-->
ಜನಸಂಖ್ಯೆ ಹೆಚ್ಚಳಕ್ಕೆ ಜಪಾನ್ ವಿಶೇಷ ಪ್ಲ್ಯಾನ್: ಸರಕಾರಿ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳು ಕೆಲಸ, ಉಳಿದ ದಿನ ಸರಸ

ಜನಸಂಖ್ಯೆ ಹೆಚ್ಚಳಕ್ಕೆ ಜಪಾನ್ ವಿಶೇಷ ಪ್ಲ್ಯಾನ್: ಸರಕಾರಿ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳು ಕೆಲಸ, ಉಳಿದ ದಿನ ಸರಸ


ಜಪಾನ್‌ನಲ್ಲಿ ಜನಸಂಖ್ಯೆ ತೀವ್ರ ಕುಸಿತ ಕಾಣುತ್ತಿದೆ. ಯುವ ಸಮುದಾಯಕ್ಕೆ ಸಂಸಾರದ ಹೊರೆ ಹೊರಲು  ಇಷ್ಟವಿಲ್ಲದಿರುವುದು ಹಾಗೂ ಪ್ರತಿಯೊಬ್ಬರು ಬಂಧನ ರಹಿತವಾದ ಸ್ವತಂತ್ರ ಬದುಕನ್ನು ಬಯಸುತ್ತಿರುವುದೇ ಇದಕ್ಕೆ ಕಾರಣ. ಪರಿಣಾಮ ಜಪಾನ್ ಜನಸಂಖ್ಯೆಯಲ್ಲಿ ಗಣನೀಯವಾದ ಇಳಿಕೆಯಾಗಿದ್ದು, ಅಲ್ಲಿನ ಸರ್ಕಾರಕ್ಕೆ ಇದು ಹೊಸ ತಲೆನೋವಾಗಿದೆ. ಈ ಕಾರಣಕ್ಕೆ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದರ ಮುಂದುವರೆದ ಭಾಗವಾಗಿ ಸದ್ಯ ಜಪಾನ್‌ನಲ್ಲಿ ಯುವ ಸಮುದಾಕ್ಕೆ ವಾರಕ್ಕೆ ಕೇವಲ 4 ದಿನಗಳ ಕಾಲ ಮಾತ್ರ ಕೆಲಸ ಮಾಡಿ, ಉಳಿದ ಮೂರು ದಿನಗಳು ರಜೆ ನೀಡಲು ಮುಂದಾಗಿದೆ. ಈ ಮೂಲಕ ಯುವ ಸಮೂಹ ಪ್ರೀತಿ ಮಾಡಿ ಸಂತಾನೋತ್ಪತಿ ಮಾಡಲಿ ಎಂಬುದು ಜಪಾನ್ ಸರ್ಕಾರ ಉದ್ದೇಶವಾಗಿದೆ. 

ಇತ್ತೀಚೆಗೆ ಜಪಾನ್ ಮಾತ್ರವಲ್ಲದೇ ಚೀನಾ, ರಷ್ಯಾ ಸೇರಿದಂತೆ ಹಲವು ದೇಶಗಳ ಜನಸಂಖ್ಯೆಯಲ್ಲಿ ತೀವ್ರವಾದ ಇಳಿಕೆ ಕಂಡು ಬರುತ್ತಿದೆ. ರಷ್ಯಾ ದೇಶವೂ ಜನಸಂಖ್ಯೆ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಯುವ ಸಮುದಾಯ ಪ್ರೀತಿಯಲ್ಲಿ ಬೀಳಲು ರಾತ್ರಿ 10 ಗಂಟೆಗೆಲ್ಲಾ ವಿದ್ಯುತ್ ಕಡಿತಗೊಳಿಸುವ ಪ್ಲಾನ್ ಮಾಡಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಟ್ಟಿತ್ತು. ಬಳಿಕ ಇದೀಗ ಜಪಾನ್ ದೇಶವೂ ತನ್ನ ದೇಶದಲ್ಲಿನ ಜನಸಂಖ್ಯೆಯ ಇಳಿಕೆಯಿಂದಾಗಿ ಚಿಂತೆಗೀಡಾಗಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಹೊಸ ಪ್ಲಾನ್ ಮಾಡಿದೆ.

