ಹೊಸವರ್ಷಕ್ಕೆ ಮೊಬೈಲ್ ಖರೀದಿ ಮಾಡುವವರಿಗೆ ವಿಶೇಷ ಸುದ್ದಿ: 6,999 ರೂ. ಬೆಲೆಯಲ್ಲಿ ಲಾವಾ ಯುವ4 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆ
ಬೆಂಗಳೂರು: ಭಾರತದ ಸ್ಮಾರ್ಟ್ಫೋನ್ ಕಂಪೆನಿಯಾದ ಲಾವಾ ಮೊಬೈಲ್ಸ್ ಇದೀಗ ವಿನೂತನ ಯುವ4 ಎಂಬ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಿಡುಗಡೆಯಲ್ಲೇ ಲಾವಾ ಗ್ರಾಹಕರ ಗಮನಸೆಳೆದಿದೆ. ಕೇವಲ 6,999 ರೂ. ಆರಂಭಿಕ ಬೆಲೆಯಲ್ಲಿ ಲಾವಾ ಯುವ4 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, ಆನ್ಲೈನ್ ಹಾಗೂ ರಿಟೇಲ್ ಮಳಿಗೆಯಲ್ಲೂ ಲಭ್ಯವಿದೆ. ಯೂನಿಸೊಕ್ 1606 ಚಿಪ್ ಸೆಟ್ ಸೇರಿದಂತೆ ಗ್ಲಾಸಿ ವೈಟ್, ಗ್ಲಾಸಿ ಪರ್ಪಲ್ ಮತ್ತು ಗ್ಲಾಸಿ ಬ್ಲಾಕ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
ಲಾವಾ ಯುವ4 ಸ್ಮಾರ್ಟ್ಫೋನ್ ಬೆಲೆ
4GB + 64GB: 6,999 ರೂಪಾಯಿ
4GB + 128GB: 7,499 ರೂಪಾಯಿ
ಯುವ 4, 16.55 ಸೆಂ.ಮೀ. (6.56”) ಎಚ್.ಡಿ.+ ಪಂಚ್ ಹೋಲ್ ಡಿಸ್ಪ್ಲೇಯನ್ನು 90 ಹರ್ಟ್ಸ್ ರಿಫ್ರೆಶ್ ರೇಟ್ ನೊಂದಿಗೆ ಸಂಯೋಜನೆಗೊಂಡಿದೆ. ಯೂನಿಸೊಕ್ 1606 ಚಿಪ್ಸೆಟ್ ಹೊಂದಿರುವ ಈ ಡಿವೈಸ್ ಎಲ್ಲಾ ಅಪ್ಲಿಕೇಷನ್ಳಿಗೂ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಈ ಚಿಪ್ಸೆಟ್ ಯಾವುದೇ ಆ್ಯಪ್ಗಳಿಗೆ ಸಪೋರ್ಟ್ ಮಾಡಲಿದೆ. ಇದರ 5000 ಎಂಎಎಚ್ ಬ್ಯಾಟರಿಯು ಹೊಂದಿದೆ. ಆದ್ದರಿಂದ ಇದರಲ್ಲಿ ದೀರ್ಘಕಾಲ ಬ್ಯಾಟರಿ ಚಾರ್ಜ್ ಉಳಿಯಲಿದೆ. ಈ ಸ್ಮಾರ್ಟ್ ಫೋನ್ 4 ಜಿಬಿ+ 4ಜಿಬಿ ರ್ಯಾಮ್ ಮತ್ತು 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಹೊಚ್ಚಹೊಸ ಆಂಡ್ರಾಯಿಡ್ 14ರಲ್ಲಿ ನಡೆಯುವ ಯುವ 4 ಸ್ವಚ್ಛ ಮತ್ತು ಇಂಟ್ಯೂಟಿವ್ ಯೂಸರ್ ಇಂಟರ್ ಫೇಸ್ ನೀಡುತ್ತದೆ.
