ದ.ಕ ಜಿಲ್ಲಾ ಕಾಂಗ್ರೆಸ್ ಮುಂದಿನ ಅಧ್ಯಕ್ಷರು ಯಾರು?
ದ. ಕ ಜಿಲ್ಲೆಯ ಕಾಂಗ್ರೆಸ್ ಗೆ ಮುಂದಿನ ಅಧ್ಯಕ್ಷರು ಯಾರು ಎಂಬ ಬಗ್ಗೆ ಇದೀಗ ಕೈ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆಗಳು ಶುರುವಾಗಿದೆ
ನೂತನ ಆಯ್ಕೆ ಅಧ್ಯಕ್ಷರ ನೇಮಕಾತಿಗೆ ಪಟ್ಟಿಯನ್ನು ಕಳುಹಿಸಲು ಕೆಪಿಸಿಸಿ ಸೂಚಿಸಿದ್ದು, ಜಿಲ್ಲಾ ನಾಯಕರ ಅಭಿಪ್ರಾಯ ಕೇಳಿದ ಹಿನ್ನೆಲೆಯಲ್ಲಿ ಕೋರ್ ಕಮೀಟಿ ಸಭೆ ಇಂದು ನಡೆಯಿತು.
ಕೆಪಿಸಿಸಿ ಪಟ್ಟಿಯಲ್ಲಿ, ಶಶಿಧರ ಹೆಗ್ಡೆ, ಪದ್ಮರಾಜ್, ಎಂ ಜಿ ಹೆಗಡೆ , ಹೇಮನಾಥ ಶೆಟ್ಟಿ, ಎಂ ಎಸ್ ಮೊಹಮ್ಮದ್ ಹಾಗೂ ಮಹಿಳೆಯರಲ್ಲಿ ಮಮತಾ ಗಟ್ಟಿ, ಪ್ರತಿಭಾ ಕುಳಾಯಿ ಸೇರಿದಂತೆ ಬಹುತೇಕ ಹೊಸ ಮುಖಗಳ ಹೆಸರುಗಳು ಇದ್ದವೆಂದೂ ತಿಳಿದುಬಂದಿದೆ.
ಇದೀಗ ಕೋರ್ ಕಮೀಟಿ ಸಭೆಯಲ್ಲಿ ಐವಾನ್ ಡಿ ಸೋಜಾ ತನಗೇ ಜಿಲ್ಲಾಧ್ಯಕ್ಷ ಸ್ಥಾನ ಬೇಕು ಎಂದೂ, ರಮಾನಾಥ ರೈ ಅವರು ಪ್ರಥ್ವಿರಾಜ್ ಹೆಸರನ್ನೂ, ಮಿಥುನ್ ರೈ ತನಗೇ ಬೇಕೆಂದೂ, ಇನಾಯಿತ್ ಆಲಿ ಪ್ರಥ್ವಿರಾಜ್ ಅಥವಾ ಪದ್ಮರಾಜರ ಹೆಸರನ್ನು ಹೇಳಿದ್ದಾರೆಂದೂ ತಿಳಿದು ಬಂದಿದೆ. ಉಳಿದಂತೆ ನಾಯಕರು ತಟಸ್ಥರಾಗಿದ್ದರೆಂದೂ ಮೂಲಗಳು ತಿಳಿಸಿವೆ.
ಇದೀಗ ಐವಾನ್ ಡಿ ಸೋಜಾ ಮತ್ತು ಮಿಥುನ್ ರೈ ಗುಂಪು ರಂಗಕ್ಕಿಳಿದಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಒಳಜಗಳ ತಾರಕಕ್ಕೇರುವ ಸಾಧ್ಯತೆ ಇದೆ. ಈ ನಡುವೆ ಮಂಜುನಾಥ ಭಂಡಾರಿ ಶತಾಯಗತಾಯ ಹರೀಶ್ ಕುಮಾರರನ್ನೇ ಮುಂದುವರಿಸಲು ಮಲ್ಲಿಕಾರ್ಜುನ ಖರ್ಗೆ ಬಳಿ ಪ್ರಯತ್ನ ಮುಂದುವರಿಸಿದ್ದಾರೆ ಎಂದೂ ಕಾಂಗ್ರೆಸ್ ಮೂಲಗಳು ತಿಳಿಸಿವೆ