ಮೊಟ್ಟೆಯೊಂದಿಗೆ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ಸೇವಿಸಲೇಬಾರದು
Friday, January 3, 2025
ಮೊಟ್ಟೆ ಬಹಳ ಮಂದಿಯ ನೆಚ್ಚಿನ ಆಹಾರವಾಗಿದೆ. ಮೊಟ್ಟೆ ಕೇವಲ ರುಚಿಗೆ ಮಾತ್ರವಲ್ಲ, ಇದರಲ್ಲಿ ಸಾಕಷ್ಟು ಪ್ರೊಟೀನ್, ಜೀವಸತ್ವಗಳು ಮತ್ತು ಖನಿಜಗಳಿವೆ. ತೂಕ ನಷ್ಟ ಮಾಡಲು ಹಾಗೂ ಸ್ನಾಯುಗಳ ಬೆಳವಣಿಗೆಗೆ ಮೊಟ್ಟೆ ಸಹಕಾರಿ. ಅಲ್ಲದೆ, ಮೆದುಳಿನ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಮೊಟ್ಟೆಯ ವೈಶಿಷ್ಟ್ಯವೆಂದರೆ ಇವುಗಳನ್ನು ತುಂಬಾ ಸುಲಭವಾಗಿ ಬೇಯಿಸಬಹುದು.
ಮಾಂಸ ತಿನ್ನುವಾಗ ಮೊಟ್ಟೆ ತಿನ್ನುವುದನ್ನು ತಪ್ಪಿಸಿ
ಪ್ರತಿನಿತ್ಯ ಒಂದು ಮೊಟ್ಟೆ ತಿಂದರೆ ಅನೇಕ ರೋಗಗಳಿಂದ ದೂರ ಇರಬಹುದು. ಆದರೆ, ಮೊಟ್ಟೆಗಳನ್ನು ಸೇವಿಸುವಾಗ ನಾವು ಕೆಲವು ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು. ಕೆಲವೊಂದು ಆಹಾರ ಸೇವಿಸುವಾಗ ಯಾವುದೇ ಕಾರಣಕ್ಕೂ ಮೊಟ್ಟೆಗಳನ್ನು ತಿನ್ನಬಾರದು ಎಂದು ಆರೋಗ್ಯ ತಜ್ಞರು ಸಲಹೆ ಕೊಡುತ್ತಾರೆ. ಆ ಆಹಾರಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಉಪ್ಪಿನಕಾಯಿ ತಿನ್ನುವುದನ್ನು ತಪ್ಪಿಸಿ
ಮೊಟ್ಟೆ ಸೇವಿಸುವಾಗ ಉಪ್ಪಿನಕಾಯಿ ಸೇವಿಸಬಾರದು. ಏಕೆಂದರೆ ಉಪ್ಪಿನಕಾಯಿಯಲ್ಲಿನ ಆಗ್ಲೀಯತೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನಾವು ತಿನ್ನುವ ಮೊಟ್ಟೆಯು ಜೀರ್ಣವಾಗಲು ಬಹಳ ಸಮಯ ತೆಗೆದುಕೊಂಡಾಗ, ಕೆಲವು ಹೊಟ್ಟೆಯ ಅಸ್ವಸ್ಥತೆಯನ್ನು ಅನುಭವಿಸಬೇಕಾಗುತ್ತದೆ. ಅದೇ ರೀತಿ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳಾದ ಕಿತ್ತಳೆ ಮತ್ತು ನಿಂಬೆಹಣ್ಣುಗಳನ್ನು ಮೊಟ್ಟೆಗಳೊಂದಿಗೆ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಈ ಹಣ್ಣುಗಳಲ್ಲಿಯೂ ಆಮ್ಮಿಯ ಅಂಶ ಇರುತ್ತದೆ.
