ಇ.ಡಿ. ಸೋಗಿನಲ್ಲಿ ಲಕ್ಷಾಂತರ ಲೂಟಿ: ಸುಲೈಮಾನ್ ಹಾಜಿ ಮನೆಗೆ ಫೇಕ್ ದಾಳಿ ನಡೆಸಿದವರ ಪತ್ತೆಗೆ ಖಾದರ್ ಒತ್ತಾಯ
ಇ.ಡಿ. ಸೋಗಿನಲ್ಲಿ ಲಕ್ಷಾಂತರ ಲೂಟಿ: ಸುಲೈಮಾನ್ ಹಾಜಿ ಮನೆಗೆ ಫೇಕ್ ದಾಳಿ ನಡೆಸಿದವರ ಪತ್ತೆಗೆ ಖಾದರ್ ಒತ್ತಾಯ
ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಸುಲೈಮಾನ್ ಹಾಜಿ ಮನೆಗೆ ದಾಳಿ ನಡೆಸಿದ ಲಕ್ಷಾಂತರ ರೂಪಾಯಿ ಲೂಟಿ ನಡೆಸಿದ ಘಟನೆ ಕರಾವಳಿಯಲ್ಲಿ ನಡೆದಿದೆ. ಈ ಪ್ರಕರಣದ ಬಗ್ಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಆರೋಪಿಗಳ ಪತ್ತೆ ಹಚ್ಚಲು ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಉದ್ಯಮಿ ಸಿಂಗಾರಿ ಬೀಡಿ ಇದರ ಮಾಲೀಕರಾದ ಸುಲೈಮಾನ್ ಹಾಜಿ ಅವರ ಮನೆಗೆ ಕಳೆದ ರಾತ್ರಿ ಸರಿಸುಮಾರು 8:30 ಕ್ಕೆ ತಮಿಳುನಾಡು ನೋಂದಣಿ ಸಂಖ್ಯೆ ಇನ್ನೋವಾ ಕಾರ್ ನಲ್ಲಿ ಬಂದ ಖದೀಮರು ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಮನೆಯಲ್ಲಿದ್ದ ಹಣ ಮೊಬೈಲ್ ಹಾಗೂ ದಾಖಲೆ ಪತ್ರವನ್ನು ದೋಚಿ ಪರಾರಿಯಾದ ಘಟನೆ ನಡೆದಿದ್ದು ಸಭಾಧ್ಯಕ್ಷ ಯು ಟಿ ಖಾದರ್ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಗೃಹ ಇಲಾಖೆಯ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಶೀಘ್ರ ಪತ್ತೆಗೆ ಕ್ರಮ ಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಅದರಂತೆ ಗೃಹ ಇಲಾಖೆ ಡಿ ವೈ ಎಸ್ ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸುಲೈಮಾನ್ ಹಾಜಿ ಹಾಗೂ ಕುಟುಂಬಸ್ಥರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಧೈರ್ಯ ತುಂಬಿ ಧೃತಿಗೆಡದಂತೆ ತಿಳಿಸಿದ್ದು ಖದೀಮರು ಶೀಘ್ರ ಬಂಧನವಾಗುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.