ಸತತ ಐದನೇ ದಿನವೂ ಏರಿಕೆ ಕಂಡ ಚಿನ್ನದ ಬೆಲೆ: ಸದ್ಯ ಎಷ್ಟಿದೆ ಗೊತ್ತಾ ದರ
Tuesday, January 14, 2025
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಸೋಮವಾರ 110 ರೂಪಾಯಿಗೆ ಏರಿಕೆಯಾಗಿದೆ. ಶೇ. 99.9ರಷ್ಟು ಶುದ್ಧ ಚಿನ್ನದ ಬೆಲೆ ಶುಕ್ರವಾರ 10ಗ್ರಾಂಗೆ 80,550 ರೂ. ಇದ್ದದ್ದು ಸೋಮವಾರ 80,660 ರೂಪಾಯಿಗೆ ಏರಿಕೆಯಾಗಿದೆ.
ಕಳೆದ ಐದು ವಹಿವಾಟಿನ ದಿನಗಳಲ್ಲಿ ಚಿನ್ನದ ಬೆಲೆ ಶೇಕಡಾ 2.1ರಷ್ಟು ಅಂದರೆ 1,660 ರೂ. ಏರಿಕೆಯಾದಂತಾಗಿದೆ. ಶೇ. 99.5ರಷ್ಟು ಶುದ್ಧ ಚಿನ್ನದ ಬೆಲೆಯು ಶುಕ್ರವಾರ 10 ಗ್ರಾಂಗೆ 80,150 ರೂ. ಇದ್ದದ್ದು ಸೋಮವಾರ 80,260 ರೂ.ಗೆ ಏರಿದೆ. ಬೆಳ್ಳಿಯ ದರವು ಸೋಮವಾರ ಕೆಜಿಗೆ 93 ಸಾವಿರ ರೂ. ಇತ್ತು ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ.