ಒಂದು ಕಾಲದ ಹಾಟ್ ನಟಿ ಈಗ ಸಂನ್ಯಾಸಿನಿ- ಯಾರೀ ನಟಿ ಗೊತ್ತಾ?
Saturday, January 25, 2025
ಪ್ರಯಾಗ್‌ರಾಜ್: ಸದ್ಯ ನಡೆಯುತ್ತಿರುವ ಮಹಾಕುಂಭಮೇಳವು ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದೆ. ಪ್ರತಿನಿತ್ಯ ಕೋಟ್ಯಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದು, ಹೊಸ ದಾಖಲೆಯನ್ನೇ ಬರೆದಿದೆ. ಪ್ರಮುಖವಾಗಿ ನಾಗಾಸಾಧುಗಳು ಹಾಗೂ ವಿದೇಶಿಗರು ಹೆಚ್ಚು ಗಮನವನ್ನು ಸೆಳೆಯುತ್ತಿದ್ದು, ಖ್ಯಾತ ನಟ-ನಟಿಯರು, ಉನ್ನತ ಹುದ್ದೆಯಲ್ಲಿರುವವರೂ ಸನ್ಯಾಸತ್ವವನ್ನು ಸ್ವೀಕರಿಸಿರುವ ವಿಚಾರ ಬೆಳಕಿಗೆ ಬರುತಿದೆ. ಸದ್ಯ ಒಂದು ಕಾಲದಲ್ಲಿ ನಾಯಕ ನಟಿಯಾಗಿ ಹಾಟ್ ಬೆಡಗಿಯಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಮಮತಾ ಕುಲಕರ್ಣಿ ಆಧ್ಯಾತ್ಮದತ್ತ ಒಲವು ತೋರಿದದು, ಈ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ.
90ರ ದಶಕದಲ್ಲಿ ತಮ್ಮ ಮೋಹಕ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು ಮಮತಾ ಕುಲಕರ್ಣಿ. ಸದ್ಯ ಅವರು ಮಹಾಕುಂಭಮೇಳದಲ್ಲಿ ಸನ್ಯಾಸಿನಿಯಾಗಿ ಕಾಣಿಸಿಕೊಂಡಿದ್ದು, ಇವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಿಲಾಗಿದೆ.
90ರ ದಶಕದಲ್ಲಿ ವಿಷ್ಣುವರ್ಧನ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದ ವಿಷ್ಣು ವಿಜಯ ಸಿನಿಮಾದಲ್ಲಿ ಮಮತಾ ಕುಲಕರ್ಣಿ ನಟಿಸಿದ್ದರು. ಹಿಂದಿಯಲ್ಲಿ ವಕ್ತ ಹಮಾರಾ ಹೈ, ಕ್ರಾಂತಿವೀರ್, ಕರಣ್ ಅರ್ಜುನ್, ಸಬ್ಬೆ ಬಡಾ ಕಿಲಾಡಿ, ಆಂದೋಲನ್, ಚೈನಾ ಗೇಟ್ ಸೇರಿದಂತೆ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಇದೀಗ ಆಧ್ಯಾತ್ಮದತ್ತ ಒಲವು ತೋರಿದ್ದು, ಈ ವಿಚಾರ ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ನಟಿ ಮಮತಾ ಕುಲಕರ್ಣಿ 90ರ ದಶಕದಲ್ಲಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ್ದರು. 1993ರಲ್ಲಿ ನಟಿ ಮ್ಯಾಗಜಿನ್ ಒಂದರ ಕವರ್‌ಪೇಜ್ ಗೆ ಟಾಪ್ ಲೆಸ್ ಆಗಿ ಪೋಸ್ ನೀಡುವ ಮೂಲಕ ಸುದ್ದಿಯಾಗಿದ್ದರು. ಇದಾದ ಬಳಿಕ ನಟಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯು ಬಿಟೌನ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
2016ರಲ್ಲಿ ನಟಿ ಮಮತಾ ಹಾಗೂ ಅವರ ಪತಿ ವಿಕ್ಕಿ ಗೋಸ್ವಾಮಿ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಆರೋಪವೂ ಕೇಳಿ ಬಂದಿತ್ತು. 2024ರಲ್ಲಿ ವಿದೇಶದಿಂದ ಭಾರತಕ್ಕೆ ಮರಳಿದ ಮಮತಾ ಕುಲಕರ್ಣಿ ಸಿನಿಮಾ ಅಥವಾ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರು ಮಾತ್ರ ಯಾವುದರಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮಹಾಕುಂಭಮೇಳದಲ್ಲಿ ಸನ್ಯಾಸತ್ವ ಪಡೆಯುವ ಮೂಲಕ ನಟಿ ಸುದ್ದಿಯಾಗಿದ್ದಾರೆ.
ಯಾವುದು ಈ ಕಿನ್ನರ ಅಖಾಡ?
ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘ. 2015ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಿಸಿಕೊಂಡಿದೆ. ಇದೊಂದು ರೀತಿಯ ಧಾರ್ಮಿಕ ಸ್ಥಾನವಾಗಿದ್ದು ಜನವರಿ 24ರಂದು ಪಿಂಡ ಪ್ರಧಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಮತಾ ಕುಲಕರ್ಣಿ ಅವರಿಂದ ಮಾಡಿಸಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿಯನ್ನಾಗಿ ಮಾಡಲಾಯಿತು.