ಈ ಯೋಜನೆ  ಜಾರಿಯಾದಲ್ಲಿ, 160,000ಕ್ಕೂ ಅಧಿಕ ಸರ್ಕಾರಿ ನೌಕರರು ವಾರಕ್ಕೆ ಮೂರು ದಿನಗಳ ರಜೆಯನ್ನು ಎಂಜಾಯ್ ಮಾಡಲಿದ್ದಾರ. ಇದರೊಂದಿಗೆ ಪ್ರಾಥಮಿಕ ಶಾಲೆಗಳಿಗೆ ಹೋಗುವ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಸಣ್ಣ ಸಂಬಳದ ಕಡಿತದ ಹೊರತಾಗಿಯೂ ಕೆಲಸದ ಅವಧಿಯನ್ನು ಕಡಿತಗೊಳಿಸಲಾಗುತ್ತಿದೆ. ಕೆಲಸದ ಸ್ಥಳದಿಂದ ಬೇಗ ಮನೆಗೆ ಹೋಗಬಹುದಾಗಿದೆ. ಈ ಬಗ್ಗೆ ಮಾತನಾಡಿರು ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ಅವರು ಹೆರಿಗೆ ಮತ್ತು ಮಗುವಿನ ಆರೈಕೆಯಂತಹ ಕರ್ತವ್ಯಗಳನನ್ನು ಸರಿಹೊಂದಿಸಲು ಕೆಲಸದ ಶೈಲಿಗಳಲ್ಲಿ ಬದಲಾವಣೆ ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಹೀಗಾಗಿ ಜಪಾನ್ ಜನ ಕೆಲಸ ಮುಖ್ಯವೋ ಅಥವಾ ಕುಟುಂಬವೋ ಎಂದು ಆಯ್ಕೆ ಮಾಡಬೇಕಾದ ಅಗತ್ಯವಿರುವುದಿಲ್ಲ. 


ಜಪಾನ್‌ನ ಫಲವತ್ತತೆ ದರವು ಜೂನ್‌ನಲ್ಲಿ ಸಾರ್ವಕಾಲಿಕ ಕನಿಷ್ಠ ಎಂದರೆ 1.2 ಶೇಕಡಾವನ್ನು ತಲುಪಿದೆ. ಕಳೆದ ವರ್ಷಗಳಲ್ಲಿ ಕೇವಲ 727 ಹಾಗೂ 277 ಜನನಗಳು ದಾಖಲಾಗಿವೆ. ಸ್ಥಿರವಾದ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು 2.1 ಶೇಕಡಾ ಫಲವತ್ತತೆ ದರದ ಅಗತ್ಯವಿದೆ. ಗವರ್ನರ್ ಕೊಯ್ಕೆ ಈ ಸವಾಲುಗಳನ್ನು ಎದುರಿಸುವಲ್ಲಿ ಟೋಕಿಯೊದ ಪಾತ್ರವನ್ನು ಒತ್ತಿ ಹೇಳಿದರು, ನಮ್ಮ ಜನರ ಜೀವನ, ಜೀವನೋಪಾಯಗಳು ಮತ್ತು ಆರ್ಥಿಕತೆಯನ್ನು ರಕ್ಷಿಸಲು ಮತ್ತು ಸುಧಾರಿಸಲು ಟೋಕಿಯೊ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. 


ಪೂರ್ವ ಏಷ್ಯಾದ ಇತರ ರಾಷ್ಟ್ರಗಳು ಕೂಡ ಇದೇ ರೀತಿಯ ಜನಸಂಖ್ಯೆಯ ಇಳಿಕೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ದಕ್ಷಿಣ ಕೊರಿಯಾವೂ ಇತ್ತೀಚೆಗೆ ತನ್ನ ದಾಖಲೆಯ ಕಡಿಮೆ ಜನನ ದರ 0.72 ಪ್ರತಿಶತವನ್ನು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಇದರ ನಡುವೆ ಚೀನಾದ ಜನನ ಪ್ರಮಾಣವು 1.18 ಪ್ರತಿಶತಕ್ಕೆ ಕುಸಿದಿದೆ. ಅಲ್ಲದೇ ಅಲ್ಲಿ ವಯಸ್ಸಾದವರ ಜನಸಂಖ್ಯೆಯೂ ಕೂಡ ಕಳವಳವನ್ನು ಉಂಟು ಮಾಡುತ್ತಿದೆ. ಹಾಗೆಯೇ ಮತ್ತೊಂದು ದೇಶ ಸಿಂಗಾಪುರ ಕೂಡ ಇತ್ತೀಚೆಗೆ ತನ್ನ ಅತ್ಯಂತ ಕಡಿಮೆ ಫಲವತ್ತತೆಯ ದರವಾದ 0.97 ಪ್ರತಿಶತ ಎಂಬುದನ್ನು ಖಚಿತಪಡಿಸಿದೆ.


Ads on article

Advertise in articles 1

advertising articles 2

Advertise under the article