ಆನ್ಲೈನ್ ಗೇಮ್ ಸಾಲ ತೀರಿಸಲು ದರೋಡೆಗಿಳಿದ ಖದೀಮ: ಮರ ಕತ್ತರಿಸುವ ಯಂತ್ರದಿಂದ ರೈತನ ಕತ್ತು ಕತ್ತರಿಸಿ ಹತ್ಯೆಗೈದ ಕೊಲೆಪಾತಕಿ
ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯ ಹೊರವಲಯದ ತೋಟಮನೆಯಲ್ಲಿ ರೈತನನ್ನುರ ಕತ್ತರಿಸುವ ಯಂತ್ರದಲ್ಲಿ ಭೀಕರವಾಗಿ ಹತ್ಯೆ ಮಾಡಿರು ಘಟನೆ ನಡೆದಿದ್ದು, ಪೊಲೀಸರು ಆರೋಪಿಯ ಕೃತ್ಯದ ಬಗ್ಗೆ ಕೇಳಿ ಬೆಚ್ಚಿ ಬಿದ್ದಿದ್ದಾರೆ.
ಆನ್ಲೈನ್ ಗೇಮ್ನಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ದರೋಡೆಗೆ ಇಳಿದಿದ್ದ ಮೊಹಮದ್ ಇಬ್ರಾಹಿಂ ಅಡ್ಡ ಬಂದವರನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಹಣ ಲಪಟಾಯಿಸಲು ಮುಂದಾಗಿದ್ದಾಗಿ ಪೊಲೀಸರ ಮುಂದೆ ಒಪ್ಪಿದ್ದಾನೆ.
ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿ ಬರ್ಬರ ಹತ್ಯೆ ಪ್ರಕರಣದ ಸಂಬಂಧ ಪೊಲೀಸರಿಂದ ಹಂತಕನ ತೀವ್ರ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಕೊಲೆಪಾತಕಿ ಶಾಕಿಂಗ್ ವಿಚಾರ ಬಾಯಿಬಿಟ್ಟಿದ್ದಾನೆ. ಇನ್ನು ಕೊಲೆಗಡುಕನ ಹಿಸ್ಟರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿವಾಸಿ ಮೊಹಮ್ಮದ್ ಇಬ್ರಾಹಿಂ, ಆನ್ಲೈನ್ ಗೇಮ್ ಸುಳಿಗೆ ಸಿಲುಕಿದ್ದಾನೆ. ಇದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಪರದಾಡಿದ್ದಾನೆ.
ಬಳಿಕ ಸಾಲ ತೀರಿಸಲು ದರೋಡೆಗೆ ಪ್ಲಾನ್ ಮಾಡಿದ್ದಾನೆ. ಆದರೆ, ದರೋಡೆಗಾಗಿ ಹೋಗುವಾಗ ಯಾರಾದರೂ ಅಡ್ಡಬಂದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಲು ಕ್ರೂರ ಯೋಜನೆ ರೂಪಿಸಿದ್ದಾರೆ. ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡಿದ್ದಾನೆ. ಕ್ಯಾತನಹಳ್ಳಿಗೂ ಮುನ್ನ ಕೆನ್ನಾಳು ಗ್ರಾಮದಲ್ಲಿ ದರೋಡೆಗೆ ಯತ್ನ ಮಾಡಿದ್ದಾನೆ. ಆದರೆ, ಮನೆಯಲ್ಲಿ ಹೆಚ್ಚು ಮಂದಿ ಹಾಗೂ ಸಿಸಿಟಿವಿ ಇದ್ದಿದ್ದರಿಂದ ಅಲ್ಲಿಂದ ವಾಪಸ್ಸು ಆಗಿದ್ದಾನೆ.
ಬಳಿಕ ಕ್ಯಾತನಹಳ್ಳಿ ಬಳಿಯ ಒಂಟಿ ಮನೆಗೆ ಬಂದಿದ್ದಾನೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದ ತೋಟದ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ. ಮನೆಯಲ್ಲಿ ವಯಸ್ಸಾದ ದಂಪತಿ ಇದ್ದಿದ್ದರಿಂದ ಕೊಲೆಗೈದು ದರೋಡೆಗೆ ಯತ್ನ ಮಾಡಿದ್ದಾನೆ. ಮನೆಯಿಂದ ಹೊರಗೆ ಬಂದ ಮಹಿಳೆ ಯಶೋಧಮ್ಮನಿಗೆ ನೀವು ಮರ ಕತ್ತರಿಸುವ ಯಂತ್ರ ಆರ್ಡರ್ ಮಾಡಿದ್ದೀರಿ ತೆಗೆದುಕೊಳ್ಳಿ ಎಂದಿದ್ದಾನೆ. ನಾವು ಆರ್ಡರ್ ಮಾಡಿಲ್ಲವೆಂದರೂ ಕೇಳದೇ ಮನೆಯೊಳಗೆ ಮರ ಕತ್ತರಿಸುವ ಯಂತ್ರವನ್ನು ಬ್ಯಾಗ್ನಿಂದ ತೆಗೆದು ಮಹಿಳೆಯ ಮುಖಕ್ಕೆ ಹಿಡಿದು ಸ್ವಲ್ಪ ಭಾಗ ಕೊಯ್ದಿದ್ದಾನೆ. ತಕ್ಷಣ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಬಳಿಕ ಒಳಗೆ ಹೋದ ಇಬ್ರಾಹಿಂ ಹಾಸಿಗೆ ಮೇಲೆ ಸ್ಟ್ರೋಕ್ ಆಗಿ ಬಿದ್ದಿದ್ದ ಯಶೋಧಮ್ಮ ಪತಿ ರಮೇಶ್ ಅವರು, 'ನೀನು ಯಾರೆಂದು' ವಿಚಾರಿಸಿ ಜೋರಾಗಿ ಧ್ವನಿ ಮಾಡುತ್ತಿದ್ದಂತೆ ಅವರ ಕತ್ತನ್ನು ಮರದ ದಿಮ್ಮಿ ಕತ್ತರಿಸುವಂತೆ ಕತ್ತರಿಸಿ ಹಾಕಿದ್ದಾನೆ. ಇತ್ತ ಗಂಭೀರ ಗಾಯಗೊಂಡ ನಡುವೆಯೂ ಯಶೋದಮ್ಮ ಮನೆಯಿಂದ ಹೊರಬಂದು ಬಾಗಿಲು ಲಾಕ್ ಮಾಡಿದ್ದಾರೆ. ಬಾಗಿಲು ತೆರೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದು, ಇಲ್ಲದಿದ್ದರೆ ನಿನ್ನ ಪತಿಯನ್ನು ಕೊಲೆ ಮಾಡುವುದಾಗಿ ಹೇಳಿ ಮರ ಕತ್ತರಿಸುವ ಯಂತ್ರದಿಂದ ಮನಸೋ ಇಚ್ಛೆ ಕತ್ತರಿಸಿದ್ದಾನೆ. ಆಗ ಮಹಿಳೆ ಧೈರ್ಯ ಕಳೆದುಕೊಳ್ಳದೇ ಇತರರನ್ನು ಸಹಾಯಕ್ಕೆ ಕರೆದು, ಕಳ್ಳನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.