-->
ಯುವಕರು ಕುಳ್ಳಗಿರುವ ಯುವತಿಯರತ್ತ ಆಕರ್ಷಿತರಾಗೋದು ಯಾಕೆ ಗೊತ್ತಾ?: ಐದು ಕಾರಣಗಳು ಇಲ್ಲಿವೆ ನೋಡಿ

ಯುವಕರು ಕುಳ್ಳಗಿರುವ ಯುವತಿಯರತ್ತ ಆಕರ್ಷಿತರಾಗೋದು ಯಾಕೆ ಗೊತ್ತಾ?: ಐದು ಕಾರಣಗಳು ಇಲ್ಲಿವೆ ನೋಡಿ


ಯಾರ ಮಡದಿ ಕುಳ್ಳಗೆ ಇರುತ್ತಾರೋ, ಅವರ ಕೀರ್ತಿ ದೊಡ್ಡದಾಗಿರುತ್ತದೆ ಎಂಬ ಮಾತನ್ನು ಎಲ್ಲರೂ ಕೇಳಿರುತ್ತೀರಿ.ಆದ್ದರಿಂದಲೇ ಹಲವು ಪುರುಷರು ತಮಗಿಂತ ಕಡಿಮೆ ಎತ್ತರವಿರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಹುಡುಗರು ಹೆಚ್ಚಾಗಿ ಕಡಿಮೆ ಎತ್ತರವಿರುವ ಹುಡುಗಿಯರತ್ತ ಆಕರ್ಷಿತರಾಗುತ್ತಾರೆ. ಅವರನ್ನು ವಿವಾಹವಾಗಲು ಇಷ್ಟಪಡುತ್ತಾರೆ. ಅರೇಂಜ್ ಮದುವೆಯಾದರೂ ಹುಡುಗರು, ಯಾವಾಗಲೂ ಕಡಿಮೆ ಎತ್ತರವಿರುವ ಹುಡುಗಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗಿದ್ದು,  ಇದಕ್ಕೆ ಕಾರಣ ಏನು ಎಂಬುದನ್ನು ಸಹ ತಿಳಿಸಲಾಗಿದೆ. 


ಕೆಲವು ಅಧ್ಯಯನಗಳ ಪ್ರಕಾರ, ಪುರುಷರು ಕಡಿಮೆ ಎತ್ತರ ಹಾಗೂ ತೆಳ್ಳಗಿನ ದೇಹ ಹೊಂದಿರುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಈ ಆಕರ್ಷಣೆ ಸಂಸ್ಕೃತಿ, ವೈಯಕ್ತಿಕ ಕಾರಣ  ಮತ್ತು ಸಾಮಾಜಿಕ ವಿಚಾರದಲ್ಲಿ ಕೆಲವೊಮ್ಮೆ ಬದಲಾವಣೆಯಾಗಬಹುದು. ಪುರುಷರು ಕಡಿಮೆ ಎತ್ತರವಿರುವ ಮಹಿಳೆ ಅಥವಾ ಸಂಗಾತಿಯೊಂದಿಗೆ ಬಹುಬೇಗ ಭಾವನಾತ್ಮಕವಾಗಿ ಹೊಂದಿಕೊಳ್ಳುತ್ತಾರೆ. ಅವರೊಂದಿಗಿದ್ದ ಸಂದರ್ಭದಲ್ಲಿ ಅತ್ಯಂತ ಪ್ರೀತಿಯನ್ನು ಕಾಣುತ್ತಾರೆ ಎಂದು ವರದಿಯಾಗಿದೆ.



1. ಸಾಮಾನ್ಯವಾಗಿ ಕುಳ್ಳಗಿರುವ ಯುವತಿಯರು ಹೆಚ್ಚು ಆಕರ್ಷಕವಾಗಿ ಮತ್ತು ಹೆಚ್ಚು ಬುದ್ಧಿವಂತರಂತೆ ಕಾಣುತ್ತಾರೆ. ಆದ್ದರಿಂದ ಭವಿಷ್ಯದಲ್ಲಿ ಎಲ್ಲಾ ಸಂದರ್ಭದಲ್ಲೂ  ಕಡಿಮೆ ಎತ್ತರವಿರುವಲ ಸಂಗಾತಿಯೇ ತನ್ನೊಏ ಜೊತೆಯಲ್ಲಿರುತ್ತಾಳೆ ಎಂದು ಪುರುಷರು ನಂಬುತ್ತಾರೆ. ಯುವತಿಯರ ಎತ್ತರದಲ್ಲಿ ಪುರುಷರು ತಮ್ಮ ಭವಿಷ್ಯದ ಭದ್ರತೆಯನ್ನು ಕಾಣುತ್ತಾರೆ. 


