಥಿಕವಾಗಿ ಮುಂದುವರಿಯುವ ಅವಕಾಶವನ್ನು ಒದಗಿಸಲಿದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಮಿಥುನ ರಾಶಿ
2025ರಲ್ಲಿ ಎರಡು ಪ್ರಬಲ ಗ್ರಹಗಳ ಸಂಯೋಗದಿಂದ ರೂಪುಗೊಳ್ಳುವ ಗಜಕೇಸರಿ ಯೋಗವು ಮಿಥುನ ರಾಶಿಯವರ ಜೀವನದಲ್ಲಿ ಭಾರೀ ಪ್ರಾಮುಖ್ಯದ ಬದಲಾವಣೆಯನ್ನು ತರಲಿದೆ. ವೃತ್ತಿ ಮತ್ತು ವೈಯುಕ್ತಿಕ ಜೀವನದಲ್ಲಿಯೂ ಈ ರಾಶಿಯವರಿಗೆ ಉತ್ತಮ ಪ್ರಯೋಜನಗಳು ಲಭ್ಯವಾಗಲಿದೆ. ಈ ಅವಧಿಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅವಕಾಶವಿರುತ್ತದೆ. ಆಲೋಚನೆ ಮತ್ತು ಬುದ್ಧಿವಂತಿಕೆಯಲ್ಲಿ ಹೊಸ ಉತ್ಸಾಹ ಇರುತ್ತದೆ. ಇವರು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಹಿಂದೆಂದೂ ಕಾಣದ ಬೆಳವಣಿಗೆ ಕಂಡುಬರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಗಜಕೇಸರಿ ಯೋಗವು ಆರ್ಥಿಕ ಸ್ಥಿರತೆ ಮತ್ತು ವೃತ್ತಿಯಲ್ಲಿ ಮಹತ್ತರ ಬೆಳವಣಿಗೆಯನ್ನು ತರುತ್ತದೆ. ಹೊಸ ಪ್ರಯತ್ನಗಳು ನಿರೀಕ್ಷಿತ ಯಶಸ್ಸನ್ನು ನೀಡುತ್ತವೆ. ಅಲ್ಲದೆ, ಈ ರಾಶಿಯವರ ದೈಹಿಕ ಆರೋಗ್ಯವು ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸುವಷ್ಟು ಸ್ಥಿರವಾಗಿರುತ್ತದೆ. ವೃತ್ತಿಪರ ಮತ್ತು ವೈಯಕ್ತಿಕ ಜೀವನ ಎರಡೂ ಆನಂದದಾಯಕವಾಗಿರುತ್ತದೆ. ಮುಂಬರುವ ವರ್ಷದ ಆರಂಭದಿಂದಲೇ ಹಣದ ಕೊರತೆ ಇಲ್ಲವಾಗುತ್ತದೆ
ಧನುಸ್ಸು ರಾಶಿ
2025ರಲ್ಲಿ ಗಜಕೇಸರಿ ಯೋಗದಿಂದಾಗಿ ಧನುಸ್ಸು ರಾಶಿಯ ಜನರು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸುತ್ತಾರೆ. ಗುರಿಗಳಲ್ಲಿ ಸ್ಪಷ್ಟತೆಯನ್ನು ಪಡೆಯಲು ಮತ್ತು ಹೊಸ ಉದ್ದೇಶವನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬೆಳವಣಿಗೆಯ ಜತೆಗೆ ಮನೆ ಮತ್ತು ವಾಹನ ಖರೀದಿಸಲು ಅವಕಾಶವಿರುತದೆ. ಸ್ನೇಹಿತರು ಮತ್ತು ಸಂಬಂಧಿಕರಿಂದ ಅನಿರೀಕ್ಷಿತವಾಗಿ ಹಣಕಾಸಿನ ನೆರವು ದೊರಕುತ್ತದೆ.