ಮಂಗಳೂರು: ಮಸಾಜ್ ಸೆಂಟರ್‌ಗೆ ದಾಳಿ ನಡೆಸಿದ ರಾಮಸೇನೆಯ ಪ್ರಸಾದ್ ಅತ್ತಾವರ ಅರೆಸ್ಟ್
Thursday, January 23, 2025
ಮಂಗಳೂರು: ನಗರದ ಬಿಜೈ ಕೆಎಸ್ಆರ್‌ಟಿಸಿ ಬಳಿ ಕಾರ್ಯಾಚರಿಸುತ್ತಿರುವ ಕಲರ್ಸ್ ಮಸಾಜ್ ಸೆಂಟರ್‌ಗೆ ದಾಳಿ ನಡೆಸಿ ಗಾಜು ಪೀಠೋಪಕರಣ ಧ್ವಂಸಗೈದ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಸಿಸಿಬಿ ಪೊಲೀಸರು ಆತನ ಮನೆಯಿಂದಲೇ ಬಂಧಿಸಿ ಕರೆದೊಯ್ದಿದ್ದಾರೆ.
ಗುರುವಾರ ಮಧ್ಯಾಹ್ನ ವೇಳೆಗೆ ರಾಮಸೇನೆ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ದಾಳಿ ನಡೆಸಿದ್ದರು. ಘಟನೆ ನಡೆದು 2-3ಗಂಟೆಗಳಲ್ಲಿ ಮಂಗಳೂರಿನ ಕುಡುಪು ಬಳಿಯ ಪ್ರಸಾದ್ ಅತ್ತಾವರನ ನಿವಾಸಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆತ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಬಂಧಿಸಿ ಕರೆದೊಯ್ದಿದ್ದಾರೆ.
ಈ ವೇಳೆ ಮಸಾಜ್ ಸೆಂಟರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದಾಗಿ ಹೇಳಿದ್ದು, ಆದ್ದರಿಂದ ನಮ್ಮ ಕಾರ್ಯಕರ್ತರೇ ದಾಳಿ ನಡೆಸಿದ್ದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿದ್ದಾರೆ. ಪ್ರಸಾದ್ ಅತ್ತಾವರ ಮನೆಯಲ್ಲಿ ಉಳಿದ ಕಾರ್ಯಕರ್ತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.