ರೀಲ್ಸ್‌ಗಾಗಿ ನಾಯಿ ಹಾಲು ಕುಡಿದ ಯುವತಿ: ವೈರಲ್ ವೀಡಿಯೋ ನೋಡಿ ಕಿಡಿಕಾರಿದ ನೆಟ್ಟಿಗರು
Monday, December 16, 2024
ಸೆಲ್ಪಿ ತೆಗೆಯುವುದು, ರೀಲ್ಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿಬಿಟ್ಡಿದೆ. ರೀಲ್ಸ್‌ಗಾಗಿ ಜನರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಸದ್ಯ ಯುವತಿಯೊಬ್ಬಳ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ.
ವೈರಲ್ ವೀಡಿಯೋದಲ್ಲಿ ನಾಯಿ ಮಲಗಿರುವುದನ್ನು ನೋಡಬಹುದು. ರೀಲ್ಸ್ ಮಾಡುವ ಹುಚ್ಚಾಟದಿಂದ ನಾಯಿ ಮಲಗಿರುವ ಸಮಯದಲ್ಲಿ ಯುವತಿಯೊಬ್ಬಳು ಬಗ್ಗಿ ಅದರ ಹಾಲು ಕುಡಿಯುತ್ತಿರುವುದನ್ನು ಕಾಣಬಹುದು. ಲೈಕ್ ಮತ್ತು ಕಾಮೆಂಟ್ ಪಡೆಯಲು ಈ ಯುವಜನತೆ ಯಾವ ಮಟ್ಟಕ್ಕೆ ಇಳಿಯುತ್ತದೆ ಎಂಬುದಕ್ಕೆ ಇದೇ ನಿದರ್ಶನ.
ಈ ವೀಡಿಯೋ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದುವರೆಗೂ ಈ ವೀಡಿಯೋವನ್ನು 7.63 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅವಳು ಇಂದಿನ ಮಹಿಳೆ ಏನು ಬೇಕಾದರೂ ಮಾಡಬಹುದು. ಆಕೆ ದೇಶದ ಪ್ರಸಿದ್ಧ ರೀಲ್ಸ್ ಮಾಡುವ ಮೂಲಕ ಪ್ರಸಿದ್ಧಳಾಗುವ ಹುಚ್ಚಳಾಗಿದ್ದಾಳೆ. ಓ ಕರ್ತನೇ.. ನೀನು ಇದನ್ನೆಲ್ಲಾ ಏಕೆ ನೋಡಬೇಕು?, ನಾಯಿ ಎಚ್ಚರವಾಗಿ ಕಚ್ಚಿದ್ದರೆ ಏನು ಮಾಡುತ್ತಿದ್ದಳು ಎಂದು ಕಾಮೆಂಟ್ ಮಾಡಿದ್ದಾರೆ.