-->

ಕೆಟ್ಟ ಕನಸಾಗಿ ಮುಗಿದುಹೋಗಲಿ... ಖಾಸಗಿ ವೀಡಿಯೋ ಬೆನ್ನಲ್ಲೇ ನಟಿ ಪ್ರಜ್ಞಾ ನಾಗ್ರಾ ಭಾವುಕ ಸಂದೇಶ

ಕೆಟ್ಟ ಕನಸಾಗಿ ಮುಗಿದುಹೋಗಲಿ... ಖಾಸಗಿ ವೀಡಿಯೋ ಬೆನ್ನಲ್ಲೇ ನಟಿ ಪ್ರಜ್ಞಾ ನಾಗ್ರಾ ಭಾವುಕ ಸಂದೇಶ


ನಟಿ ಪ್ರಜ್ಞಾ ನಾಗ್ರಾರವರದ್ದು ಎನ್ನಲಾಗಿರುವ ಲೀಕ್ಡ್ ವೀಡಿಯೋ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಿಯಕರನೊಂದಿಗೆ ಇರುವ ವೀಡಿಯೋ ವೈರಲ್ ಆಗಿದೆ ಎನ್ನಲಾಗಿದೆ.


ಪ್ರಜ್ಞಾ ನಾಗ್ರಾ ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. "ಇದೊಂದು ಕೆಟ್ಟ ಕನಸಾಗಿ ಮುಗಿದುಹೋಗಲಿ ಎಂದು ಬಯಸುತ್ತೇನೆ" ಎಂದಿದ್ದಾರೆ.

"ನನ್ನ ಪರಿಸ್ಥಿತಿ ಬೇರೆ ಯಾವ ಮಹಿಳೆಗೂ ಬರಬಾರದು. ಎಲ್ಲರೂ ಸುರಕ್ಷಿತವಾಗಿರಿ" ಎಂದು ಪ್ರಜ್ಞಾ ನಾಗ್ರಾ ಹೇಳಿದ್ದಾರೆ. ಅವರ ಖಾಸಗಿ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಈ ಹೇಳಿಕೆ ನೀಡಿದ್ದಾರೆ.


ಪ್ರಜ್ಞಾ ನಾಗ್ರಾ ಹರಿಯಾಣ ಮೂಲದವರು. 2022ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಲಗ್ಗಂ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.


ಇತ್ತೀಚೆಗೆ ಡೀಪ್‌ಫೇಕ್ ವಿಡಿಯೋಗಳಿಂದ ಹಲವು ನಟಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಶ್ಮಿಕಾ ಮಂದಣ್ಣ, ಕಾಜೋಲ್, ಪ್ರಿಯಾಂಕಾ ಚೋಪ್ರಾ, ನೋರಾ ಫತೇಹಿ ಇವರಲ್ಲಿ ಕೆಲವರು. ಪ್ರಜ್ಞಾ ನಾಗ್ರಾ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.


Related Posts

Ads on article

Advertise in articles 1

advertising articles 2

Advertise under the article