-->
ಕೇವಲ 4500 ರೂ. ಸಾಲದಿಂದ ಶುರು ಮಾಡಿದ ವ್ಯಾಪಾರ ಇಂದು  ₹5539 ಕೋಟಿ ವಹಿವಾಟು

ಕೇವಲ 4500 ರೂ. ಸಾಲದಿಂದ ಶುರು ಮಾಡಿದ ವ್ಯಾಪಾರ ಇಂದು ₹5539 ಕೋಟಿ ವಹಿವಾಟು




ಕನಸುಗಳನ್ನು ನನಸು ಮಾಡಲು ದೊಡ್ಡ ಮೊತ್ತದ ಹಣ ಬೇಕಿಲ್ಲ. ದೊಡ್ಡ ಹೆಸರಿನ ಬೆಂಬಲವೂ ಬೇಕಿಲ್ಲ ಎಂಬುದನ್ನು ಗೋಪಾಲ್ ಸ್ನ್ಯಾಕ್ಸ್‌ನ ಅಧ್ಯಕ್ಷ ಬಿಪಿನ್ ಅಡ್ವಾಣಿ ಸಾಬೀತುಪಡಿಸಿದ್ದಾರೆ. 34 ವರ್ಷಗಳ ಹಿಂದೆ ಅಪ್ಪನಿಂದ 4500 ರೂ. ಸಾಲ ಪಡೆದು ಸಣ್ಣ ವ್ಯಾಪಾರ ಶುರು ಮಾಡಿದ ಅವರ ಅದೇ ವ್ಯಾಪಾರ ಇಂದು ₹5539 ಕೋಟಿ ವಹಿವಾಟಿನಷ್ಟು ಬೆಳೆದು ನಿಂತಿದೆ. ಸಣ್ಣ ಮೊತ್ತದ ಹಣದಿಂದ ದೊಡ್ಡ ಕನಸುಗಳನ್ನು ನನಸಾಗಿಸಲು ಬಯಸುವ ಪ್ರತಿಯೊಬ್ಬರಿಗೂ ಇವರ ಕಥೆ ಸ್ಫೂರ್ತಿಯಾಗಲಿದೆ.


ಸೈಕಲ್ ಮೇಲೆ ಚಿಪ್ಸ್ ಮಾರುತ್ತಿದ್ದ ತಂದೆ: 

ಬಿಪಿನ್ ಅಡ್ವಾಣಿ ಗುಜರಾತ್‌ನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು.‌ ಅವರ ತಂದೆ ಊರಿನಲ್ಲಿ ಚಿಪ್ಸ್ ಅಂಗಡಿ ಇಟ್ಕೊಂಡು, ಸೈಕಲ್‌ನಲ್ಲಿ ಚಿಪ್ಸ್ ಮಾರುತ್ತಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿದ್ದರೂ, ಪುತ್ರನ ಓದಿನೊಂದಿಗೆ ಏನಾದ್ರೂ ದೊಡ್ಡದನ್ನು ಸಾಧಿಸಬೇಕು ಅನ್ನುವುದು ಅವರ ಅಪ್ಪನ ಕನಸಾಗಿತ್ತು. ಬಿಪಿನ್ ಚಿಕ್ಕಂದಿನಿಂದಲೂ ಅಪ್ಪನ ಕೆಲಸದಲ್ಲಿ ಸಹಾಯ ಮಾಡ್ತಿದ್ರು. ಶಾಲೆಯಿಂದ ಬಂದ ಬಳಿಕ ಅಪ್ಪನೊಂದಿಗೆ ಚಿಪ್ಸ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ರು.


4500 ದಿಂದ ವ್ಯಾಪಾರ ಶುರು ಮಾಡಿದ್ದು ಹೇಗೆ?: 1990ರಲ್ಲಿ ಬಿಪಿನ್ ವ್ಯಾಪಾರ ಶುರು ಮಾಡುವುದಕ್ಕೆ ಅಪ್ಪನಿಂದ ₹4500 ಸಾಲ ಕೇಳಿದರು. ಬಿಪಿನ್ ಈ ಹಣವನ್ನು ಖರ್ಚು ಮಾಡಿ ಬರುತ್ತಾರೆ ವ್ಯಾಪಾರ ಮಾಡು ಹಠ ಬಿಡುತ್ತಾರೆ ಎಂದು ಅಪ್ಪ ಭಾವಿಸಿದ್ರು. ಆದರೆ ಬಿಪಿನ್ ಪಾಲುದಾರಿಕೆಯಲ್ಲಿ ಚಿಪ್ಸ್ ವ್ಯಾಪಾರ ಶುರು ಮಾಡಿದರು. ಆರಂಭದಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಮಾರಲು ಶುರು ಮಾಡಿದ್ರು. ತಮ್ಮ ಉತ್ಪನ್ನಗಳ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಬೇಕು ಅಂತ ನಿರ್ಧರಿಸಿದ್ರು.


