-->
ಸ್ಪೋರ್ಟ್ಸ್ ಶೂ ಧರಿಸಿ ಬಂದಿದ್ದಕ್ಕೆ ಕೆಲಸದಿಂದ ಉದ್ಯೋಗಿಯ ವಜಾ: ಕೋರ್ಟ್ ಮೊರೆ ಹೊಕ್ಕಿದ್ದಕ್ಕೆ ಸಿಕ್ಕಿತು ಭಾರೀ ಮೊತ್ತದ ಪರಿಹಾರ

ಸ್ಪೋರ್ಟ್ಸ್ ಶೂ ಧರಿಸಿ ಬಂದಿದ್ದಕ್ಕೆ ಕೆಲಸದಿಂದ ಉದ್ಯೋಗಿಯ ವಜಾ: ಕೋರ್ಟ್ ಮೊರೆ ಹೊಕ್ಕಿದ್ದಕ್ಕೆ ಸಿಕ್ಕಿತು ಭಾರೀ ಮೊತ್ತದ ಪರಿಹಾರ



ನವದೆಹಲಿ: ಸಾಮಾನ್ಯವಾಗಿ ಎಲ್ಲಾ ಕಂಪೆನಿಗಳಲ್ಲಿ ನೌಕರರಿಗೆ ಕಟ್ಟುನಿಟ್ಟಾದ ನಿಯಮಗಳಿರುತ್ತವೆ. ಅದರಲ್ಲಿ ಪ್ರಮುಖವಾಗಿ ಡ್ರೆಸ್‌ಕೋಡ್ ಕೂಡ ಒಂದಾಗಿದೆ. ಒಂದು ವೇಳೆ ನೌಕರರು ಈ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಕಠಿಣಕ್ರಮವನ್ನು ಜರುಗಿಸಲಾಗುತ್ತದೆ. ಆದರೆ, ಇಲ್ಲೊಂದು ಕಂಪೆನಿಯ ನಿಯಮದ ವಿರುದ್ಧವಾಗಿ ಸ್ಫೋರ್ಟ್ ಶೂ ಧರಿಸಿಕೊಂಡು ಬಂದ ತನ್ನ ಉದ್ಯೋಗಿಯನ್ನು ವಜಾ ಮಾಡಿ ಭಾರೀ ಮೊತ್ತದ ದಂಡ ಕಟ್ಟಿರುವ ಘಟನೆ ನಡೆದಿದೆ.

ಯುನೈಟೆಡ್ ಕಿಂಗ್‌ಡಮ್ ಮೂಲದ ಮ್ಯಾಕ್ಸಿಮಸ್ ಯುಕೆ ಸರ್ವೀಸ್‌ನ ಕಂಪೆನಿ ತನ್ನ ಉದ್ಯೋಗಿ ಎಲಿಜಬೆತ್‌ ಬೆನಾಸ್ಸಿ ಸ್ಪೋರ್ಟ್‌ ಶೂ ಧರಿಸಿ ಆಫೀಸಿಗೆ ಬಂದಿದ್ದರು‌‌. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕಂಪೆನಿಯ ನಡೆಯನ್ನು ಖಂಡಿಸಿ ಯುವತಿ ನ್ಯಾಯಾಲಯ ಮೆಟ್ಟಿಲೇರಿದ್ದಾಳೆ. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮಂಡಳಿಯು ಯುವತಿಗೆ 30,000 ಪೌಂಡ್ (32 ಲಕ್ಷ ರೂ.) ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

20 ವರ್ಷದ ಎಲಿಜಬೆತ್ ಬೆನಾಸ್ಸಿ ಮ್ಯಾಕ್ಸಿಮಸ್ 2 ವರ್ಷಗಳ ಹಿಂದೆ ಅಂದ್ರೆ 2022ರಲ್ಲಿ ಯುಕೆ ಸರ್ವೀಸ್ ಕಂಪೆನಿ ಸೇರಿದ್ದರು. ಆಫೀಸ್‌ನಲ್ಲಿ ಡ್ರೆಸ್‌ಕೋಡ್ ನಿಯಮ ಜಾರಿಯಲ್ಲಿರುವ ಕಾರಣ ಕಂಪೆನಿಯ ವ್ಯವಸ್ಥಾಪಕರು ಯುವತಿ ಸ್ಪೋರ್ಟ್ ಶೂ ಧರಿಸಿರುವುದನ್ನು ಗಮನಿಸಿತ್ತು. ಇದನ್ನೇ ಕಾರಣವನ್ನಾಗಿ ನೀಡಿ ಆಕೆಯನ್ನು ಕೆಲಸದಿಂದ ವಜಾ ಮಾಡಿದ್ದರು. ಕಂಪೆನಿಯ ನಡೆಯನ್ನು ಖಂಡಿಸಿ ಯುವತಿ ದಕ್ಷಿಣ ಲಂಡನ್‌ನ ಕ್ರೋಯ್ಡಾನ್‌ನಲ್ಲಿರುವ ಉದ್ಯೋಗ ನ್ಯಾಯಮಂಡಳಿಗೆ ದೂರು ಸಲ್ಲಿಸಿದ್ದರು.

ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮಂಡಳಿಯು ದೋಷವನ್ನು ಕಂಡುಹಿಡಿಯುವ ಬಯಕೆಯನ್ನು ಕಂಪನಿ ಪ್ರದರ್ಶಿಸಿದೆ ಎಂದು ಕಿಡಿಕಾರಿದ್ದರು. ಯುವತಿಗೆ 30,000 ಪೌಂಡ್ (32 ಲಕ್ಷ ರೂ.) ಪರಿಹಾರ ನೀಡುವಂತೆ ಸೂಚಿಸಿದೆ. ಆಕೆ ಸ್ಪೋರ್ಟ್ಸ್ ಶೂ ಧರಿಸಿದ್ದಳು ಎಂಬ ಕಾರಣಕ್ಕೆ ಉದ್ಯೋಗದಿಂದ ವಜಾಮಾಡುವುದು ಸರಿಯಲ್ಲ. ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡಿದ್ದ ಕಂಪೆನಿಯ ಈ ನಿಯಮವು ಸರಿ ಇಲ್ಲ. ವಯಸ್ಸಿನ ಆಧಾರದ ಮೇಲೆ ತಾರತಮ್ಯ ಮಾಡುವುದು ಅಸಮಂಜಸ ಎಂದು ಕಿಡಿಕಾರಿದೆ.

Ads on article

Advertise in articles 1

advertising articles 2

Advertise under the article