-->
ಸಂಸದ ಕ್ಯಾಬ್ರಿಜೇಶ್‌ ಚೌಟರ ಸಾರಥ್ಯದಲ್ಲಿ ನಡೆಯಿತು 8ನೇ ವರ್ಷದ 'ಮಂಗಳೂರು ಕಂಬಳ' - ಇದು ನಗರದೊಳಗಿನ ಏಕೈಕ ಕಂಬಳ

ಸಂಸದ ಕ್ಯಾಬ್ರಿಜೇಶ್‌ ಚೌಟರ ಸಾರಥ್ಯದಲ್ಲಿ ನಡೆಯಿತು 8ನೇ ವರ್ಷದ 'ಮಂಗಳೂರು ಕಂಬಳ' - ಇದು ನಗರದೊಳಗಿನ ಏಕೈಕ ಕಂಬಳ

 


 

 


 

 

ಮಂಗಳೂರು: ದ.ಕ.ಜಿಲ್ಲೆಯ ಸಂಸದ ಕ್ಯಾ.ಬ್ರಿಜೇಶ್‌ ಚೌಟರ ಸಾರಥ್ಯದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ 8ನೇ ವರ್ಷದ ರಾಮ-ಲಕ್ಷ್ಮಣ ಜೋಡುಕರೆ ‘ಮಂಗಳೂರು ಕಂಬ‍ಳ ಅದ್ದೂರಿಯಾಗಿ ನಡೆಯಿತು.

 

ಕಂಬಳವೆಂದರೆ ಹಳ್ಳಿ ಗದ್ದೆಗಳಲ್ಲಿ ನಡೆಯುವ ಜನಪದ ಆಟ. ಆದರೆ ನಗರವಾಸಿಗಳೂ ಕಂಬಳವನ್ನು ನೋಡಿ ಸಂಭ್ರಮಿಸಬೇಕೆಂದು ಕಳೆದ 7ವರ್ಷಗಳಿಂದ ಮಂಗಳೂರು ನಗರ ಭಾಗದಲ್ಲಿಯೇ ಕ್ಯಾ.ಬ್ರಿಜೇಶ್ ಚೌಟರು ಕಂಬಳ ಆಯೋಜಿಸುತ್ತಿದ್ದಾರೆ. ಈ ಬಾರಿ 8ನೇ ವರ್ಷದ ಕಂಬಳ ನಡೆಯಿತು. ಸಿಟಿ ಕಂಬಳದ ಗಮ್ಮತ್ತು ಹೇಗಿತ್ತು ಎಂಬುದಕ್ಕೆ ಈ ಸ್ಟೋರಿ ನೋಡಿ.

 

'ಮಂಗಳೂರು ಕಂಬಳ'ವು ಮಂಗಳೂರು ನಗರದೊಳಗಡೆ ನಡೆಯುತ್ತಿರುವ ಏಕೈಕ ಕಂಬಳ. ಕ್ಯಾ.ಬ್ರಿಜೇಶ್ ಚೌಟರಿಗೆ ಈ ಬಾರಿ ಸಂಸದರಾಗಿ ಮೊದಲ ಕಂಬಳ. ಆದ್ದರಿಂದ ಈ ಬಾರಿಯ ಕಂಬಳಕ್ಕೆ ಬೇರೆಯೇ ರೀತಿಯ ಮೆರುಗು ತುಂಬಿತ್ತು. ಕನೆ ಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗ ಸೇರಿದಂತೆ ಆರು ವಿಭಾಗಗಳಲ್ಲೂ ಕಂಬಳ ಓಟದ ಸ್ಪರ್ಧೆ ನಡೆಯಿತು. ಸುಮಾರು 150ಕ್ಕಿಂತಲೂ ಅಧಿಕ ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಿದೆ. ವಿಜೇತರಿಗೆ ಚಿನ್ನದ ಪವನ್ ಬಹುಮಾನವಾಗಿ ನೀಡಲಾಗಿದೆ.

 

 

ಕಂಬಳವನ್ನು ಸಿನಿಮಾದಲ್ಲಿ, ಲೈವ್‌ನಲ್ಲಿ ನೋಡುತ್ತಿದ್ದ ನಗರವಾಸಿಗಳು, ಕಂಬಳವನ್ನು ಕಣ್ಣಾರೆ ಕಾಣಬೇಕೆಂಬ ಆಸೆಯಿಂದ ಮಂಗಳೂರು ಕಂಬಳಕ್ಕೆ ಬಂದು ಎಂಜಾಯ್ ಮಾಡಿದರು‌. ಕೋಣಗಳ ಓಟವನ್ನು ಬೆರಗು ಕಂಗಳಿಂದ ನೋಡಿ ಖುಷಿಪಟ್ಟರು. ಒಟ್ಟಿನಲ್ಲಿ ಬ್ಯುಸಿ ಲೈಫ್, ಕೆಲಸದ ಜಂಜಾಟದಿಂದ ಬಿಡುವು ಪಡೆದು ಮಂಗಳೂರು ನಗರವಾಸಿಗಳು ಕಂಬಳವನ್ನು ಎಂಜಾಯ್ ಮಾಡಿದರು‌. ಮಂಗಳೂರು ಮಾತ್ರವಲ್ಲದೆ ಹೊರಜಿಲ್ಲೆ, ಹೊರರಾಜ್ಯಗಳಿಂದಲೂ ಕಂಬಳ ಪ್ರಿಯರು ಬಂದು ಸಂಭ್ರಮಿಸಿದರು.

Ads on article

Advertise in articles 1

advertising articles 2

Advertise under the article