ವೈರಲ್ ಆಯ್ತು ಸಂಕ್ರಾಂತಿಗೆ ಊರಿಗೆ ಹೊರಟ ಮನೆ ಮಾಲೀಕ ಕಳ್ಳನಿಗೆಂದು ಬರೆದ ಪತ್ರ - ಲೆಟರ್ನಲ್ಲಿ ಏನು ಬರೆದಿದೆ ಗೊತ್ತೇ?
ಹೈದರಾಬಾದ್: ದೂರದೂರುಗಳಲ್ಲಿ ಕೆಲಸ ಮಾಡುವವರು ಹಬ್ಬ-ಹರಿದಿನಗಳೆಂದರೆ ಊರಿಗೆ ಹೋಗುವುದು ಸಾಮಾನ್ಯ. ಈ ವೇಳೆ ಮಾಲೀಕರಿಲ್ಲದ ಮನೆಯನ್ನು ಗಮನಿಸಿ ಕಳ್ಳರು ದರೋಡೆ ಮಾಡಲು ಕಾಯುತ್ತಿರುತ್ತಾರೆ. ಆದರೆ ಕಳ್ಳರಿಗೆಂದೇ ಮನೆ ಮಾಲೀಕನೊಬ್ಬ ವಿಶೇಷ ಪತ್ರವೊಂದನ್ನು ಬರೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸಂಕ್ರಾಂತಿ ಸಂಭ್ರಮದ ಆಚರಣೆಯೊಂದಿಗೆ ಬುದ್ಧಿವಂತಿಕೆ ಉಪಯೋಗಿಸಿರುವ ಮನೆ ಮಾಲೀಕ, ಹಬ್ಬದ ದಿನಗಳಂದು ತನ್ನ ಮನೆಗೆ ಕನ್ನ ಹಾಕುವ ವ್ಯರ್ಥ ಪ್ರಯತ್ನ ನಡೆಸದಂತೆ ಕೈ ಬರಹದ ಲೆಟರ್ವೊಂದನ್ನು ಬರೆದು ಮನೆಯ ಮುಂದೆ ಅಂಟಿಸಿದ್ದಾರೆ. ಈ ಮೂಲಕ ಕಳ್ಳರು ಹಣ ಒಡವೆ ಆಸೆಗೆ ವ್ಯರ್ಥ ಪ್ರಯತ್ನ ನಡೆಸದಂತೆ ಕಿವಿಮಾತನ್ನೂ ಕೂಡಾ ಹೇಳಲಾಗಿದೆ.
ಮನೆ ಅಂಟಿಸಿದ ಪತ್ರದಲ್ಲೇನಿದೆ? "ನಾವು ಸಂಕ್ರಾಂತಿಗೆಗೆ ಊರಿಗೆ ಹೋಗುತ್ತಿದ್ದೇವೆ. ಹೋಗುವಾಗ ಮನೆಯಲ್ಲಿದ್ದ ಆಭರಣ ಮತ್ತು ಹಣವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದೇವೆ.
ಆದ್ದರಿಂದ ನಮ್ಮ ಮನೆಗೆ ಬರಬೇಡಿ, ನಿಮ್ಮ ಹಿತೈಷಿ'' ಎಂದು ಬರೆಯಲಾಗಿದೆ. ಈ ಪತ್ರದ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.
ಈ ರೀತಿಯ ವಿಚಿತ್ರ ಪತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳಿರುವವರ ಮನೆಗಳನ್ನೇ ಗುರುತಿಸಿ, ಕೈ ಚಳಕ ತೋರುವ ಖದೀಮರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕನ ಚಾಲಕಿತನ ಪ್ರಶಂಸಗೆ ಅರ್ಹವಾಗಿದೆ. ಇದು ಕಳ್ಳರಿಗೆ ಸೂಚನೆ ನೀಡುವುದರೊಂದಿಗೆ ಮನೆ ಮಾಲೀಕರು ಕೂಡ ಕಳ್ಳರು ಎಣಿಸಿದಂತೆ ದಡ್ಡರಾಗಿರುವುದಿಲ್ಲ ಎಂಬುದನ್ನು ಸಾರಿದೆ.
ಇನ್ನು ಕಳ್ಳನೊಂದಿಗೆಯೇ ನೇರವಾಗಿ ಪತ್ರದ ಮೂಲಕ ಸಂಭಾಷಣೆಗೆ ಮುಂದಾದ ಮನೆ ಮಾಲೀಕನ ಈ ಕ್ರಿಯೆ ಹಾಸ್ಯಕ್ಕೆ ಮುಂದಾದರೂ, ಇದರ ಗಂಭೀರ ಆಲೋಚನೆಗೆ ಮೆಚ್ಚಲೇಬೇಕು ಎಂಬ ಮಾತುಗಳು ಕೇಳಿ ಬಂದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿರುವ ಈ ಪತ್ರ ಮನೆ ಮಾಲೀಕನೊಬ್ಬನ ಸರಿಯಾದ ಮುನ್ನೆಚ್ಚರಿಕೆಯ ಭದ್ರತೆಯಾಗಿದೆ. ಈ ರೀತಿಯ ಪ್ರಯತ್ನಗಳ ಮೂಲಕ ನೆರೆ ಹೊರೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ನಡುವೆ ತಮ್ಮ ಅಗೈರಿನಲ್ಲೂ ಭದ್ರತೆ ಏರ್ಪಾಡು ಮಾಡಿಕೊಳ್ಳುವ ಬುದ್ದಿವಂತಿಕೆ ಕ್ರಮವಾಗಿದೆ.