ಚಹಾ ಮತ್ತು ಕಾಫಿ
ಚಹಾದಲ್ಲಿರುವ ಟ್ಯಾನಿನ್ ಮತ್ತು ಕಾಫಿಯಲ್ಲಿರುವ ಕೆಫೀನ್ ಮೊಟ್ಟೆಗಳಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಅಲ್ಲದೆ, ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತವೆ. ಕೆಲವು ಜನರು ಹೊಟ್ಟೆ ನೋವು ಅನುಭವಿಸಬಹುದು. ಆದ್ದರಿಂದ ಮೊಟ್ಟೆ ತಿಂದ ಕೂಡಲೇ ಟೀ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಬೇಕು.
ಸೋಯಾಮಿಲ್ಕ್
ಸೋಯಾ ಹಾಲಿನಲ್ಲಿರುವ ಪ್ರೊಟೀನ್‌ಗಳು ಮೊಟ್ಟೆಯಲ್ಲಿ ಕಂಡುಬರುವ ಪೋಷಕಾಂಶಗಳ ಜೀರ್ಣಕ್ರಿಯೆಯನ್ನು ತಡೆಯುತ್ತದೆ. ಇದು ಕರುಳಿನ ಕ್ರಿಯೆಯ ಮೇಲೂ ಪರಿಣಾಮ ಬೀರಬಹುದು.
ಮೀನು ಮತ್ತು ಮೊಟ್ಟೆ
ಮೀನು ಹಾಗೂ ಮೊಟ್ಟೆಯನ್ನು ಒಟ್ಟಿಗೆ ಸೇವಿಸುವುದರಿಂದ ಕೆಲವರಿಗೆ ತೊಂದರೆ ಉಂಟಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಇವೆರಡೂ ವಿಭಿನ್ನ ರೀತಿಯ ಜೀರ್ಣಕ್ರಿಯೆಯ ಪ್ರಕ್ರಿಯೆಗಳನ್ನು ಹೊಂದಿವೆ. ಆದ್ದರಿಂದ, ನೀವು ಹೊಟ್ಟೆಯ ಅಸ್ವಸ್ಥತೆಯನ್ನು ಅನುಭವಿಸಬಹುದು.
ಚೀಸ್
ಮೊಟ್ಟೆ ಮತ್ತು ಚೀಸ್‌ನಲ್ಲಿ ಪ್ರೋಟೀನ್ ಮತ್ತು ಕೊಬ್ಬಿನಾಂಶ ಅಧಿಕವಾಗಿರುತ್ತದೆ. ಆದ್ದರಿಂದ ನೀವು ಎರಡನ್ನೂ ಸಂಯೋಜಿಸಿದಾಗ, ಆಹಾರವು ಭಾರವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಮತ್ತು ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು.
ಮಾಂಸ ತಿನ್ನುವಾಗ ಮೊಟ್ಟೆಗಳನ್ನು ತಪ್ಪಿಸಿ
ಈ ಎರಡು ಆಹಾರ ಪದಾರ್ಥಗಳು ಮಾಂಸಪ್ರಿಯರ ಫೇವರಿಟ್ ಎಂಬುದು ಎಲ್ಲರಿಗೂ ತಿಳಿದಿದೆ. ಬಹುತೇಕರು ಇವೆರಡನ್ನು ಒಟ್ಟಿಗೆ ಸೇವಿಸುತ್ತಾರೆ. ಆದರೆ, ಮೊಟ್ಟೆ ಮತ್ತು ಮಾಂಸವನ್ನು ಒಟ್ಟೆಗೆ ತಿನ್ನಬಾರದು. ಏಕೆಂದರೆ, ಈ ಎರಡು ಪದಾರ್ಥಗಳಲ್ಲಿ ಪ್ರೋಟಿನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ನಿಮ್ಮ ಹೊಟ್ಟೆಗೆ ಭಾರದ ಅನುಭವವಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನೀವು ಮೊದಲು ಮಿತ ಪ್ರಮಾಣದ ಪ್ರೋಟಿನ್ ಆಹಾರ ಸೇವಿಸಿ, ಆ ಬಳಿಕ ಮಾಂಸ ಸೇವಿಸಬೇಕು.