50 ಎಂಪಿ ರಿಯರ್ ಕ್ಯಾಮರಾ ಮತ್ತು 8 ಎಂಪಿ ಫ್ರಂಟ್ ಕ್ಯಾಮರಾದಿಂದ ಹೊಂದಿದೆ. ಹೀಗಾಗಿ ಕ್ಯಾಮೆರಾ ಕ್ವಾಲಿಟಿ ಉತ್ತಮವಾಗಿದೆ. ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಲು ಸಾಧ್ಯವಾಗುತ್ತದೆ. ಈ ಡಿವೈಸ್ ನ ಪ್ರೀಮಿಯಂ ಗ್ಲಾಸಿ ಬ್ಯಾಕ್ ಡಿಸೈನ್, ಸೈಡ್ ಫಿಂಗರ್ ಪ್ರಿಂಟ್ ಸೆನ್ಸರ್ ಮೂಲಕ ಸೊಗಸು ಮತ್ತು ಉನ್ನತೀಕರಿಸಿದ ಭದ್ರತೆಯ ಸ್ಪರ್ಶ ನೀಡುತ್ತದೆ. ಯುವ 4 ಸ್ಮಾರ್ಟ್ಫೋನ್ 1 ವರ್ಷ ವಾರೆಂಟಿ ನೀಡಲಿದೆ.
ಯುವ ಸರಣಿಯು ಸತತವಾಗಿ ಉನ್ನತ ಗುಣಮಟ್ಟದ, ಕೈಗೆಟುಕುವ, ಬಳಕೆದಾರರ ಅನುಭವ ಉನ್ನತೀಕರಿಸುವ ಸ್ಮಾರ್ಟ್ ಫೋನುಗಳನ್ನು ಪೂರೈಸುತ್ತಿದೆ. ಯುವ 4 ಮೂಲಕ ನಾವು ಪ್ರವೇಶ ಹಂತದ ಸ್ಮಾರ್ಟ್ ಫೋನ್ ವಲಯವನ್ನು ಮರು ವ್ಯಾಖ್ಯಾನಿಸುವಲ್ಲಿ ಪ್ರಮುಖ ಹೆಜ್ಜೆ ಇರಿಸುತ್ತಿದೆ ಎಂದು ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ಮುಖ್ಯಸ್ಥ ಸುಧಾಂಶು ಶರ್ಮಾ ಹೇಳಿದ್ದಾರೆ. ಶಕ್ತಿಯುತ ಕಾರ್ಯಕ್ಷಮತೆ, ಅತ್ಯಾಧುನಿಕ ವಿನ್ಯಾಸ ಮತ್ತು ಅಸಾಧಾರಣ ಬೆಲೆಯಲ್ಲಿ ಹೊಚ್ಚಹೊಸ ವಿಶೇಷತೆಗಳನ್ನು ನೀಡುತ್ತಿದ್ದೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಈ ವಿಶೇಷ ಬಿಡುಗಡೆಯು ನಮ್ಮ ರೀಟೇಲ್ ಪ್ರಥಮ ವಿಧಾನವನ್ನು ಎತ್ತಿ ತೋರಿಸುತ್ತಿದೆ. ದಕ್ಷಿಣ ಭಾರತವು ನಮಗೆ ಪ್ರಮುಖ ಪ್ರಗತಿಯ ವಲಯವಾಗಿದೆ. ಯುವ 4 ಈ ಪ್ರದೇಶದ ತಂತ್ರಜ್ಞಾನ ಪ್ರಿಯರಿಗೆ ವಿನ್ಯಾಸಗೊಳಿಸಲಾಗಿದೆ. ಇದು ನಮ್ಮ ಗ್ರಾಹಕರಿಗೆ ಮೆಚ್ಚುಗೆಯಾಗುವ ಮೂಲಕ ಈ ಚಲನಶೀಲ ಮಾರುಕಟ್ಟೆಯಲ್ಲಿ ಟಾಪ್ ಬ್ರಾಂಡ್ ಆಗಿ ಹೊರಹೊಮ್ಮಲಿದೆ ಎಂದಿದ್ದಾರೆ.