-->
ಶನಿವಾರ ಉಪ್ಪು ದಾನ ಮಾಡಲೂ ಬಾರದು, ಉಪ್ಪು ಖರೀದಿಸಲೂ ಬಾರದು ಏಕೆ ಗೊತ್ತಾ?

ಶನಿವಾರ ಉಪ್ಪು ದಾನ ಮಾಡಲೂ ಬಾರದು, ಉಪ್ಪು ಖರೀದಿಸಲೂ ಬಾರದು ಏಕೆ ಗೊತ್ತಾ?


ಹಿಂದೂ ಶಾಸ್ತ್ರದ ಪ್ರಕಾರ ಪ್ರತಿದಿನವೂ ಒಬ್ಬೊಬ್ಬ ದೇವರಿಗೆಂದು ಮೀಸಲಾಗಿರಿಸಲಾಗಿದೆ. ಸೋಮವಾರ ಶಿವನಿಗಾದರೆ, ಮಂಗಳವಾರ ಆಂಜನೇಯನಿಗೆ, ಶುಕ್ರವಾರ ಲಕ್ಷ್ಮಿ, ಶನಿವಾರ ವೆಂಕಟೇಶ್ವರ ಸ್ವಾಮಿ, ಶನಿವಾರ ಶನಿದೇವರಿಗೆಂದು ಒಂದೊಂದು ದಿನ ಒಂದೊಂದು ದೇವರಿಗೆಂದು ದಿನವಿದೆ. ಶನಿ ದೇವರನ್ನು ಮೆಚ್ಚಿಸಿದರೆ ಒಳ್ಳೇದಾಗುತ್ತದೆ ಎಂಬ ನಂಬಿಕೆಯಿದೆ.  ಶನಿವಾರದ ದಿನ ದಿನ ಕಪ್ಪುಬಣ್ಣದ ಬಟ್ಟೆಗಳನ್ನೇ ಧರಿಸುತ್ತಾರೆ. ಕೆಲವರು ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆ ಸಮರ್ಪಿಸುತ್ತಾರೆ. ಹೀಗೆ ಮಾಡಿದ್ದಲ್ಲಿ ಶನಿಯ ವಕ್ರದೃಷ್ಟಿ ತಪ್ಪಿದಂತಾಗಿ, ಶುಭಫಲ ದೊರಕುತ್ತದೆ ಎಂಬ ನಂಬಿಕೆಯಿದೆ. ಹಾಗಾದ್ರೆ, ಶನಿವಾರ ಉಪ್ಪು ದಾನ ಮಾಡಿದ್ರೆ ಏನಾಗುತ್ತದೆ ಎಂದು ನೋಡೋಣ…

 ಶಾಸ್ತ್ರಗಳ ಪ್ರಕಾರ, ಶನಿವಾರ ಯಾರಿಗೂ ಉಪ್ಪು ದಾನ ಮಾಡಲೇ ಬಾರದು. ಯಾರಿಗಾದ್ರೂ ಉಪ್ಪು ಕೊಟ್ಟಲ್ಲಿ ಮನೆಗೆ ನಷ್ಟ ಆಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಉಪ್ಪು ದಾನ ಮಾಡುವುದಯ ಒಳ್ಳೇದಲ್ಲ. ಉಪ್ಪು ದಾನ ಮಾತ್ರವಲ್ಲ, ಉಪ್ಪು ಕೊಳ್ಳುವುದೂ ಒಳ್ಳೇದಲ್ಲ. ಇದರಿಂದ ಅಶುಭ ಆಗುವ ಸಾಧ್ಯತೆ ಹೆಚ್ಚಂತೆ.

ತಪ್ಪಾಗಿ ಶನಿವಾರ ಯಾರಿಗಾದ್ರೂ ಉಪ್ಪು ದಾನ ಮಾಡಿದ್ರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಬರುತ್ತಂತೆ. ದುಡ್ಡು ಖರ್ಚಾಗಿ, ನಮ್ಮ ಖರ್ಚಿಗೂ ದುಡ್ಡು ಇರಲ್ಲಂತೆ.

ಆರ್ಥಿಕ ನಷ್ಟ ಮಾತ್ರ ಅಲ್ಲ, ಜೀವನದಲ್ಲಿ ಊಹಿಸದ ಸಮಸ್ಯೆಗಳು ಬರಬಹುದು. ಸಾಲಗಳು ಹೆಚ್ಚಾಗಬಹುದು. ಅದಕ್ಕೆ ಈ ತಪ್ಪು ಮಾಡ್ಬಾರದು. ಶನಿವಾರ ಉಪ್ಪು ದಾನ ಮಾಡೋದು, ಕೊಳ್ಳೋದ್ರಿಂದ ಶನಿ ದೇವರ ಕೋಪಕ್ಕೆ ಗುರಿಯಾಗ್ತೀವಿ. ಅದಕ್ಕೆ ಸಮಸ್ಯೆಗಳು ಹೆಚ್ಚಾಗುತ್ತೆ.

 



Ads on article

Advertise in articles 1

advertising articles 2

Advertise under the article