ಚಳಿಗಾಲದಲ್ಲಿ ಬೆಲ್ಲ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
Friday, December 13, 2024
ಬಹಳಮಂದಿ ಪ್ರತಿದಿನ ಸಕ್ಕರೆಯನ್ನು ಹಲವಾರು ವಿಧಗಳಲ್ಲಿ ಉಪಯೋಗಿಸುತ್ತಿರುತ್ತಾರೆ. ಆದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಸಕ್ಕರೆ ಬದಲು ಬೆಲ್ಲ ತಿನ್ನಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಎರಡೂ ಕಬ್ಬಿನಿಂದಲೇ ಮಾಡಿದ್ದಾದರೂ ಬೆಲ್ಲ ಹೇಗೆ ಆರೋಗ್ಯಕರ ಎಂದು ನಾವು ತಿಳಿಸುತ್ತೇವೆ.
ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ, ಜ್ವರ ಬರದಂತೆ ತಡೆಯುತ್ತವೆ. ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ದೇಹವು ಬೆಚ್ಚಗಿರುತ್ತದೆ. ಹೆಚ್ಚು ಚಳಿ ಅನಿಸುವುದಿಲ್ಲ.
ಬೆಲ್ಲ ತಿಂದಲ್ಲಿ ರಕ್ತ ಮತ್ತು ಲಿವರ್‌ನಲ್ಲಿರುವ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಹಾಗೆಯೇ ದೇಹ ಶುದ್ಧಿಯಾಗುತ್ತದೆ. ಪೋಷಕಾಂಶಗಳಿಂದ ತುಂಬಿರುವ ಬೆಲ್ಲದಲ್ಲಿ ಮೆಗ್ನಿಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮುಂತಾದ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ.
ಚಳಿಗಾಲದಲ್ಲಿ ಬೆಲ್ಲವನ್ನು ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಹಾಗೆಯೇ ಉಸಿರಾಟದ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ.