ಈರುಳ್ಳಿ ಹೆಚ್ಚುವಾಗ ಕಣ್ಣೀರು ಬಾರದಿರಲು 5 ಸುಲಭ ಟಿಪ್ಸ್‌ಗಳು ಇಲ್ಲಿದೆ
ಈರುಳ್ಳಿ ದುಬಾರಿಯಾಗಲಿ ಅಥವಾ ಅಗ್ಗವಾಗಲಿ, ಪ್ರತಿನಿತ್ಯ ನಮ್ಮ ಅಡುಗೆಗಳಲ್ಲಿ ಅದು ಬೇಕೇ ಬೇಕಾಗುತ್ತದೆ. ಸಲಾಡ್‌ಗೆ ದುಂಡಗಿನ ಈರುಳ್ಳಿ ಬೇಕು, ಒಗ್ಗರಣೆಗೆ ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಆದರೆಇದನ್ನು ಕತ್ತರಿಸುವಾಗ ಮಾತ್ರ ಕಣ್ಣೀರು ಬಂದೇ ಬರುತ್ತದೆ. ಈರುಳ್ಳಿ ಹೆಚ್ಚುವಾಗ ನಗುತ್ತಿರುವವರ ಕಣ್ಣಲ್ಲಿಯೂ ನೀರು ತರಿಸುತ್ತದೆ. ಅದೇ ಕಾರಣಕ್ಕೆ ಬಹಳಷ್ಟು ಮಂದಿಗೆ ಈರುಳ್ಳಿ ಹೆಚ್ಚುವುದು ಬಹಳ ಕಷ್ಟದ ಕೆಲಸ. ಆದ್ದರಿಂದ ನಾವಿಂದು ನಿಮಗೆ ಕಣ್ಣೀರು ಬರದೆ ಫಾಸ್ಟ್ ಆಗಿ ಈರುಳ್ಳಿ ಹೆಚ್ಚಬಹುದಾದ 5 ಟಿಪ್ಸ್ ಗಳನ್ನು ತಿಳಿಸುತ್ತೇವೆ
ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡಿ
ಈರುಳ್ಳಿ ಹೆಚ್ಚುವ ಮೊದಲು ಅದನ್ನು ಅರ್ಧ ಗಂಟೆ ಫ್ರಿಡ್ಜ್‌ನಲ್ಲಿಟ್ಟುಬಿಡಿ. ಆಗ ತಣ್ಣನೆಯಾದ ಈರುಳ್ಳಿ ಕಣ್ಣಿನಲ್ಲಿ ನೋವು ಮತ್ತು ಕಣ್ಣೀರು ತರಿಸುವ ರಸವನ್ನು ಕಡಿಮೆ ಮಾಡುತ್ತದೆ.
ಚಾಕುವಿಗೆ ಎಣ್ಣೆಹಚ್ಚಿ
ಈರುಳ್ಳಿ ಹೆಚ್ಚುವ ಮೊದಲು ಚಾಕುವಿಗೆ ಎಣ್ಣೆ ಹಚ್ಚಿದರೆ ಕಣ್ಣೀರು ಬರುವುದಿಲ್ಲ. ಈರುಳ್ಳಿ ರಸ ಗಾಳಿಯ ಮೂಲಕ ಕಣ್ಣಿಗೆ ತಲುಪುವ ಮೊದಲು ಎಣ್ಣೆಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ಕಣ್ಣೀರು ಬರುವುದಿಲ್ಲ.
ನೀರಿನಲ್ಲಿ ಮುಳುಗಿಸಿ
ಈರುಳ್ಳಿ ಸಿಪ್ಪೆ ತೆಗೆದ ಬಳಿಕ ಅದನ್ನು ಸ್ವಲ್ಪ ಕಾಲ ನೀರಿನಲ್ಲಿ ನೆನೆಸಿಡಿ. ನೀರಿನಲ್ಲಿ ನೆನೆಸುವುದರಿಂದ ಈರುಳ್ಳಿಯ ನೋವು ಉಂಟುಮಾಡುವ ರಸ ನೀರಿನಲ್ಲಿ ತೊಳೆಯಲ್ಪಡುತ್ತದೆ. ಇದರಿಂದ ಈರುಳ್ಳಿ ಹೆಚ್ಚುವಾಗ ಕಣ್ಣಿನಲ್ಲಿ ನೋವು ಉಂಟಾಗುವುದಿಲ್ಲ.
ಮೈಕ್ರೋ ಓವನ್‌ನಲ್ಲಿ ಬಿಸಿ ಮಾಡಿ
ಈರುಳ್ಳಿ ಹೆಚ್ಚುವ ಮೊದಲು ಸ್ವಲ್ಪ ಹೊತ್ತು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವುದರಿಂದ ರಸ ಬಿಸಿಯಾಗುತ್ತದೆ ಅಥವಾ ಒಣಗುತ್ತದೆ. ಬಳಿಕ ಈರುಳ್ಳಿಯನ್ನು ತಣ್ಣಗಾಗಿಸಿ ಹೆಚ್ಚದರೆ ಮೈಕ್ರೋವೇವ್‌ನಲ್ಲಿ ಬಿಸಿಯಿಂದ ಈರುಳ್ಳಿಯ ನೋವು ಉಂಟುಮಾಡುವ ರಸ ಒಣಗುತ್ತದೆ, ಇದರಿಂದ ಹೆಚ್ಚುವಾಗ ಕಣ್ಣೀರು ಬರುವುದಿಲ್ಲ.
ಚಾಕುವಿಗೆ ನಿಂಬೆರಸ ಹಚ್ಚಿ
ಈರುಳ್ಳಿ ರಸದಲ್ಲಿರುವ ಕಿಣ್ವ ಕಣ್ಣಿನಲ್ಲಿ ನೋವು ಉಂಟುಮಾಡುತ್ತದೆ. ಆದ್ದರಿಂದ ಚಾಕುವಿಗೆ ಸ್ವಲ್ಪ ನಿಂಬೆ ರಸ ಹಚ್ಚಿದರೆ ಕಿಣ್ವವನ್ನು ಕಣ್ಣು ಮತ್ತು ಮೂಗಿಗೆ ತಲುಪದಂತೆ ತಡೆಯುತ್ತದೆ, ಇದರಿಂದ ನಿಮ್ಮ ಕಣ್ಣಿನಲ್ಲಿ ನೋವು ಮತ್ತು ಕಣ್ಣೀರು ಬರುವುದಿಲ್ಲ.
ವಿಶೇಷ ಟಿಪ್ಸ್ ಸಲಾಡ್‌ಗೆ ಈರುಳ್ಳಿ ಹೆಚ್ಚುತ್ತಿದ್ದರೆ, ಈರುಳ್ಳಿ ಸಿಪ್ಪೆ ತೆಗೆದು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಹಾಕಿ ಹೆಚ್ಚಿ. ಇದರಿಂದ ಈರುಳ್ಳಿಯ ರುಚಿ ಮತ್ತು ಗರಿಗರಿಯಾದ ಸ್ವಭಾವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಮತ್ತು ಹೆಚ್ಚುವಾಗ ಕಣ್ಣೀರು ಬರುವುದಿಲ್ಲ.