ಬಾಸ್‌ನೊಂದಿಗೆ ಮಲಗಲು ಒಪ್ಪದ ಎರಡನೇ ಪತ್ನಿಗೆ ತ್ರಿಪಲ್ ತಲಾಖ್ ಘೋಷಿಸಿದ ಟೆಕ್ಕಿ
Tuesday, December 24, 2024
ತನ್ನ ಬಾಸ್‌ನೊಂದಿಗೆ ಮಲಗಲು ಒಪ್ಪದ ಎರಡನೇ ಪತ್ನಿಗೆ ಟೆಕ್ಕಿಯೊಬ್ಬ ತ್ರಿವಳಿ ತಲಾಖ್ ನೀಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಡೆದಿದೆ.
45 ವರ್ಷದ ಟೆಕ್ಕಿ ಪಾರ್ಟಿಯೊಂದರಲ್ಲಿ ತನ್ನ ಬಾಸ್‌ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ 28 ವರ್ಷದ ತನ್ನ ಎರಡನೇ ಪತ್ನಿಗೆ ಹೇಳಿದ್ದ. ಆದರೆ ಆಕೆ ಇದಕ್ಕೆ ನಿರಾಕರಿಸಿದ್ದಾಳೆ. ಆಗ ಆಕೆಗೆ ತವರು ಮನೆಯಿಂದ 15 ಲಕ್ಷ ರೂ. ತರುವಂತೆ ಬೇಡಿಕೆ ಇಟ್ಟಿದ್ದ. ಮೊದಲ ಪತ್ನಿಯಿಂದ ಬೇರೆಯಾಗಿದ್ದು, ಆಕೆಗೆ 15 ಲಕ್ಷ ರೂಪಾಯಿ ನೀಡಲು ಎರಡನೇ ಪತ್ನಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ, ಇದಕ್ಕೂ ಆಕೆ ನಿರಾಕರಿಸಿದ್ದಾಳೆ. ಆಗ ಆತ ಸ್ಥಳದಲ್ಲೇ ತ್ರಿವಳಿ ತಲಾಖ್ ಹೇಳಿದ್ದಾನೆ. ಅಲ್ಲದೆ, ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ.
2024ರ ಜನವರಿಯಲ್ಲಿ ಟೆಕ್ಕಿ ಆಕೆಯನ್ನು ವಿವಾಹವಾಗಿದ್ದ. ಮೊದಲ ಕೆಲವು ತಿಂಗಳುಗಳ ಕಾಲ ಸಂಸಾರ ಚೆನ್ನಾಗಿಯೇ ಸಾಗಿತ್ತು. ಪರಸ್ಪರ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಟೆಕ್ಕಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಂತೆ ಸಮಸ್ಯೆಗಳು ಆರಂಭವಾಗಿದೆ. ಮೊದಲ ಪತ್ನಿಯಿಂದ ಬೇರೆಯಾದ ಹಿನ್ನೆಲೆಯಲ್ಲಿ ಆಕೆಗೆ 15 ಲಕ್ಷ ರೂ. ನೀಡಬೇಕಿತ್ತು. ಅದನ್ನು ಎರಡನೇ ಪತ್ನಿಯಿಂದ ವಸೂಲಿ ಮಾಡಲು ಟೆಕ್ಕಿ ಮುಂದಾಗಿದ್ದ. ಆದರೆ, ಅದಕ್ಕೆ ಎರಡನೇ ಪತ್ನಿ ಒಪ್ಪದಿದ್ದಾಗ ಕಾನೂನಿಗೆ ವಿರುದ್ಧವಾಗಿ ತ್ರಿವಳಿ ತಲಾಖ್ ಘೋಷಣೆ ಮಾಡಿದ್ದಾನೆ.
ತ್ರಿವಳಿ ತಲಾಖ್ ಘೋಷಣೆಯಾದ ಬಳಿಕ ಯುವತಿ ಸಂಭಾಜಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಂದಹಾಗೆ ಭಾರತದಲ್ಲಿ ತ್ರಿವಳಿ ತಲಾಖ್ 2019ರಿಂದ ಕ್ರಿಮಿನಲ್ ಅಪರಾಧವಾಗಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 115(2), 351(2), 351(3), 352 ಮಹಿಳೆಯರ ಕಾಯ್ದೆ 2019 (ಮದುವೆ ಹಕ್ಕುಗಳ ರಕ್ಷಣೆ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.