2.ಮೊದಲಿನಿಂದಲೂ ಪುರುಷರು ಮಹಿಳೆಯರಿಗಿಂತ ದೈಹಿಕವಾಗಿ ಅಧಿಕ ಬಲಶಾಲಿಗಳು ಎಂದು ಹೇಳಲಾಗುತ್ತದೆ. ಮಹಿಳೆಯರಿಗಿರುವ ಸೌಮ್ಯಗುಣ ತಾಯಿಯ ಚಿತ್ರಣವನ್ನು ನೀಡುತ್ತಾ ಬರಲಾಗಿದೆ. ಎತ್ತರವಾದ ಮಹಿಳೆ ಬಲಶಾಲಿಯಾಗಿ ಕಾಣುತ್ತಾರೆ ಎಂಬ ಕಾರಣಕ್ಕೂ ಪುರುಷರು ಕಡಿಮೆ ಎತ್ತರವಿರುವ ಯುವತಿಯರತ್ತ ಆಕರ್ಷಿತರಾಗುತ್ತಾರೆ. 


3.ಪುರುಷ ತನ್ನ ಸಂಗಾತಿ ತನ್ನ ಎದೆಯತ್ತರಕ್ಕೆ ಇರಬೇಕು ಎಂದು ಭಾವಿಸುತ್ತಾರೆ. ಇದರಿಂದ ಸಂಗಾತಿಯನ್ನು ಮುದ್ದಾಗಿ ಅಪ್ಪಿಕೊಳ್ಳಬಹುದು ಎಂಬುವುದು ಹಲವರ ಅಭಿಪ್ರಾಯವಾಗಿದೆ. ಕಡಿಮೆ ಎತ್ತರವಿರುವ ಮಹಿಳೆ ಮತ್ತು ಎತ್ತರದ ಪುರುಷನ ಜೋಡಿಯೂ ಆಕರ್ಷಕವಾಗಿ ಕಾಣುತ್ತದೆ. ಎತ್ತರ ಕಾಳಜಿಯ ಭಾವನೆಯನ್ನು ಹುಟ್ಟು ಹಾಕುತ್ತದೆ. 


4.ಪುರುಷ ಮತ್ತು ಮಹಿಳೆಯರ ಎತ್ತರದಲ್ಲಿ ವ್ಯತ್ಯಾಸವಿದ್ದಾಗ ಇದು ಸಂಬಂಧದಲ್ಲಿನ ಸಮತೋಲನಕ್ಕೆ ಕಾರಣವಾಗುತ್ತದೆ ಎಂಬುವುದು ಹಲವರ ಅಭಿಪ್ರಾಯವಾಗಿದೆ. ಸಂಬಂಧದಲ್ಲಿನ ಸಮತೋಲನಕ್ಕಾಗಿ ಹುಡುಗನ ಎತ್ತರಕ್ಕಿಂತ ಹುಡುಗಿಯ ಎತ್ತರ ಕಡಿಮೆ ಇರಬೇಕು ಎಂಬ ನಂಬಿಕೆಯಿದೆ. 


5. ಕಡಿಮೆ ಎತ್ತರವಿರುವ ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೂಕ್ಷ್ಮತೆ ಮತ್ತು ಆಕರ್ಷಕ ದೇಹದಿಂದ ಎಲ್ಲರ  ನಡುವೆಯೂ ಗುರುತಿಸಿಕೊಳ್ಳುತ್ತಾರೆ. ಕಡಿಮೆ ಎತ್ತರವಿರುವ ಮಹಿಳಯರು ಆರೋಗ್ಯಕರವಾಗಿರುತ್ತವೆ. ಎತ್ತರವಿರುವ ಪುರುಷ ಸಂಗಾತಿಯೊಂದಿಗೆ ಆಕರ್ಷಿತವಾಗಿ ಕಾಣಿಸುತ್ತಾರೆ. 


Ads on article

Advertise in articles 1

advertising articles 2

Advertise under the article