ಹಿಂದೂ ಧರ್ಮೀಯನೆಂದು ಸುಳ್ಳು ಹೇಳಿ ಮದುವೆಯಾದ ಶಫಿ ಅಹ್ಮದ್‌ನಿಂದ ಲಕ್ಷ್ಮಿಗೆ ಮತಾಂತರವಾಗಲು ಕಿರುಕುಳ- ಠಾಣೆ ಮೆಟ್ಟಿಲೇರಿದ ಪತ್ನಿ
ಹುಬ್ಬಳ್ಳಿ: 10 ವರ್ಷಗಳ ಹಿಂದೆ ತಾನು ಹಿಂದೂ ಧರ್ಮದವನು, ಹೆಸರು ಅನಿಲ್ ಎಂದು ಲಕ್ಷ್ಮಿ ಎಂಬ ಯುವತಿಯನ್ನು ಪ್ರೀತಿಸಿದ ಶಫೀ ಅಹ್ಮದ್ ಎಂಬಾತ ಆಕೆಯನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಮದುವೆ ಆಗಿದ್ದಾನೆ. ಮನೆಯವರ ಒಪ್ಪಿಗೆ ಪಡೆಯಲು ಮತ್ತೊಮ್ಮೆ ಅದ್ಧೂರಿಯಾಗಿ ಮದುವೆಯಾದ ಶಫೀ ಅಹ್ಮದ್ ಇದೀಗ ಬಲವಂತದಿಂದ ತನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾನೆ ಎಂದು ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಶಫಿ ಪತ್ನಿ ದೂರು ನೀಡಿದ್ದಾಳೆ.
ಹೌದು, ಹುಬ್ಬಳ್ಳಿಯ ಯುವತಿ ಮಹಾಲಕ್ಷ್ಮೀ ತನ್ನ ಪತಿ ಅಹ್ಮದ್ ತನ್ನನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದಾನಸ. ಇದಕ್ಕಾಗಿ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿಗಳಾದ ದಂಪತಿಯ ಪೈಕಿ ಪತಿ ಶಫಿ ಅಹ್ಮದ್ ಕರ್ನೂಲ್ ವಿರುದ್ಧ, ಪತ್ನಿ ಮಹಾಲಕ್ಷ್ಮೀ ವಯ್ಯಾಪುರಿ ಅವರು ಆರೋಪ ಮಾಡಿದ್ದಾಳೆ.
ತಾನು ಹಿಂದೂ ಧರ್ಮದವನು, ನನ್ನ ಹೆಸರು ಅನಿಲ್ ಎಂದು ಲಕ್ಷ್ಮಿಯನ್ನು ಶಫೀ ಅಹ್ಮದ್ ಪ್ರೀತಿ ಮಾಡಿದ್ದಾನೆ. ಬಳಿಕ, ಮದುವೆ ಮಾಡಿಕೊಳ್ಳುವಂತೆ ಯುವತಿ ಕೇಳಿದಾಗ ತಾನು ಇಸ್ಲಾಂ ಧರ್ಮದವನು ಎಂದು ಹೇಳಿದ್ದಾರೆ. ಒಮ್ಮೆ ಪ್ರೀತಿ ಮಾಡಿದ ಬಳಿಕ ಯಾವುದೇ ಜಾತಿ-ಧರ್ಮ ಆಗಿದ್ದರೂ ಸರಿ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿದ ಲಕ್ಷ್ಮೀ ಅವರನ್ನು ಶಫೀ ಅಹಮದ್ 2014-15ರಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾಳೆ. ನಂತರ ಕಳೆದ 2017ರಲ್ಲಿ ಮನೆಯವರ ಒಪ್ಪಿಗೆ ಮೇರೆಗೆ ಅಧೀಕೃತವಾಗಿ ಲಕ್ಷ್ಮೀ ಹಾಗೂ ಶಫಿ ಅಹ್ಮದ್ ಕರ್ನೂಲ್ ಮದುವೆ ಮಾಡಿಕೊಂಡಿದ್ದಾರೆ.
ಶಫಿ ಅಹ್ಮದ್ ಕರ್ನೂಲ್ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಜನತಾ ಕಾಲನಿ ನಿವಾಸಿ. ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲನಿಯ ನಿವಾಸಿ ಮಹಾಲಕ್ಷ್ಮೀ ವಯ್ಯಾಪುರಿ. ಈತ ತನಗೆ ಸುಳ್ಳು ಹೇಳಿ ಪ್ರೀತಿಸಿ ಮದುವೆಯಾಗಿದ್ದಾನೆ. ಮದುವೆಯಾದ ಬಳಿಕ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದಾನೆ. ಆದ್ದರಿಂದ ಆತನ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಹುಬ್ಬಳ್ಳಿ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಪತಿ ಶಫಿ ಅಹ್ಮದ್‌ನ ಮತಾಂತರ ಕಿರುಕುಳದಿಂದ ಮುಕ್ತಿ ಕೊಡಿಸಬೇಕು ಲಕ್ಷ್ಮೀ ಆಗ್ರಹಿಸಿದ್ದಾಳೆ.