ರಿಲೇಷನ್‌ಶಿಪ್‌ನಲ್ಲಿ ಮೋಸ ಮಾಡುವವರು ಯಾರು ಗೊತ್ತಾ?
ಹೊಸ ಸಂಬಂಧವನ್ನು ಆರಂಭಿಸುವುದು ಎಷ್ಟು ಸುಲಭವೋ, ಅದನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟಕರ. ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಪ್ರಾಮಾಣಿಕರಾಗಿದ್ದರೆ ಮಾತ್ರ ಸಂಬಂಧ ಹೆಚ್ಚು ಕಾಲ ಉಳಿಯುತ್ತದೆ. ಕೆಲವರು ಪರ್ಫೆಕ್ಟ್ ರಿಲೇಷನ್ಶಿಪ್ಗೆ ಹೊಂದಿಕೊಳ್ಳುವುದಿಲ್ಲ. ಅಂಥವರಿಗೆ ಕಮಿಟ್ಮೆಂಟ್ ಕೇವಲ ಟೈಂಪಾಸ್. ಯಾವ ರೀತಿಯ ಜನ ರಿಲೇಷನ್‌ಶಿಪ್‌ನಲ್ಲಿ ಮೋಸ ಮಾಡಬಹುದು ಎಂದು ತಿಳಿಯೋಣ.
ಸೀರಿಯಲ್ ಡೇಟರ್ಗಳಿಗೆ ಒಬ್ಬರೊಂದಿಗಿನ ಸಂಬಂಧದಲ್ಲಿ ಹೆಚ್ಚು ಸಮಯ ಇರಲು ಸಾಧ್ಯವಾಗುವುದಿಲ್ಲ. ಅಂಥವರು ಬೇಗ ಬೇಜಾರಾಗಿ ಬೇರೆಯವರೊಂದಿಗೆ ಡೇಟ್ ಮಾಡಲು ಆರಂಭಿಸುತ್ತಾರೆ. ಇವರ ರಿಲೇಷನ್ಶಿಪ್ಗಳು ಅಲ್ಪಕಾಲದಲ್ಲಿಯೇ ಮುರಿದುಬೀಳುತ್ತದೆ. ಅವರು ಉತ್ತಮ ಪಾರ್ಟ್ನರ್ಗಾಗಿ ಹುಡುಕುತ್ತಾ ಇರುತ್ತಾರೆ. ಆದ್ದರಿಂದ ಯಾರಾದರೂ ಸೀರಿಯಲ್ ಡೇಟರ್ಗಳಿಂದ ದೂರವಿರಬೇಕು.
ಯಾವುದೇ ಸಂಬಂಧದಲ್ಲಿ ಪ್ರಾಮಾಣಿಕತೆ ಮತ್ತು ಮುಕ್ತತೆ ಅತೀ ಮುಖ್ಯವಾಗುತ್ತದೆ. ನಿಮ್ಮ ಸಂಗಾತಿ ಎಲ್ಲಾ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ, ಅವರು ನಿಮಗೆ ಮೋಸ ಮಾಡುವ ಸಾಧ್ಯತೆಯಿದೆ. ಅಂಥವರು ಏನೇ ಕೇಳಿದರೂ ಸರಿಯಾಗಿ ಉತ್ತರಿಸುವುದಿಲ್ಲ ಅಥವಾ ಸುತ್ತಿಬಳಸಿ ಮಾತನಾಡುತ್ತಾರೆ. ತಮ್ಮ ಫೋನ್, ಸೋಶಿಯಲ್ ಮೀಡಿಯಾ ಮತ್ತು ಲೈವ್ ಲೊಕೇಶನ್ ಕೂಡ ಹೇಳುವುದಿಲ್ಲ.
ಸಂಬಂಧದಲ್ಲಿ ಏನಾದರೂ ತಪ್ಪಾದಾಗ, ಪಾರ್ಟ್ನರ್ ತಪ್ಪು ಒಪ್ಪಿಕೊಳ್ಳದೆ, ತಾನು ಹೀಗೇ ಅಂತ ಹೇಳಿದರೆ, ಅವರು ನಿಮಗೆ ಮೋಸ ಮಾಡಬಹುದು. ತಮ್ಮ ತಪ್ಪನ್ನು ಒಪ್ಪಿಕೊಳ್ಳದಿರುವುದು ಮತ್ತು ತಮ್ಮ ತಪ್ಪು ನಡವಳಿಕೆಯನ್ನು ಸರಿ ಎಂದು ಸಮರ್ಥಿಸಿಕೊಳ್ಳುವುದು ಕೂಡ ಮೋಸವೇ.
ನಿಮ್ಮನ್ನು ನೋಡಿಕೊಳ್ಳುವ ಬದಲು, ಪಾರ್ಟಿಗಳಲ್ಲಿ ಹೆಚ್ಚು ಸಮಯ ಕಳೆಯುವ ಪಾರ್ಟ್ನರ್ ಕೂಡ ಮೋಸ ಮಾಡಬಹುದು. ಆನಂದಿಸುವುದು ಬೇರೆ, ಜನಜಂಗುಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಬೇರೆ. ಅಂಥವರಿಂದ ದೂರವಿರಿ.
ಯಾವಾಗಲೂ ಸಿಹಿ ಮಾತುಗಳನ್ನಾಡುವವರು ಕೂಡ ಮೋಸ ಮಾಡಬಹುದು. ನಿಮ್ಮನ್ನು ಹೇಗೆ ಖುಷಿಪಡಿಸಬೇಕು ಎಂದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ನಿಮಗೆ ಬೇಸರವಾಗುವಂಥ ಸತ್ಯ ಹೇಳುವುದಿಲ್ಲ. ಅಂಥವರಿಂದಲೂ ದೂರವಿರಿ.