ನೂತನ ವರ್ಷಕ್ಕೆ ಕಾರುಗಳ ಖರೀದಿಸಲು ಪ್ಲ್ಯಾನ್ ಇದೆಯೇ?: ಅಪ್ಡೇಟ್ ನೀಡಿದ ಮಹೀಂದ್ರಾ
Sunday, December 8, 2024
ಇನ್ನೇನು ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಗಮಿಸುತ್ತಿದೆ. ಆದ್ದರಿಂದ ಕೆಲವು ಕಂಪೆನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಆಫರ್‌ಗಳನ್ನು ನೀಡುತ್ತದೆ. ಕಾರು, ಬೈಕ್, ಎ
ಇಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಆಫರ್‌ಗಳು ಇರುತ್ತದೆ. ಇದರಿಂದ ಗ್ರಾಹಕರಿಗೆ ಉತ್ಪನ್ನಗಳೊಂದಿಗೆ ಇತರ ಕೊಡುಗೆಗಳು ಲಭ್ಯವಾಗಲಿದೆ. ಇತ್ತೀಚೆಗೆ ಮಹೀಂದ್ರ ಅತ್ಯಾಕರ್ಷಕ ಇಲೆಕ್ಟ್ರಿಕ್ ಕಾರು, ಎಸ್‌ಯುವಿ ಕಾರುಗಳನ್ನು ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಹೊಸ ಅಪ್‌ಡೇಟ್ ನೀಡಿದೆ.
ಹೊಸ ವರ್ಷಕ್ಕೆ ಕಾರು ಖರೀದಿಸಲು ಪ್ಲ್ಯಾನ್ ಮಾಡಿರುವ ಗ್ರಾಹಕರಿಗೆ ನಿರಾಸೆಯಾಗಲಿದೆ. ಕಾರಣ ಆಫರ್‌ಗಳು ಇರುವುದಿಲ್ಲ ಎಂದಲ್ಲ, ಹೊಸವರ್ಷವೆಂದರೆ ಜನವರಿ 1, 2025ರಿಂದ ಮಹೀಂದ್ರ ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಮಹೀಂದ್ರ ಮಾತ್ರವಲ್ಲ ಈಗಾಗಲೇ ಹಲವು ಆಟೋಮೊಬೈಲ್ ಕಂಪೆನಿಗಳು ತಮ್ಮ ತಮ್ಮ ಕಾರುಗಳ ಬೆಲೆ ಏರಿಕೆ ಮಾಡಿದೆ. ಇದೀಗ ಮಹೀಂದ್ರ ಘೋಷಣೆ ಮಾಡಿದೆ.
ಮಹೀಂದ್ರ ತನ್ನ ಥಾರ್, ಎಕ್ಸ್‌ಯುವಿ 3ಎಕ್ಸ್ ಬೊಲೆರೋ, ಬೊಲೆರೋ ನಿಯೋ, ಎಕ್ಸ್‌ಯುವಿ 700, ಸ್ಕಾರ್ಪೋಯಿ ಎನ್, ಥಾರ್ ರಾಕ್ಸ್ ಹಾಗೂ ಎಕ್ಸ್‌ಯುವಿ400 ಇವಿ(ಎಲೆಕ್ಟ್ರಿಕ್ ಕಾರು)ಕಾರುಗಳ ಬೆಲೆ ಏರಿಕೆ ಮಾಡಿದೆ. ಮಹೀಂದ್ರ ತನ್ನ ಬಹುತೇಕ ಎಲ್ಲಾ ಕಾರುಗಳ ಬೆಲೆ ಏರಿಕೆ ಮಾಡಿದೆ. ಈ ಪೈಕಿ ಹೊಸದಾಗಿ ಬಿಡುಗಡೆ ಮಾಡಿದ ಬಿಐ 6ಇ ಹಾಗೂ ಎಕ್ಸ್‌ಇವಿ 9ಇ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಕಾರುಗಳ ಬೆಲೆ ಏರಿಕೆಯಾಗಿದೆ.
ಮಹೀಂದ್ರ ಕಾರುಗಳ ಬೆಲೆ ಹೊಸ ವರ್ಷದಿಂದ ಶೇಕಡಾ 3ರಷ್ಟು ಏರಿಕೆಯಾಗಲಿದೆ ಎಂದು ಘೋಷಿಸಿದೆ. ಆದರೆ ಪ್ರತಿ ಕಾರುಗಳ ಬೆಲೆಯಲ್ಲಿ ಗರಿಷ್ಠ ಏರಿಕೆ ಕುರಿತು ಮಾಹಿತಿ ನೀಡಿಲ್ಲ. ಇತ್ತೀಚೆಗೆ ಮಾರುತಿ ಸುಜುಕಿ, ಹ್ಯುಂಡೈ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳು ಬೆಲೆ ಏರಿಕೆ ಮಾಡಿದೆ. ಇದೀಗ ಮಹೀಂದ್ರ ಸರದಿ.
ಕಚ್ಚಾ ವಸ್ತುಗಳ ಬೆಲೆ ಏರಿಕೆ, ಆಮದು ಸುಂಕ ಸೇರಿದಂತೆ ಹಲವು ಬೆಲೆ ಏರಿಕೆಯಿಂದ ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದಿದೆ. ಬಹುತೇಕ ಕಾರು ಕಂಪನಿಗಳು ಶೇಕಡಾ 3ರಷ್ಟು ಬೆಲೆ ಏರಿಕೆ ಮಾಡಿದೆ. ಹ್ಯುಂಡೈ ಇಂಡಿಯಾ ಕೂಡ ಶೇಕಡಾ 3ರಷ್ಟು ಬೆಲೆ ಏರಿಕೆ ಮಾಡಿದೆ. ಮಾರುತಿ ಸುಜುಕಿ ಶೇಕಡಾ 4ರಷ್ಟು ಬೆಲೆ ಏರಿಸಿದೆ.