ಬೆಳಗ್ಗಿನ ಹೊತ್ತು ಬಿಸಿನೀರು ಕುಡಿದರೆ ಯಾವೆಲ್ಲಾ ರೋಗಗಳಿಗೆ ಉಪಶಮನ ಗೊತ್ತಾ?
Wednesday, December 4, 2024
ಬೆಳಗ್ಗೆ ಎದ್ದ ನಂತರ ಒಂದು ಲೋಟ ಬಿಸಿನೀರು ಕುಡಿಯುವುದು ಉತ್ತಮ. ಬೆಳಗ್ಗಿನ ಹೊತ್ತು ಬಿಸಿನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಅವುಗಳು ಯಾವುದೆಂದು ತಿಳಿಯೋಣ.
ಯಾರಾದರೂ ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಿಂದ ಜೀರ್ಣಕಾರಿ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಬಿಸಿನೀರನ್ನು ಕುಡಿದರೆ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಬಿಸಿನೀರು ದೇಹವನ್ನು ಆರೋಗ್ಯವಾಗಿಡುತ್ತದೆ. ಬೆಳಗ್ಗಿನ ಹೊತ್ತು ಬಿಸಿನೀರನ್ನು ಕುಡಿದರೆ ದೇಹದಲ್ಲಿರುವ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಇದರಿಂದ ನಾವು ಅನೇಕ ರೋಗಗಳಿಂದ ದೂರವಿರುತ್ತೇವೆ.
ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿದ್ದರೆ ಮಾತ್ರ ನಾವು ಆರೋಗ್ಯವಾಗಿರುತ್ತೇವೆ. ಬೆಳಗ್ಗೆ ಬಿಸಿನೀರು ಕುಡಿದರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಬಿಸಿನೀರು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಗ್ಗೆ ಬಿಸಿನೀರನ್ನು ಕುಡಿದರೆ ಚಯಾಪಚಯ ಹೆಚ್ಚಾಗಿ ಕೊಬ್ಬು ಕರಗುತ್ತದೆ. ಹಲವರಿಗೆ ಮಲಬದ್ಧತೆಯ ಸಮಸ್ಯೆ ಇರುತ್ತದೆ. ಆದರೆ ಈ ಸಮಸ್ಯೆಯ ಬಗ್ಗೆ ಯಾರಿಗೂ ಹೇಳಿಕೊಳ್ಳುವುದಿಲ್ಲ. ಆದರೆ ಇದರಿಂದ ಮೂಲವ್ಯಾಧಿ ಮುಂತಾದ ಸಮಸ್ಯೆಗಳು ಬರುತ್ತವೆ. ಅಂತವರು ಬಿಸಿನೀರನ್ನು ಕುಡಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಬಿಸಿನೀರು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಬೆಳಗ್ಗೆ ಬಿಸಿನೀರನ್ನು ಕುಡಿದರೆ ಒತ್ತಡವು ಬಹಳಷ್ಟು ಕಡಿಮೆಯಾಗುತ್ತದೆ.