ಮಂಗಳೂರು: ಮಸಾಜ್ ಸೆಂಟರ್‌ಗೆ ಶ್ರೀರಾಮಸೇನೆ ದಾಳಿ- ಪೀಠೋಪಕರಣ, ಗಾಜು ಪುಡಿ
Thursday, January 23, 2025
ಮಂಗಳೂರು: ನಗರದ ಬಿಜೈ ಬಳಿಯ ಮಸಾಜ್ ಸೆಂಟರ್‌ವೊಂದಕ್ಕೆ ದಾಳಿ ನಡೆಸಿದ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಗಾಜು, ಪೀಠೋಪಕರಣವನ್ನು ಪುಡಿಗೈದಿರುವ ಘಟನೆ ಗುರುವಾರ ನಡೆದಿದೆ.
ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್‌ಗೆ ಶ್ರೀರಾಮಸೇನಾ ಸಂಘಟನೆ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ದಾಳಿ ನಡೆದಿದೆ. ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮಸೇನಾ ಸಂಘಟನೆ ದಾಳಿ ನಡೆಸಿ ಪೀಠೋಪಕರಣ ಹಾಗೂ ಗಾಜುಗಳನ್ನು ಧ್ವಂಸಗೈದಿದೆ. ಈ ವೇಳೆ ಮಂಗಳೂರು ನಗರದಾದ್ಯಂತ ಕಾರ್ಯಾಚರಿಸುತ್ತಿರುವ ಮಸಾಜ್ ಸೆಂಟರ್‌ಗಳನ್ನು ಮುಚ್ಚುವಂತೆ ಶ್ರೀರಾಮಸೇನಾ ಸಂಘಟನೆ ಆಗ್ರಹಿಸಿದೆ.