-->
ಸುಳ್ಯ: ಮದ್ಯದ ಮತ್ತಲ್ಲಿ ಗುಂಡು ಹಾರಿಸಿ ಪತ್ನಿಯ ಹತ್ಯೆ- ರಬ್ಬರ್ ಆಸಿಡ್ ಸೇವಿಸಿ ಪತಿ ಆತ್ಮಹತ್ಯೆ

ಸುಳ್ಯ: ಮದ್ಯದ ಮತ್ತಲ್ಲಿ ಗುಂಡು ಹಾರಿಸಿ ಪತ್ನಿಯ ಹತ್ಯೆ- ರಬ್ಬರ್ ಆಸಿಡ್ ಸೇವಿಸಿ ಪತಿ ಆತ್ಮಹತ್ಯೆ


ಮಂಗಳೂರು: ಗುಂಡು‌ ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿದ ಪತಿ ರಬ್ಬರ್ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ‌ ಘಟನೆ ಸುಳ್ಯ ತಾಲೂಕಿನ  ಕೆಮ್ರಾಜೆ ಗ್ರಾಮದ ಕೋಡಿಮಜಲುವಿನಲ್ಲಿ ನಡೆದಿದೆ.

ವಿನೋದ ಕೊಲೆಯಾದ ಪತ್ನಿ. ರಾಮಚಂದ್ರ ಗೌಡ ಆತ್ಮಹತ್ಯೆ ಮಾಡಿಕೊಂಡ‌ ಪತಿ. ಈ ಬಗ್ಗೆ ಪುತ್ರ ಪ್ರಶಾಂತ್ ಎಸ್ ಆರ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.


ರಾಮಚಂದ್ರ ಗೌಡರವರು ಮದ್ಯವ್ಯಸನಿಯಾಗಿದ್ದರು. ಎಂದಿನಂತೆ ವಿಪರೀತ ಮದ್ಯಪಾನ ಮಾಡಿ ಜ.17 ರಂದು  ರಾತ್ರಿ ಮನೆಗೆ ಬಂದಿದ್ದಾರೆ. ರಾತ್ರಿ 11:30ರ ವೇಳೆಗೆ ನಿರ್ಮಾಣ ಹಂತದಲ್ಲಿರುವ ಮನೆಯ ಅಡುಗೆ ಕೋಣೆಯೊಳಗೆ ಹೋಗಿದ್ದಾರೆ. ಅಲ್ಲಿ ಪತ್ನಿ ವಿನೋದ ಕುಮಾರಿಯರವರೊಂದಿಗೆ ಜಗಳ ಮಾಡಿ, ಕೈಯಲ್ಲಿದ್ದ  ಕೋವಿಯಿಂದ ಗುಂಡು ಹಾರಿಸಿದ್ದಾರೆ. ಇದರಿಂದ ತೀವ್ರತರವಾದ ಗಾಯಗೊಂಡ ವಿನೋದ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇದರಿಂದ ಮನನೊಂದ ರಾಮಚಂದ್ರ ಗೌಡ ಅವರು ಬಳಿಕ ರಬ್ಬರ್ ಆಸಿಡ್  ಕುಡಿದು ಮೃತಪಟ್ಟಿದ್ದಾರೆ. 

ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪೊಲೀಸ್ ಠಾಣಾ ಅ.ಕ್ರ: 09/2025 ಕಲಂ:  103BNS2023 ಕಲಂ25.27 ಆರ್ಮ್ಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ .

Ads on article

Advertise in articles 1

advertising articles 2

Advertise under the article