ಬೆಂಗಳೂರು: ಅಪ್ರಾಪ್ತೆಯ ಖಾಸಗಿ ವೀಡಿಯೋ ಇಟ್ಕೊಂಡು ಮನೆಯವರಿಂದ 2.50 ಕೋಟಿ ರೂ. ಪೀಕಿಸಿದ ಆರೋಪಿ ಅಂದರ್
Thursday, December 5, 2024
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಸ್ಕೂಲ್ ಓದುತ್ತಿದ್ದಾಗಲೇ ಯುವಕನನೊಬ್ಬನನ್ನು ಲವ್ ಮಾಡಿದ್ದಾಳೆ. ಆಕೆಯ ಮನೆಯವರು ಕೋಟಿ ಕುಳ ಎಂದು ಗೊತ್ತಾಗುತ್ತಿದ್ದಂತೆ ಆಕೆಯನ್ನು ಸಿನಿಮಾ, ಪಬ್, ರೆಸಾರ್ಟ್, ಪಾರ್ಟಿ ಎಂದೆಲ್ಲಾ ಸುತ್ತಾಡಿಸಿದ್ದಾನೆ.
ಜೊತೆಗೆ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಆಕೆಯಲ್ಲಿ ಹಣ ಕೇಳಲು ಆರಂಭಿಸಿದ್ದಾನೆ. ಆಕೆ ಕೊಡುವುದಿಲ್ಲ ಎಂದು ಯಾವಾಗ ಹೇಳಿದಳೋ, ಆಗ ಹಿಂದೆ ತಾನು ಆಕೆ ಜೊತೆಯಾಗಿ ಇದ್ದಾಗ ತೆಗೆದಿದ್ದ ಖಾಸಗಿ ವೀಡಿಯೋ, ಫೋಟೋಗಳನ್ನು ಮನೆಯವರಿಗೆ ಕಳಿಸಿ ಬರೋಬ್ಬರಿ 2.5 ಕೋಟಿ ರೂ. ದೋಚಿದ್ದಾನೆ.
ಬೆಂಗಳೂರು ಹೊರವಲಯದ ಖಾಸಗಿ ಶಾಲೆಯಲ್ಲಿ 2017-2022ರವರೆಗೆ ವ್ಯಾಸಂಗ ಮಾಡುತ್ತಿದ್ದ ಮೋಹನ್ ಕಮಾರ್ ಎಂಬಾತನಿಗೆ ಹೈಸ್ಕೂಲ್ ಓದುತ್ತಿದ್ದ ಶ್ರೀಮಂತ ಕುಟುಂಬದ ಅಪ್ರಾಪ್ತೆಯ ಪರಿಚಯವಾಗಿದೆ. ಬಳಿಕ ಆಕೆಯನ್ನು ಪ್ರೀತಿಸಲು ಆರಂಭಿಸಿದ್ದಾನೆ. ಆಕೆಯೂ ಪ್ರೀತಿಸಲು ಆರಂಭಿಸಿದ್ದಾಳೆ.
ಆಕೆ ಶಾಲೆಯಲ್ಲಿ ಓದುವಾಗಲೇ ರೆಸಾರ್ಟ್, ಪಬ್, ಪಾರ್ಟಿ, ಸಿನಿಮಾ ಹಾಗೂ ಪಾರ್ಕ್ ಎಂದೆಲ್ಲಾ ಕರೆದುಕೊಂಡು ಸುತ್ತಾಡಿದ್ದಾನೆ. ಇನ್ನು ಹುಡುಗಿ ಮನೆಯವರು ಕೋಟಿ ಕುಳ ಗೊತ್ತಾಗುತ್ತಿದ್ದಂತೆ ಆಕೆಯಿಂದಲೇ ಹಣ ಖರ್ಚು ಮಾಡಿಸಿದ್ದಾನೆ. ಜೊತೆಗೆ ಅಪ್ರಾಪ್ತೆಯಿದ್ದಾಗಲೇ ಆಕೆಯನ್ನು ಹಲವು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ.
ಪ್ರೀತಿ-ಪ್ರೇಮದ ನಾಟಕವಾಡಿ ಬಲೆಗೆ ಬೀಳಿಸಿಕೊಂಡ ಆತ ಆಕೆಯ ತನು ಮನ ಧನವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಆಕೆಯ ಪ್ರೌಢಶಾಲೆ ಮುಗಿಯುತ್ತಿದ್ದಂತೆ ಪ್ರೇಯಸಿಯನ್ನು ಗೋವಾ, ರೆಸಾರ್ಟ್, ಪಾರ್ಟಿ ಎಂದು ಜೊತೆಗೆ ದಿನಗಕಟ್ಟಲೆ ಕರೆದೊಯ್ದಿದ್ದಾನೆ. ಆಗೆಕ್ಲಾ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯ ಖಾಸಗಿ ಫೋಟೋ, ವಿಡಿಯೋ ಸಂಗ್ರಹ ಮಾಡಿಟ್ಟುಕೊಂಡಿದ್ದಾನೆ.
ಬಳಿಕ, ನನಗೆ ಏನೋ ಸ್ವಲ್ಪ ಹಣ ಬೇಕಿದೆ ಕೊಡು ಎಂದು ಕೇಳಿದ್ದಾನೆ. ಯುವತಿ ನಿರಾಕರಿಸಿದ್ದಾಳೆ. ಆಗ ನೀನು ಹಣ ಕೊಡದಿದ್ದರೆ ನಿನ್ನ ಖಾಸಗಿ ಫೋಟೋ ಸೋಶಿಯಲ್ ಮೀಡಿಯಾಗೆ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಆಗಲೂ, ಯುವತಿ ಹಣ ಹೊಂದಿಸಿ ಕೊಡಲು ಸಾಧ್ಯವಾಗದಿದ್ದಾಗ ಯುವತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಆಕೆಯ ಮನೆಯವರಿಗೆ ಕಳಿಸಿ ಬೆದರಿಕೆ ಹಾಕಿದ್ದಾನೆ.
ಹೆದರಿದ ಯುವತಿ ಮನೆಯವರು ಹಂತಹಂತವಾಗಿ 2.5 ಕೋಟಿ ರೂ. ಹಣವನ್ನು ನೀಡಿದ್ದಾರೆ. ಜೊತೆಗೆ, ತನಗಾಗಿ ಬೈಕ್, ಚಿನ್ನಾಭರಣ, ಬೆಲೆ ಬಾಳುವ ವಾಚ್‌ಗಳನ್ನು ಗಿಫ್ಟ್ ಆಗಿ ಪಡೆದುಕೊಂಡಿದ್ದಾನೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈತನ ಕಿರುಕುಳ ತಾಳಲಾರದೇ ಯುವತಿ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಜೊತೆಗೆ, ಆರೋಪಿಯಿಂದ ಕೆಲವೊಂದಿಷ್ಟು ಹಣ, ಚಿನ್ನಾಭರಣ ಹಾಗೂ ಕೆಲವು ವಸ್ತುಗಳನ್ನು ರಿಕವರಿ ಮಾಡಿಕೊಂಡಿದ್ದಾರೆ.