-->
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಏಳನೇ ಕ್ಲಾಸ್ ಪಾಸಾದವರಿಗೆ ನೇಮಕಾತಿ- ಅರ್ಜಿ ಸಲ್ಲಿಕೆಗೆ ಐದು ದಿನವಷ್ಟೇ ಬಾಕಿ

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಏಳನೇ ಕ್ಲಾಸ್ ಪಾಸಾದವರಿಗೆ ನೇಮಕಾತಿ- ಅರ್ಜಿ ಸಲ್ಲಿಕೆಗೆ ಐದು ದಿನವಷ್ಟೇ ಬಾಕಿ


ಬ್ಯಾಂಕ್ ಆಫ್ ಇಂಡಿಯಾ (BOI) ವಾಚ್‌ಮ್ಯಾನ್ ಹುದ್ದೆಗೆ ನೇಮಕಾತಿ ನಡೆಸುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.


ಬ್ಯಾಂಕ್ ಆಫ್ ಇಂಡಿಯಾ (BOI) ಖಾಲಿಯಿರುವ ವಾಚ್‌ಮ್ಯಾನ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಿದೆ. ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿ, ರತ್ನಗಿರಿಗೆ ಓರ್ವ ವಾಚ್‌ಮ್ಯಾನ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ವಾಚ್‌ಮ್ಯಾನ್ ಹುದ್ದೆ 3 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಸಂಸ್ಥೆಯ ಹೆಸರು: ಬ್ಯಾಂಕ್ ಆಫ್ ಇಂಡಿಯಾ
ಅಧಿಕೃತ ವೆಬ್‌ಸೈಟ್: www.bankofindia.co.in
ಒಟ್ಟು ಹುದ್ದೆಗಳು: 01
ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್ 
ಕೊನೆಯ ದಿನಾಂಕ 13.12.2024.


ಈ ಹುದ್ದೆಗೆ ಮಾಸಿಕ 12,000ರೂ. ವೇತನ ನಿಗದಿಪಡಿಸಲಾಗಿದೆ. ವಾಚ್‌ಮ್ಯಾನ್ ನೇಮಕಾತಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳು ಮತ್ತು ವಯೋಮಿತಿಯನ್ನು ಕೆಳಗೆ ನೀಡಲಾಗಿದೆ. ವಾಚ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವವರು 7ನೇ ತರಗತಿ ಪಾಸಾಗಿರಬೇಕು. ಅವರ ವಯಸ್ಸು 20-40 ವರ್ಷದೊಳಗಿರಬೇಕು.


ಅರ್ಜಿಗಳನ್ನು ಪರಿಶೀಲಿಸಿ, ಸಂದರ್ಶನಕ್ಕೆ ಅರ್ಹ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ 13 ಡಿಸೆಂಬರ್ 2024 ರಂದು ಅಥವಾ ಅದಕ್ಕಿಂತ ಮೊದಲು ಕಚೇರಿ ಕೆಲಸದ ದಿನಗಳಲ್ಲಿ ಕೆಳಗೆ ನೀಡಿರುವ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ನೋಡಿ.


Ads on article

Advertise in articles 1

advertising articles 2

Advertise under the article