ಆಂಧ್ರಪ್ರದೇಶದ ಹುಡುಗ, ಮಧ್ಯಪ್ರದೇಶದ ಹುಡುಗಿ ಓಯೋ ರೂಮ್ನಲ್ಲಿಯೇ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ರು- ಜೋಡಿ ಕೆಲಸಕ್ಕೇ ಪೊಲೀಸರೇ ಶಾಕ್
Monday, January 20, 2025
ಈ ಅಂತಾರಾಜ್ಯ ಪ್ರೇಮಜೋಡಿಯ ಐಷಾರಾಮಿ ಜೀವನಕ್ಕೆ ತೆಗೆದುಕೊಂಡ ನಿರ್ಧಾರ ಕಂಬಿ ಹಿಂದೆ ಹೋಗುವಂತೆ ಮಾಡಿದೆ. ಈ ಪ್ರೇಮಿಗಳ ತಲೆಗೆ ಹಣಗಳಿಸುವ ಐಡಿಯಾ ಬರುತ್ತದೆ. ಸಿಕ್ಕಾಪಟ್ಟೆ ಹಣ ಸಂಪಾದಿಸಿ ಐಷಾರಾಮಿ ಜೀವನ ಸಾಗಿಸೋಣ ಅನ್ನೋದು ಇವರ ಐಡಿಯಾ ಆಗಿರುತ್ತದೆ. ಅದಕ್ಕಾಗಿ ದೊಡ್ಡ ಪ್ಲಾನ್ ಮಾಡಿ ಗಾಂಜಾ ವ್ಯಾಪಾರ ಶುರುಮಾಡಿದರು.
ಅದಕ್ಕಾಗಿ ಜೋಡಿ ಪೊಲೀಸರ ಕೈಗೆ ಸಿಗದೇ ಇರಲು ಓಯೋ ರೂಮ್ನಲ್ಲಿ ಉಳಿದುಕೊಳ್ಳುವ ಪ್ಲಾನ್ ಮಾಡುತ್ತಾರೆ. ಅಲ್ಲಿಂದಲೇ ಗಾಂಜಾ ದಂಧೆ ಆರಂಭಿಸಿದ್ದಾರೆ. ಕೊನೆಗೆ ಇದರ ಸುಳಿವು ತಿಳಿದ ಪೊಲೀಸರು ಪ್ರಕರಣ ಭೇದಿಸಿದೆ. ಈ ಬೆಚ್ಚಿಬೀಳಿಸುವ ಘಟನೆ ಹೈದರಾಬಾದ್ ನಗರದ ಕೊಂಡಾಪುರದ ಓಯೋ ರೂಮ್ಸ್ ನಡೆದಿದೆ. ಸದ್ಯ ಯುವಕ ಹಾಗೂ ಯುವತಿಯನ್ನು ಎಸ್ಟಿಎಫ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆ ಕವಾಲಿಯ ದೇವೆಂದೂಲ ರಾಜು (25) ಮಧ್ಯಪ್ರದೇಶದ ಸಂಜನಾ ಮಂಜ (18) ಕೆಲ ಸಮಯಗಳ ಹಿಂದೆ ಭೇಟಿಯಾಗಿದ್ದರು. ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಹೇಗಾದರೂ ಹಣ ಗಳಿಸುವ ಸಲುವಾಗಿ, ಒಯೋ ರೂಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು.
ಕೊಂಡಾಪುರದ ಓಯೋ ರೂಂನಲ್ಲಿ ತಂಗಿದ್ದು ಕೆಲ ದಿನಗಳಿಂದ ಗಾಂಜಾ ದಂಧೆ ನಡೆಸುತ್ತಿದ್ದರು.
ಇವರ ದಂಧೆಯ ಬಗ್ಗೆ ಮಾಹಿತಿ ಪಡೆದ ಎಸ್ಟಿಎಫ್ ತಂಡ ತಪಾಸಣೆ ನಡೆಸಿ ಶುಕ್ರವಾರ ರಾತ್ರಿ ದಾಳಿ ನಡೆಸಿದೆ. ಇಬ್ಬರೂ ಬೇರೆಬೇರೆ ಕಡೆಯಿಂದ ಗಾಂಜಾ ತಂದು ಓಯೋ ಕೊಠಡಿಯಿಂದಲೇ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.