ಪಾಲುದಾರಿಕೆ ಮುರಿದು, ಗೋಪಾಲ್ ಸ್ನ್ಯಾಕ್ಸ್‌ಗೆ ಅಡಿಪಾಯ: ನಾಲ್ಕು ವರ್ಷಗಳ ಬಳಿಕ, 1994ರಲ್ಲಿ, ವ್ಯಾಪಾರ ಪಾಲುದಾರಿಕೆಯನ್ನು ಮುರಿಯಲು ನಿರ್ಧರಿಸಿದರು. ಪಾಲುದಾರಿಕೆ ಮುರಿದ ಬಳಿಕ, ಬಿಪಿನ್‌ಗೆ ₹2.5 ಲಕ್ಷ ರೂ. ಪಾಲು ಸಿಕ್ತು. ಈ ಹಣದಿಂದ ಸ್ವಂತ ವ್ಯಾಪಾರ ಶುರು ಮಾಡಲು ನಿರ್ಧರಿಸಿದ್ರು. 1994ರಲ್ಲಿ ಬಿಪಿನ್ ತಮ್ಮ ಪತ್ನಿ ದಕ್ಷಾರೊಂದಿಗೆ ಸೇರಿ ಮನೆಯಿಂದಲೇ "ಗೋಪಾಲ್ ಸ್ನ್ಯಾಕ್ಸ್" ಶುರು ಮಾಡಿದ್ರು. ಇಬ್ಬರೂ ಸೇರಿ ಸಾಂಪ್ರದಾಯಿಕ ಚಿಪ್ಸ್ ತಯಾರಿಸೋಕೆ ಶುರು ಮಾಡಿದ್ರು. ಆರಂಭದ ದಿನಗಳಲ್ಲಿ ಬಿಪಿನ್ ಸೈಕಲ್ ಮೇಲೆ ಚಿಪ್ಸ್ ಮಾರುತ್ತಾ, ರಾಜ್‌ಕೋಟ್‌ನ ಬೀದಿಗಳಲ್ಲಿ ಗ್ರಾಹಕರಿಗೆ ತಮ್ಮ ಉತ್ಪನ್ನ ತಲುಪಿಸುತ್ತಿದ್ರು. ನಿಧಾನವಾಗಿ ಅವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗ್ತಾ ಹೋಯ್ತು.


ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ: ಬಿಪಿನ್ ತಮ್ಮ ಉತ್ಪನ್ನಗಳ ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಅವರು ತಯಾರಿಸಿದ ಚಿಪ್ಸ್ ಮತ್ತು ಸ್ನ್ಯಾಕ್ಸ್‌ಗಳ ಶುದ್ಧತೆ ಮತ್ತು ರುಚಿ ಗ್ರಾಹಕರ ಮನ ಗೆದ್ದಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಅವರ ಕಂಪನಿಗೆ ಉತ್ತಮ ಪ್ರತಿಕ್ರಿಯೆ ಸಿಕ್ತು. ಹೀಗಾಗಿ ಬಿಪಿನ್‌ಗೆ ಆತ್ಮವಿಶ್ವಾಸ ಹೆಚ್ಚಾಯ್ತು ಮತ್ತು ತಮ್ಮ ವ್ಯಾಪಾರವನ್ನ ವಿಸ್ತರಿಸೋಕೆ ನಿರ್ಧರಿಸಿದ್ರು.


ದೇಶಾದ್ಯಂತ ವ್ಯಾಪಾರ ವಿಸ್ತರಣೆ: ಬಿಪಿನ್ ಅಡ್ವಾಣಿ ಸಾಂಪ್ರದಾಯಿಕ ವಿಧಾನಗಳಿಂದ ಹೊರಬಂದು ಆಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನವನ್ನ ಬಳಸಿದ್ರು. ತಮ್ಮ ಉತ್ಪನ್ನಗಳನ್ನ ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಮತ್ತು ಮಾರುಕಟ್ಟೆಗೆ ಹೊಸ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡರು. ರಾಜ್‌ಕೋಟ್‌ನ ಸಣ್ಣ ಮಾರುಕಟ್ಟೆಗಳ ಜೊತೆಗೆ ಗುಜರಾತ್ ಮತ್ತು ನಂತರ ದೇಶಾದ್ಯಂತ ವ್ಯಾಪಾರವನ್ನ ವಿಸ್ತರಿಸಿದರು. ಈಗ ಗೋಪಾಲ್ ಸ್ನ್ಯಾಕ್ಸ್ ಭಾರತದ ನಾಲ್ಕನೇ ಅತಿದೊಡ್ಡ ಸಾಂಪ್ರದಾಯಿಕ ಸ್ನ್ಯಾಕ್ಸ್ ಬ್ರ್ಯಾಂಡ್. ಇಂದು ಗೋಪಾಲ್ ಸ್ನ್ಯಾಕ್ಸ್ ಉತ್ಪನ್ನಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಲಭ್ಯವಿದೆ. ಗೋಪಾಲ್ ಸ್ನ್ಯಾಕ್ಸ್‌ನ ಒಟ್ಟು ಆಸ್ತಿ ₹5539 ಕೋಟಿ.

Ads on article

Advertise in articles 1

advertising articles 2

Advertise under the article